ಕುರುಡು ಖಗೋಳ ಯಾತ್ರಿ ಜೊತೆ ಮಾತುಕತೆ : ಒಂದು ಗಿಬ್ರಾನ್ ಪದ್ಯ

ದೇವಸ್ಥಾನದ ನೆರಳಲ್ಲಿ
ಒಬ್ಬಂಟಿಯಾಗಿ ಕುಳಿತಿದ್ದ ಕುರುಡನೊಬ್ಬ
ನಮ್ಮ ಕಣ್ಣಿಗೆ ಬಿದ್ದ.

ಅಗೋ ಅಲ್ಲಿ ನೋಡು 
ಈ ನೆಲದ ಅತ್ಯಂತ ದೊಡ್ಡ ಜ್ಞಾನಿಯನ್ನು

ಗೆಳೆಯ ಉತ್ಸಾಹದಿಂದ ಕೂಗಿಕೊಂಡ.

ಗೆಳೆಯನನ್ನು ಹಿಂದೆ ಬಿಟ್ಟು 
ನಾನು ಕುರುಡನ ಹತ್ತಿರ ಹೋದೆ,
ಬಹಳ ಹೊತ್ತು ನಾವು ಅದು, ಇದು ಮಾತನಾಡಿದೆವು.

ಯಾವತ್ತಿನಿಂದ ನಿನಗೆ ಈ ಕುರುಡು?

ನಾನು ಹುಟ್ಟು ಕುರುಡ ಸ್ವಾಮಿ

ಎಷ್ಟು ಮೋಹಕವಾಗಿದೆ ನಿನ್ನ ಮಾತು 
ಯಾವ ಜ್ಞಾನದ ಮಾರ್ಗ ನಿನ್ನದು?

ನಾನೊಬ್ಬ ಖಗೋಳ ಯಾತ್ರಿ

ಆತ, ತನ್ನ ಕೈ ಎದೆ ಮೇಲೆ ಇಟ್ಟುಕೊಂಡು ಹೇಳಿದ,

ಹೀಗೆ ನಾನು ಹಲವಾರು
ಸೂರ್ಯ, ಚಂದ್ರ, ನಕ್ಷತ್ರಗಳ ಜೊತೆ 
ಹೆಜ್ಜೆ ಹಾಕುತ್ತೇನೆ .

~ ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ

Leave a Reply