ಪತ್ರ ಬರೆಯೋದಕ್ಕೂ ಕಾಲಿನ ಗಾಯಕ್ಕೂ ಏನು ಸಂಬಂಧ!? : Tea time story

Mullaಒಮ್ಮೆ ಒಬ್ಬ ಅನಕ್ಷರಸ್ತ, ಮುಲ್ಲಾ ನಸೃದ್ದೀನನ ಬಳಿ ಬಂದು ತನ್ನ ಹೆಂಡತಿಗೆ ಒಂದು ಪತ್ರ ಬರೆದುಕೊಡುವಂತೆ ವಿನಂತಿಸಿಕೊಂಡ.

ದಯವಿಟ್ಟು ಕ್ಷಮಿಸು, ಪತ್ರ ಬರೆದುಕೊಡಲು ಆಗುತ್ತಿಲ್ಲ. ನಾಲ್ಕೈದು ದಿನಗಳಿಂದ ನನ್ನ ಕಾಲಿಗೆ ಗಾಯವಾಗಿದೆ, ಒಂದು ಹಜ್ಜೆ ನಡೆಯಲೂ ಆಗುತ್ತಿಲ್ಲ. ಮುಲ್ಲಾ ನಸೃದ್ದೀನ ತನ್ನ ಸಮಸ್ಯೆ ಹೇಳಿಕೊಂಡ.

ಕೈಯಿಂದ ತಾನೆ ಪತ್ರ ಬರೆಯೋದು? ಕಾಲಿಗೆ ಆದ ಗಾಯಕ್ಕೂ ಪತ್ರ ಬರೆದುಕೊಡುವುದಕ್ಕೂ ಏನು ಸಂಬಂಧ ? ಆ ಅನಕ್ಷರಸ್ತ ಆಶ್ಚರ್ಯದಿಂದ ಪ್ರಶ್ನಿಸಿದ.

ಖಂಡಿತ ಸಂಬಂಧ ಇದೆ, ನನ್ನ ಹಸ್ತಾಕ್ಷರ ನನ್ನನ್ನು ಬಿಟ್ಟು ಬೇರಾರಿಗೂ ಅರ್ಥ ಆಗಲ್ಲ. ಹಿಂದೆ ಹೀಗೆ ಪತ್ರ ಬರೆದು ಕೊಟ್ಟಾಗ ನಾನೇ ಅವರಿದ್ದಲ್ಲಿಗೆ ಹೋಗಿ, ಪತ್ರ ಓದಿ, ವಿಷಯ ತಿಳಿಸಿ ಬರುತ್ತಿದ್ದೆ. ಈಗ ಕಾಲಿಗೆ ನೋವಾಗಿರುವುದರಿಂದ ನಾನು ಪತ್ರ ಬರೆದುಕೊಟ್ಟರೂ ನಿನಗೆ ಪ್ರಯೋಜನ ವಿಲ್ಲ. ಮುಲ್ಲಾ ಉತ್ತರಿಸಿದ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply