ಮಂಗಳವಾರ ಗಣಪತಿ ಸ್ಮರಣೆಗೆ ಶ್ರೇಷ್ಠವೆಂದು ಹೇಳಲಾಗಿದೆ. ಅಂಗಾರಕ ಸಂಕಷ್ಟಿ ವ್ರತಗಳಲ್ಲೆ ಅತ್ಯಂತ ಶ್ರೇಷ್ಠ. ಉಳಿದಂತೆ ಮಂಗಳವಾರ ಗಣಪನ ಪೂಜೆ ಫಲದಾಯಕವೆಂದು ಆಸ್ತಿಕರ ನಂಬಿಕೆ…
|| ಓಂ ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ ಭಕ್ತವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ ||
ಪ್ರಥಮಂ ವಕ್ರತುಂಡಂಚ ಏಕದಂತಮಂ ದ್ವಿತೀಯಕಂ
ತೃತೀಯಂ ಕೃಷ್ಣ ಪಿಂಗಾಕ್ಷಂ, ಗಜವಕ್ತ್ರಂ ಚತುರ್ಥಕಂ
ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ
ಸಪ್ತಮಂ ವಿಘ್ನ ರಾಜಂ ಚ ಧೂಮ್ರವರ್ಣಂ ತಥಾಷ್ಟಕಂ
ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಂ
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಂ |
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ
ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರೀಂ ಪ್ರಭೋ ||
ಭಾವಾರ್ಥ : ಗೌರೀಪುತ್ರನಾದ ವಿನಾಯಕನಿಗೆ ನಾನು ಶಿರಬಾಗಿ ನಮಿಸುತ್ತೇನೆ. ಹೇ ದೇವ! ಪ್ರತಿನಿತ್ಯ ನಿನ್ನ ಸ್ಮರಣೆ ಮಾಡುವುದರಿಂದ ಆಯುಷ್ಯ ವೃದ್ಧಿಯೊಡನೆ ಸಕಲ ಇಷ್ಟಾರ್ಥಗಳೂ ನೆರವೇರುತ್ತವೆ.
ವಕ್ರತುಂಡ, ಏಕದಂತ, ಕೃಷ್ಣ ಪಿಂಗಾಕ್ಷ, ಗಜವಕ್ತ್ರ, ಲಂಬೋದರ, ವಿಕಟ, ವಿಘ್ನರಾಜ, ಧೂಮ್ರವರ್ಣ, ಫಾಲಚಂದ್ರ, ವಿನಾಯಕ, ಗಣಪತಿ, ಗಜಾನನ ಎಂಬ ಸಕಲ ಸನ್ಮಂಗಳ ಉಂಟುಮಾಡುವ 12 ಹೆಸರುಗಳನ್ನು ನಾನು ತ್ರಿಕರಣಪೂರ್ವಕವಾಗಿ ತ್ರಿಸಂಧ್ಯಾ ಕಾಲದಲ್ಲೂ ಸ್ಮರಿಸುತ್ತೇನೆ. ಇದರಿಂದ ವಿಘ್ನ ಭಯ ನಿವಾರಣೆಯಾಗಿ, ಸರ್ವಸಿದ್ಧಿ ಲಭಿಸುವುದು.