ಆಶ್ವೀಜದ ಚತುರ್ದಶಿಯಂದು ‘ಅಭ್ಯಂಜನ ಸ್ನಾನ’. ಈ ದಿನ ಯಾಕೆ ನರಕ ತ್ರಯೋದಶಿ ಅನ್ನುವ ಕಥೆಯನ್ನು ನಾಳೆಯೇ ಓದೋಣ.
ಮರುದಿನದ ಅಭ್ಯಂಗಕ್ಕಾಗಿ ತ್ರಯೋದಶಿ ಸಂಜೆ ನೀರು ತುಂಬುವ ಸಂಭ್ರಮವೇ ಈ ದಿನದ ಹಬ್ಬ.
ಇಂದು ಸಂಜೆ ಕೆಲವರ ಮನೆಗಳಲ್ಲಿ ‘ನೀರು ತುಂಬುವ ಹಬ್ಬ’ ಆಚರಿಸಲಾಗುತ್ತದೆ ಅಲ್ಲವೆ?
ಹಿಂದೆಲ್ಲಾ ಹಂಡೆಗಳು, ತೊಟ್ಟಿಗಳು ಇರುತ್ತಿದ್ದವು. ಈಗ ಮನೆಯ ಮೇಲೆ ಸಿಂಟೆಕ್ಸ್, ಬಚ್ಚಲಿನಲ್ಲಿ ನಲ್ಲಿ ಇದೆ. ಹಾಗಂತ ಹಬ್ಬವನ್ನು ಅಟ್ಟ ಹತ್ತಿಸಲಾದೀತೆ? ಖಂಡಿತ ಇಲ್ಲ!
ಹಾಗೆಂದೇ ನಮ್ಮ ಅಮ್ಮಂದಿರು ನಲ್ಲಿ – ಪೈಪುಗಳಿಗೆಲ್ಲ ಕಾವಿ – ಸುಣ್ಣದ ಪಟ್ಟಿ ಎಳೆದು, ಹಿಂಡ್ಲಚ್ಚಿ ಬಳ್ಳಿ ಸುತ್ತಿ ಅಲಂಕಾರ ಮಾಡುತ್ತಾರೆ.
ಆಶ್ವೀಜದ ಚತುರ್ದಶಿಯಂದು ‘ಅಭ್ಯಂಜನ’ ಸ್ನಾನ. ಈ ದಿನ ಯಾಕೆ ನರಕ ತ್ರಯೋದಶಿ ಅನ್ನುವ ಕಥೆಯನ್ನು ನಾಳೆಯೇ ಓದೋಣ.
ಮರುದಿನದ ಅಭ್ಯಂಗಕ್ಕಾಗಿ ತ್ರಯೋದಶಿ ಸಂಜೆ ನೀರು ತುಂಬುವ ಸಂಭ್ರಮವೇ ಈ ದಿನದ ಹಬ್ಬ. ಈ ದಿನ ಮನೆಯ ದಕ್ಷಿಣ ಭಾಗದಲ್ಲಿ ಜೋಡಿ ಎಳ್ಳಿನೆಣ್ಣೆ ದೀಪ ಹಚ್ಚಿ, ಆ ದಿಕ್ಕಿಗೆ ದಿನಕ್ಕೆ ಅಭಿಮಾನಿಯಾದ ‘ಯಮ ದೇವ’ ನನ್ನು ಸ್ಮರಿಸಿ ಪ್ರಾರ್ಥನೆ ಮಾಡುವುದು ರೂಢಿ.
ಈ ಪ್ರಾರ್ಥನಾ ಶ್ಲೋಕ ಹೀಗಿದೆ:
‘ಮೃತ್ಯುನಾ ಪಾಶದಂಡಾಭ್ಯಾಂ ಕಾಲಃ
ಶ್ಯಾಮಲಯಾ ಸ | ತ್ರಯೋದಶ್ಯಾಂ
ದೀಪದಾನಾತ್ ಸೂರ್ಯಜಃ
ಪ್ರಿಯತಾಂ ಮಮ ||
ಮೃತ್ಯುಭಯ ನಿವಾರಣೆಗಾಗಿ ಯಮನನ್ನು ಪ್ರಾರ್ಥಿಸಿ, ದೀಪದಾನ ನೀಡುತ್ತೇನೆ ಅನ್ನುವುದು ಈ ಶ್ಲೋಕದ ಸಾರಾಂಶ.
ನಂತರ ಹಂಡೆಗೆ (ಅಥವಾ ಏನಿದೆಯೋ ಅದಕ್ಕೆ) ನೀರು ತುಂಬಿಸಿ, ಅದನ್ನು ಪೂಜಿಸಬೇಕು.
ಈ ಆಚರಣೆಯ ಫಲಾಫಲಗಳ ಚಿಂತೆ ಬಿಟ್ಟು, ಹಬ್ಬದ ಸಂಭ್ರಮವನ್ನು ಆಚರಿಸುವುದು ಮುಖ್ಯ.
ನೀರು ತುಂಬಿ, ಪೂಜಿಸುವ ಪ್ರಕ್ರಿಯೆ ನಮ್ಮಲ್ಲಿ ನೀರಿನ ಬಗ್ಗೆ ಪ್ರೀತಿಯನ್ನೂ ಕೃತಜ್ಞತಾ ಭಾವವನ್ನೂ ಕಾಳಜಿಯನ್ನೂ ಮೂಡಿಸಲಿ.
ಹಳೆ ಹಬ್ಬಕ್ಕೆ ಹೊಸ ಅರ್ಥಗಳು ಸಂಭ್ರಮವನ್ನು ಕಾಯ್ದಿಡಲು ಉತ್ತಮ ಉಪಾಯ ಅಲ್ಲವೆ?