ಕಷ್ಟ ಕಾಲದಲ್ಲಿ ತನಗೆ ಸಹಾಯ ಮಾಡಿದ ಮುಲ್ಲಾ ನಸೃದ್ದೀನ್ ಗೆ ಸತ್ಕಾರ ಮಾಡಬೇಕೆಂದು ಸುಲ್ತಾನ ಅವನನ್ನು ರಾಜ ದರ್ಬಾರಕ್ಕೆ ಆಹ್ವಾನಿಸಿದ.
ರಾಜ ಸಭೆಯಲ್ಲಿ ಸುಲ್ತಾನ, “ ನಿನಗೇನು ಬೇಕು? ಹೇಳು ” ಎಂದು ನಸೃದ್ದೀನನ್ನ ಕೇಳಿಕೊಂಡ.
“ 1000 ಬಂಗಾರದ ನಾಣ್ಯ ಕೊಟ್ಟರೆ ಸಾಕು” ಮುಲ್ಲಾ ತನ್ನ ಬೇಡಿಕೆ ಮಂಡಿಸಿದ.
ಸುಲ್ತಾನನಿಗೆ ಮುಲ್ಲಾನ ಈ ಬೇಡಿಕೆ ಕೇಳಿ ಆಶ್ಚರ್ಯವಾಯ್ತು. “ ನಸೃದ್ದೀನ 1000 ಬಂಗಾರದ ನಾಣ್ಯ ತುಂಬ ಹೆಚ್ಚಾಯಿತಲ್ಲವೆ ನಿನ್ನ ಬೇಡಿಕೆ? ಸ್ವಲ್ಲ ಕಡಿಮೆ ಮಾಡಿಕೋ” ಸುಲ್ತಾನ ಕೇಳಿಕೊಂಡ.
“ ಆಯಿತು ಸುಲ್ತಾನರೆ, 5 ಬಂಗಾರದ ನಾಣ್ಯ ಕೊಡಿ ಹಾಗಾದರೆ ” ಮಲ್ಲಾ ತನ್ನ ಮರು ಬೇಡಿಕೆಯನ್ನು ಮಂಡಿಸಿದ.
ಸುಲ್ತಾನನಿಗೆ ಮತ್ತೆ ಆಶ್ಚರ್ಯವಾಯಿತು. “ ನಸೃದ್ದೀನ, ಒಮ್ಮೆ 1000 ನಾಣ್ಯ ಕೇಳುತ್ತೀಯ ಇನ್ನೊಮ್ಮೆ 5 ಬಂಗಾರದ ನಾಣ್ಯ ಸಾಕು ಎನ್ನುತ್ತೀಯ? ಈ ಅಂತರ ಬಹಳ ಆಯಿತಲ್ಲವೆ?”
ಮುಲ್ಲಾ ನಸೃದ್ದೀನ ಉತ್ತರಿಸಿದ
“ ನಿಜ ಸುಲ್ತಾನರೇ, ಈ ಅಂತರ ಬಹಳ ಜಾಸ್ತಿ. ಆದರೆ ನಾನೇನು ಮಾಡಲಿ “ 1000 ಬಂಗಾರದ ನಾಣ್ಯ ನಿಮ್ಮ ಯೋಗ್ಯತೆ, 5 ಬಂಗಾರದ ನಾಣ್ಯ ನನ್ನ ಯೋಗ್ಯತೆ “.
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)