ಪ್ರೇಮದಲ್ಲಿ ಇರುವುದೆಲ್ಲ ಇಷ್ಟೇ…. : ಒಂದು ರೂಮಿ ಪದ್ಯ

ಮೂಲ : ಸೂಫಿ ಜಲಾಲುದ್ದಿನ್ ರೂಮಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ಪ್ರೇಮದಲ್ಲಿ
ಇದು ಹೀಗೇ ಎಂದು ಹೇಳುವ ನಿಯಮಗಳಿಲ್ಲ,
ಯಾರು ಹೆಚ್ಚು ಪ್ರೇಮಿಸುತ್ತಾರೆ
ಯಾರು ಕಡಿಮೆ ಎನ್ನುವ ಸಂಶಯಗಳಿಲ್ಲ,
ಯಾರು ಉನ್ಮತ್ತರು, ಯಾರು ಸ್ಥಿತಪ್ರಜ್ಞರು 
ಎನ್ನುವ ತಮಾಷೆಗಳಿಲ್ಲ.

ಪ್ರೇಮದಲ್ಲಿ,
ಶಾಸ್ತ್ರಗಳನ್ನು ಬಾಯಿಪಾಠ ಮಾಡಿ 
ಒಪ್ಪಿಸುವ ಜಾಣತನವಿಲ್ಲ,
ಗುರುಗಳಿಲ್ಲ, ಶಿಷ್ಯರಿಲ್ಲ,

ಇರುವುದೆಲ್ಲ, ಕೇವಲ 
ತುಂಟ ಕಾಲೆಳೆದಾಟ, 
ಅರ್ಥಗಳಿಲ್ಲದ ಆಟಗಳು
ಹೊಟ್ಟೆ ತುಂಬ ನಗು ಮತ್ತು
ಮೈದುಂಬಿ ಕುಣಿತ.

 

Leave a Reply