ಧರ್ಮ ಎಲ್ಲರಿಗೂ ಪ್ರತ್ಯೇಕವೇ, ಆದರೆ ಜಗತ್ತಿಗೆಲ್ಲಾ ಒಂದು

 ಧರ್ಮ ಎಂಬುದನ್ನು ಕೇವಲ ಮತಾಚಾರಗಳು ಅಥವಾ ನಿರ್ದಿಷ್ಟ ಕಟ್ಟುಪಾಡುಗಳ ಒಂದು ಸಂಚಯ ಎಂದು ಹೇಳುವುದರಲ್ಲೇ ಅಧಾರ್ಮಿಕತೆಯಿದೆ…. ~ ಅಚಿಂತ್ಯ ಚೈತನ್ಯ

ರ್ಮ ಎಂದರೇನು?
ಮಾಧ್ಯಮಗಳೆಲ್ಲವೂ ಧರ್ಮದ ಚರ್ಚೆಯಿಂದ ತುಂಬಿರುವ ಈ ಹೊತ್ತಿನಲ್ಲಿ ಈ ಪ್ರಶ್ನೆಯನ್ನು ಕೇಳಿದರೆ ಯಾವುದಾದರೊಂದು ಮತ -ಧರ್ಮ ಅಥವಾ ಇಂಗ್ಲಿಷ್‌ನ ರಿಲಿಜನ್ ಎಂಬ ಪದಕ್ಕಿರುವ ಅರ್ಥದಲ್ಲಿ ನಮಗೆ ಉತ್ತರ ದೊರೆಯುತ್ತದೆ. ಧರ್ಮ ಎಂಬುದನ್ನು ಕೇವಲ ಮತಾಚಾರಗಳು ಅಥವಾ ನಿರ್ದಿಷ್ಟ ಕಟ್ಟುಪಾಡುಗಳ ಒಂದು ಸಂಚಯ ಎಂದು ಹೇಳುವುದರಲ್ಲಿ ಅಧಾರ್ಮಿಕತೆಯಿದೆ.

ಹಾಗಿದ್ದರೆ ಧರ್ಮವೆಂದರೇನು?
ಧರ್ಮ ಎಂಬ ಪದದ ಸರಳ ಅರ್ಥವನ್ನು ಗ್ರಹಿಸಿದರೂ ಇದಕ್ಕೆ ಉತ್ತರ ಸಿಗುತ್ತದೆ. ಆದರೆ ನಾವು ಸರಳ ಅರ್ಥದ ಆಚೆಗೆ ಹೋಗಿ ಅದರ ಗೂಢಾರ್ಥಗಳನ್ನೂ ಸಂಕೇತಾರ್ಥಗಳನ್ನೂ ಹುಡುಕಿ, ಧರ್ಮವೆಂದರೆ ‘ನಮಗೆ ಪ್ರತ್ಯೇಕ ಧರ್ಮ ಬೇಕು’ ಎಂಬ ರಾಜಕೀಯ ಘೋಷಣೆಯಾಗಿಸಿಬಿಟ್ಟಿದ್ದೇವೆ.
ವರ್ತಮಾನದ ಒತ್ತಡಗಳು ನಮ್ಮ ಮೇಲೆ ಹೇರಿರುವ ಮಿತಿಗಳನ್ನು ಮೀರಿ ಒಮ್ಮೆ ಧರ್ಮ ಎಂದರೇನು ಎಂದು ಆಲೋಚಿಸಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ. ನಮ್ಮೆಲ್ಲರ ಧರ್ಮವೂ ಪ್ರತ್ಯೇಕವೇ. ಮನುಷ್ಯನಿಗೆ ಆತ ಮಾನವನಾಗಿರುವ ಕಾರಣಕ್ಕೆ ಇರುವ ಮಾನವ ಧರ್ಮ ಒಂದಾದರೆ, ಅವನೊಬ್ಬ ವ್ಯಕ್ತಿಯಾಗಿ ಅನುಸರಿಸಬೇಕಾದ ವ್ಯಕ್ತಿ ಧರ್ಮ ಮತ್ತೊಂದು.

ಒಬ್ಬ ಸಾಮಾಜಿಕನಾಗಿ ಬದುಕಬೇಕಾದರೆ ಕೆಲವು ವಿಧಿ-ನಿಷೇಧಗಳ ಪರಿಧಿಯಲ್ಲಿ ಬದುಕಬೇಕಾಗುತ್ತದೆ. ರಸ್ತೆಯಲ್ಲಿ ವಾಹನ ಚಲಾಯಿಸಬೇಕೆಂದರೆ ಒಂದು ಚಾಲನಾ ಲೈಸೆನ್ಸ್ ಬೇಕಾಗುತ್ತದೆ. ಇದನ್ನು ಪಡೆಯಲು ವಾಹನ ಚಾಲನೆಯ ನಿಯಮಗಳನ್ನು ತಿಳಿದಿರಬೇಕಾಗುತ್ತದೆ. ಟ್ರಾಫಿಕ್ ಸಿಗ್ನಲ್‌ಗಳ ಅರ್ಥವನ್ನು ಅರಿತಿರಬೇಕಾಗುತ್ತದೆ. ಅಷ್ಟೇ ಅಲ್ಲ, ರಸ್ತೆಯಲ್ಲಿ ಸಾಗುವ ಇತರ ಚಾಲಕರಿಗೆ ಸಂವಹನ ನಡೆಸಲು ಅಗತ್ಯವಿರುವ ಭಾಷೆಯನ್ನು ಅರಿತಿರಬೇಕಾಗುತ್ತದೆ. ಉದಾಹರಣೆಗೆ; ಎಡಕ್ಕೆ ತಿರುಗಿಸುವಾಗ ಹೇಗೆ ಕೈ ಸಂಜ್ಞೆ ಮಾಡಬೇಕು, ಅಥವಾ ಇಂಡಿಕೇಟರ್‌ಗಳನ್ನು ಹಾಕಬೇಕು. ಈ ಎಲ್ಲವೂ ಒಟ್ಟಾಗಿ ಸೇರಿಕೊಂಡು ಚಾಲನಾ ಧರ್ಮವಾಗುತ್ತದೆ. ಅದು ಅದರಷ್ಟಕ್ಕೆ ಅಸ್ತಿತ್ವದಲ್ಲಿರುತ್ತದೆಯೇ? ಇಲ್ಲ. ಅದರ ಅಸ್ತಿತ್ವಕ್ಕೆ ರಸ್ತೆಯ ಧರ್ಮ, ವಾಹನದ ಧರ್ಮ, ಚಲಾಯಿಸುವ ಮನುಷ್ಯನ ಧರ್ಮ ಎಲ್ಲವೂ ಬೇಕಾಗುತ್ತವೆ. ಚಾಲನ ಧರ್ಮದ ಅಸ್ತಿತ್ವವಿರುವುದು ಅದು ಅಗತ್ಯವಾಗುವ ವಾತಾವರಣದಲ್ಲೇ ಹೊರತು ಸ್ವತಂತ್ರವಾಗಿಯಲ್ಲ.

ಹಾಗಿದ್ದರೆ ಧರ್ಮ ಎಂಬುದಕ್ಕೆ ನಿರಪೇಕ್ಷವಾದ ಅಥವಾ ಆತ್ಯಂತಿಕವಾದ ಒಂದು ಅರ್ಥವಿಲ್ಲವೇ? ಈ ಪ್ರಶ್ನೆಯನ್ನು ಒಂದೆರಡು ಸಾರಿ ಓದಿಕೊಂಡರೆ ಪ್ರಶ್ನೆಯೇ ಅಪ್ರಸ್ತುತ ಎಂದು ನಮಗೆ ತಿಳಿಯುತ್ತದೆ. ‘ಧರ್ಮ’ ಎಂಬ ಪರಿಕಲ್ಪನೆಯ ಅಸ್ತಿತ್ವವಿರುವುದೇ ಸಾಪೇಕ್ಷವಾದ ವಾತಾವರಣದಲ್ಲಿ. ಒಂದು ಮತ್ತೊಂದನ್ನು ಅವಲಂಬಿಸಿ, ಇನ್ನೊಂದನ್ನು ಹೊಂದಿಕೊಂಡು, ಇನ್ಯಾವುದಕ್ಕೋ ವಿರುದ್ಧವಾಗಿ ವರ್ತಿಸುವ ವಾತಾವರಣದಲ್ಲಿ ಸಮತೋಲನ ಸಾಧಿಸುವುದಕ್ಕೆ ಧರ್ಮ ಬೇಕು.

ಈ ಧರ್ಮದ ಸ್ವರೂಪವಾದರೂ ಯಾವುದು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಇದಕ್ಕೂ ಸರಳ ಉತ್ತರವೇ ಇದೆ. ‘ತನ್ನಂತೆ ಪರರ ಬಗೆದೊಡೆ – ಕೈಲಾಸ ಬಿನ್ನಾಣವಕ್ಕು ಸರ್ವಜ್ಞ’. ನಮಗೆ ಇತರರು ಹೇಗೆ ಉಪಕಾರ ಮಾಡಬೇಕೆಂದು ಬಯಸುತ್ತೇವೆಯೋ ಇತರರೂ ನಮ್ಮಿಂದ ಅದನ್ನು ಬಯಸುತ್ತಿದ್ದಾರೆ ಎಂದು ಅರಿತರೆ ಸಾಕು. ಈ ಹಿಂದೆ ನೀಡಿದ ವಾಹನ ಚಾಲನೆಯ ಉದಾಹರಣೆಯನ್ನೇ ಮತ್ತೆ ಪರಿಗಣಿಸಬಹುದು. ಎದುರಿನಿಂದ ಬರುವ ಪಾದಚಾರಿ, ಅಡ್ಡ ಹೋಗುವ ದ್ವಿಚಕ್ರಿ, ಹಿಂದಿನಿಂದ ಹಾರ್ನ್ ಒತ್ತುತ್ತಿರುವ ಲಾರಿ ಚಾಲಕ ಎಲ್ಲರೂ ನಿಮ್ಮ ಸ್ಥಾನದಲ್ಲೇ ನಿಂತು ಆಲೋಚಿಸಿದ್ದರೆ, ಅಥವಾ ನೀವು ಅವರ ಸ್ಥಾನದಲ್ಲಿದ್ದುಕೊಂಡು ಅರ್ಥ ಮಾಡಿಕೊಂಡರೆ, ನಿಮ್ಮ ವಾಹನ ಚಾಲನಾ ಅನುಭವವೇ ಬದಲಾಗಿಬಿಡುವುದಿಲ್ಲವೇ?

ಧರ್ಮ ಎಂಬ ಪರಿಕಲ್ಪನೆ ವಾಸ್ತವದಲ್ಲಿ ಸಾಧಿಸಲು ಬಯಸುವುದು ಇದನ್ನೇ. ಪ್ರತಿಯೊಂದು ಜೀವಿ ಮತ್ತು ನಿರ್ಜೀವಿಯ ಸಹಜ ಗುಣಗಳನ್ನು ಗುರುತಿಸಿ ಗೌರವಿಸುತ್ತಾ, ತಾನೂ ಬದುಕುವುದಕ್ಕೆ ಬೇಕಿರುವ ವಾತಾವರಣವನ್ನು ಕಲ್ಪಿಸಿಕೊಳ್ಳುವುದು. ಹಾಗಾಗಿ ಈ ಧರ್ಮ ಎಂಬುದು ಪ್ರತಿಯೊಂದು ಜೀವಿ ಮತ್ತು ನಿರ್ಜೀವಿಗೂ ಪ್ರತ್ಯೇಕ; ಹಾಗೆಯೇ ಅವೆಲ್ಲವೂ ಇರುವ ಈ ಜಗತ್ತಿಗೆ ಒಂದು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

 1. “ಧರ್ಮ” ಎನ್ನುವ ಪದಕ್ಕೆ ನಿರಪೇಕ್ಷವಾದ ,ನಿಖರ ಅರ್ಥ “ಧಾರಯತಿ ಇತಿ ಧರ್ಮಃ”.
  ಅಂದರೆ ” ಪೋಷಿಸುವಂತದ್ದು”. (+) (positive)
  ಸಮಸ್ತ ಮನುಕುಲವನ್ನು, ವಿಶ್ವವನ್ನು ಯಾವ ಗುಣಗಳು ಪೋಷಿಸುತ್ತದೋ ಅದು ಧರ್ಮ.ಆ ಗುಣಗಳನ್ನು ಹೊಂದುವುದು ಧಾರ್ಮಿಕತೆ.
  ಅಹಿಂಸೆ, ಅಚೌರ್ಯ, ಸದ್ವಚನ, ದಯೆ, ಕ್ಷಮೆ ಇತ್ಯಾದಿ ಗುಣಗಳು ಮನುಕುಲವನ್ನು ಉತ್ತರೋತ್ತರ ಉನ್ನತಿಗೆ ಪೋಷಿಸುತ್ತವೆ..
  ಇದಕ್ಕೆ ವಿರುದ್ದವಾದ ಗುಣಗಳು ಅಧಾರ್ಮಿಕತೆ.
  ಇಂತಹ “ಧರ್ಮ” ವನ್ನು ದರ್ಷಿಸಿದ ,ಅಚರಿಸಿದ ವ್ಯಕ್ತಿಯ ,ಅನುಯಾಯಿಗಳನ್ನು “ಪಂಥ” religion
  ಎನ್ನಬಹುದು
  ಇಂತಹ ಪಂಥಗಳಿಗೆ ದೇಶ,ಕಾಲ,ಭಾಷೆ, ಆಧಿಕಾರ,ರೂಪ,ಆಕಾರಗಳ ಸಂಕುಚಿತತೆ ಮೈಗೂಡಿ ಮೂಲ ಉದ್ದೇಶವೇ ಮರೆತು ಹೋಗಿದೆ..
  ಪಂಥಗಳು ಹಲವು, “ಧರ್ಮ” ಒಂದೇ..
  ಯಾಕೆ ಧಾರ್ಮಿಕ (+) ರಾಗಬೇಕು?
  “ಆನಂದದ ಬ್ರಹ್ಮತೆ” ಯನ್ನು ಹೊಂದಲು !!!

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.