ಎಲ್ಲ ಕೆಡುಕಿಗೂ ಮತ್ಸರವೇ ಮೂಲ. ಅನಾರೋಗ್ಯಕರ ಸ್ಪರ್ಧೆಗೆ, ಕೀಳರಿಮೆಗೆ, ಅಶಾಂತಿಗೆ ಇದೇ ಮುಖ್ಯ ಕಾರಣ. ಮತ್ಸರ ನಮ್ಮನ್ನು ಸದಾ ನಾವು ಯಾವ ವಸ್ತು / ವ್ಯಕ್ತಿ ಕುರಿತು ಮತ್ಸರಿಗಳಾಗಿದ್ದೇವೋ ಅವರನ್ನೇ ಕುರಿತು ಆಲೋಚಿಸುವಂತೆ ಮಾಡುತ್ತದೆ. ನಾವು ಗೆಲ್ಲುವುದು ಹೇಗೆ, ನಾವು ಸಾಧಿಸುವುದು ಹೇಗೆ ಅನ್ನುವುದಕ್ಕಿಂತ ಹೆಚ್ಚಾಗಿ ಅವರನ್ನು ಸೋಲಿಸುವುದು ಹೇಗೆ, ಅವರನ್ನು ಬೀಳಿಸುವುದು ಹೇಗೆ ಎಂಬ ಚಿಂತೆಯೇ ನಮ್ಮನ್ನು ಹಣ್ಣು ಮಾಡುತ್ತದೆ. ಇದು ವೈಯಕ್ತಿಕವಾಗಿ ನಮ್ಮನ್ನು ಮಾತ್ರವಲ್ಲ, ನಮ್ಮ ಮೂಲಕ ಸಮಾಜದ ಸ್ವಾಸ್ಥ್ಯವನ್ನೂ ಕೆಡಿಸುತ್ತದೆ.
ಆದ್ದರಿಂದ, “ಎಲ್ಲ ಬಗೆಯ ಪರಿಕ್ರೋಶವನ್ನೂ (ಮತ್ಸರವನ್ನೂ) ತ್ಯಜಿಸು” ಎನ್ನುತ್ತದೆ ಋಗ್ವೇದ.