ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ಇಡೀ ಬ್ರಹ್ಮಾಂಡ ಅಡಗಿರುವುದು
ಒಬ್ಬನೇ ಒಬ್ಬ ಮನುಷ್ಯನಲ್ಲಿ,
ಅದು ನೀನು.
ನೀನು ಸುತ್ತ ಕಾಣುತ್ತಿರುವ ಎಲ್ಲವೂ,
ನಿನಗೆ ಇಷ್ಟ ಆಗದ ಸಂಗತಿಗಳನ್ನೂ ಒಳಗೊಂಡು,
ನೀನು ತಿರಸ್ಕಾರದಿಂದ, ಅಸಹ್ಯವಾಗಿ ಕಾಣುವ
ಜನರನ್ನೂ ಸೇರಿಸಿ,
ಎಲ್ಲ ಒಂದಿಲ್ಲ ಒಂದು ಮಟ್ಟದಲ್ಲಿ
ನಿನ್ನೊಳಗೇ ಮನೆ ಮಾಡಿದ್ದಾರೆ.
ಸೈತಾನನಿಗಾಗಿ ಹೊರಗೆಲ್ಲೂ ಹುಡುಕಬೇಡ.
ನೀನು ನಿನ್ನನ್ನು ಪೂರ್ಣವಾಗಿ, ಪ್ರಾಮಾಣಿಕವಾಗಿ,
ಧೈರ್ಯದಿಂದ ಎದುರಗೊಂಡಾಗ
ಸೈತಾನ, ಎಲ್ಲಿಂದಲೋ ಅಚಾನಕ್ ಆಗಿ ಬಂದು
ನಿನ್ನ ಮೇಲೆ ಆಕ್ರಮಣ ಮಾಡುವ
ಅಸಾಧಾರಣ ಶಕ್ತಿಯಲ್ಲ.
ಬದಲಾಗಿ, ನಿನ್ನೊಳಗೇ ಅಡಗಿಕೊಂಡಿರುವ
ಸಾಮಾನ್ಯ ದನಿ.
7ನೇ ನಿಯಮ ಇಲ್ಲಿ ನೋಡಿ : https://aralimara.com/2019/11/29/sufi-54/
1 Comment