
ಮೂಲ: ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ಭಗವಂತನಲ್ಲಿ
ಕಳಂಕವಿಲ್ಲ, ದೋಷವಿಲ್ಲ,
ಆತ ಪರಿಪೂರ್ಣ
ಹೀಗಾಗಿ ಇಂಥವನನ್ನು ಪ್ರೀತಿಸುವುದಕ್ಕೆ
ಯಾವ ಸವಾಲುಗಳೂ ಇಲ್ಲ.
ಸಮಸ್ಯೆ ಎದುರಾಗೋದೇ
ನಮ್ಮ ಜೊತೆ ಇರುವ ಸಂಗಾತಿಗಳನ್ನು
ಅವರ ಎಲ್ಲ ದೌರ್ಬಲ್ಯ, ಅಪೂರ್ಣತೆಗಳೊಂದಿಗೆ
ಪ್ರೀತಿಸಲು ಮುಂದಾದಾಗ.
ನೆನಪಿರಲಿ,
ನಮಗೆ ಯಾವುದನ್ನು ಪ್ರೀತಿಸುವ ಸಾಮರ್ಥ್ಯವಿರುತ್ತದೆಯೋ
ನಾವು ಅದನ್ನು ಮಾತ್ರ ಪೂರ್ತಿಯಾಗಿ
ತಿಳಿದುಕೊಳ್ಳಬಲ್ಲೆವು.
ಪ್ರೇಮದ ಹೊರತಾಗಿ
ಬೇರೆ ಯಾವ ತಿಳುವಳಿಕೆಯೂ ಇಲ್ಲ.
ಭಗವಂತನ ಸೃಷ್ಟಿಯನ್ನು
ಪ್ರೀತಿಸುವುದ ಕಲಿಸುವತನಕ
ನಾವು ಭಗವಂತನನ್ನು
ಪ್ರೇಮಿಸುವುದು ಸಾಧ್ಯವಿಲ್ಲ,
ತಿಳಿದುಕೊಳ್ಳುವುದಂತೂ ದೂರದ ಮಾತು.
8ನೇ ನಿಯಮ ಇಲ್ಲಿ ನೋಡಿ : https://aralimara.wordpress.com/2019/12/02/sufi-56/


[…] 9ನೇ ನಿಯಮ ಇಲ್ಲಿ ನೋಡಿ : https://aralimara.com/2019/12/04/sufi-57/ […]
LikeLike