ಸುಳ್ಳುಗಳನ್ನ ಬುಡಸಮೇತ ಕಿತ್ತೆಸೆದುಬಿಡು… : ಅನುಭಾವ ಪದ್ಯ

ಮೂಲ : ನಿಸರ್ಗದತ್ತ ಮಹಾರಾಜ್ | ಅನುವಾದ : ಪ್ರವೀಣಕುಮಾರ್ ಗೋಣಿ

ಬುದ್ಧಿವಂತಿಕೆ ನೀನು ಏನೆಂದರೆ
ಏನು ಅಲ್ಲವೆಂದು ಹೇಳುತ್ತದೆ .

ಪ್ರೀತಿ ಸಕಲವೂ ನೀನೇ ಎಂದು ಹೇಳುತ್ತದೆ ,
ಇವೆರಡರ ನಡುವೆ ನಮ್ಮ ಬದುಕು ಸಾಗುತ್ತದೆ .

ಎಚ್ಚರಿಕೆ ಇಲ್ಲದಿರುವುದಿರುವದರಿಂದಾಗಿ
ನಾವು ಸತ್ಯದಿಂದ ದೂರಾಗುತ್ತೇವೆ .
ನಮ್ಮ ಅನಗತ್ಯ ಕಲ್ಪನೆಗಳಿಂದಾಗಿ
ಅಸತ್ಯವನ್ನ ಸೃಷ್ಟಿಸಿಕೊಳ್ಳುತ್ತೇವೆ .

ಸುಳ್ಳು ಬಯಕೆಗಳು ,ಸುಳ್ಳು ಭಯಗಳು ,
ಸುಳ್ಳು ನಂಬಿಕೆಗಳು , ಸುಳ್ಳು ಉಪಾಯಗಳು ,
ನಮ್ಮ ನಮ್ಮ ನಡುವಿನ ಸುಳ್ಳು ಸಂಬಂಧಗಳು
ಸುಳ್ಳುಗಳು ನಿನ್ನನ್ನ ಸದಾ ನರಳುವಂತೆ ಮಾಡುತ್ತವೆ !
ಆ ಸುಳ್ಳುಗಳನ್ನ ಬುಡಸಮೇತ ಕಿತ್ತೆಸೆದುಬಿಡು ,
ನೀನು ಎಲ್ಲ ವೇದನೆಗಳಿಂದಲೂ ಮುಕ್ತನಾಗಿಬಿಡುತ್ತೀಯಾ.
ಸತ್ಯವೊಂದೇ ನಿನ್ನನ್ನ ಪರಮ ಸಂತುಷ್ಟನನ್ನಾಗಿಸುತ್ತದೆ,
ಸತ್ಯವೊಂದೇ ನಿನ್ನನ್ನ ಅಮರತ್ವದೆಡೆಗೆ ಕೊಂಡೊಯ್ಯುತ್ತದೆ !!

Leave a Reply