ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #13

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಪ್ರೇಮಿ
ಮಧುಶಾಲೆಯಲ್ಲಿ ಕಾಲಿಟ್ಟಾಗ
ಇಡೀ ಮಧುಶಾಲೆಯೇ
ಅವನ ಆರಾಧನಾ ಮಂದಿರವಾಗುವುದು
ಆದರೆ ಕುಡುಕನಿಗೆ
ಮಧುಶಾಲೆ
ಕೇವಲ ಸಾರಾಯಿ ಅಂಗಡಿ.

ನಮ್ಮ ವಿಶೇಷತೆಯನ್ನು ನಿರ್ಧರಿಸುವುದು
ನಮ್ಮ ಹೃದಯವೇ ಹೊರತು
ರೂಪ, ಚೆಹರೆಗಳಲ್ಲ.

ಸೂಫಿಗೆ
ಯಾರನ್ನಾದರೂ ದಿಟ್ಟಿಸುವುದೆಂದರೆ
ಎರಡೂ ಕಣ್ಣುಗಳನ್ನು ಮುಚ್ಚುವುದು
ಒಳಗಣ್ಣನ್ನು ತೆರೆದು
ಹೃದಯವನ್ನು ತಾಕುವುದು

1 Comment

Leave a Reply