ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ಇಡೀ ಬ್ರಹ್ಮಾಂಡವೇ
‘ಒಂದು’ ಅಸ್ತಿತ್ವ.
ಅದೃಶ್ಯ ಕಥೆಗಳ ಜಾಲವೊಂದು
ಜಗತ್ತಿನ ಪ್ರತಿಯೊಬ್ಬರನ್ನೂ, ಪ್ರತಿಯೊಂದನ್ನೂ
ಪರಸ್ಪರ ಜೊತೆ ಸೇರಿಸಿ
ಹೆಣಿಗೆ ಹಾಕಿದೆ.
ಗೊತ್ತಿದ್ದೋ, ಗೊತ್ತಿಲ್ಲದೆಯೋ
ನಾವೆಲ್ಲ ಒಂದು ಮೌನ ಸಂಭಾಷಣೆಯಲ್ಲಿ
ನಿರತರಾಗಿರುವುದಂತೂ ನಿಜ.
ಯಾರನ್ನೂ, ಯಾವುದನ್ನೂ ನೋಯಿಸದಿರಿ
ಅಂತಃಕರಣ ಸಹಜ ಸ್ವಭಾವವಾಗಲಿ.
ಬೆನ್ನ ಹಿಂದಿನ ಮಾತು ನಿಲ್ಲಲಿ
ಮುಗ್ಧ ಅಭಿಪ್ರಾಯವಾಗಿದ್ದರೂ.
ನಮ್ಮ ಮೂಲಕ
ಹೊರ ಬರುವ ಮಾತುಗಳು ನಾಶವಾಗುವುದಿಲ್ಲ,
ಬದಲಾಗಿ, ಕಾಲದ ಅನಂತ ಜಾಗೆಯಲ್ಲಿ
ಶಾಶ್ವತವಾಗಿ ಸಂಗ್ರಹಿಸಲ್ಪಡುತ್ತವೆ
ಮತ್ತು ನಿಗದಿತ ಸಮಯದಲ್ಲಿ
ಮತ್ತೆ ನಮ್ಮನ್ನು ತಲಪುತ್ತವೆ.
ಒಬ್ಬ ಮನುಷ್ಯನ ನೋವು
ಎಲ್ಲರನ್ನೂ ಘಾಸಿ ಮಾಡುತ್ತದೆ.
ಒಬ್ಬ ಮನುಷ್ಯನ ಆನಂದ
ಎಲ್ಲರ ಮುಖದಲ್ಲೂ ನಗೆಯರಳಿಸುತ್ತದೆ.
13ನೇ ನಿಯಮ ಇಲ್ಲಿ ನೋಡಿ : https://aralimara.com/2019/12/15/sufi-61/
1 Comment