ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ನಿಜವಾದ ಕೊಳಕು
ಅಂತರಂಗಕ್ಕೆ ಸಂಬಂಧಿಸಿದ್ದು.
ಬಾಕಿ ಎಲ್ಲವನ್ನೂ
ಸ್ವಚ್ಛ ಮಾಡಿಬಿಡಬಹುದು.
ಯಾವ ಶುದ್ಧ ನೀರಿನಿಂದಲೂ ಸ್ವಚ್ಛವಾಗದ
ಒಂದೇ ಒಂದು ಕೊಳೆಯೆಂದರೆ
ನಮ್ಮ ಆತ್ಮವನ್ನು ಕಲುಷಿತಗೊಳಿಸುತ್ತಿರುವ
ದ್ವೇಷ ಮತ್ತು ಧರ್ಮಾಂಧತೆಯ
ಕೊಳಕು ಕಲೆ.
ನಿಮ್ಮ ದೇಹವನ್ನು
ಉಪವಾಸ ಮತ್ತು ಕಾಮನೆಗಳ ನಿಗ್ರಹದಿಂದ
ಸ್ವಚ್ಛವಾಗಿರಿಸಿಕೊಳ್ಳಬಹುದು
ಆದರೆ
ಹೃದಯವನ್ನು ಶುದ್ಧವಾಗಿಡಬಲ್ಲದ್ದು
ಪ್ರೇಮ ಮಾತ್ರ.
14ನೇ ನಿಯಮ ಇಲ್ಲಿ ನೋಡಿ : https://aralimara.com/2019/12/17/sufi-62/
[…] 15ನೇ ನಿಯಮ ಇಲ್ಲಿ ನೋಡಿ : https://aralimara.com/2019/12/21/sufi-64/ […]
LikeLike