ಬೋಧಿಸತ್ವ ಮಹಾನಂದಿಯರ ಮಾತೃಭಕ್ತಿ

  • ಅನೀಶ್ ಬೋಧ್

ಬಹುಕಾಲದ ಹಿಂದೆ ಬೋಧಿಸತ್ವರು ಮಹಾನಂದಿಯನೆಂಬ ವಾನರರಾಗಿ ಹುಟ್ಟಿದರು. ಅವರಿಗೆ ಒಬ್ಬ ತಮ್ಮ ಇದ್ದ. ಆತನು ಚುಲ್ಲನಂದಿಯನಾಗಿದ್ದನು. ಮಹಾನಂದಿಯರು ಅಲ್ಲಿದ್ದ ಇಡೀ ವಾನರಗಣಕ್ಕೆ ನಾಯಕರಾಗಿದ್ದರು.

ಆದರೆ ನಂದಿಯ ಸೋದದರ ತಾಯಿಯು ಕುರುಡಿಯಾಗಿತ್ತು. ಆ ಕುರುಡಿ ತಾಯಿಗೆ ನಿಗ್ರರ್ೊಧ ವೃಕ್ಷದಲ್ಲಿ ನೆಲೆಸಲು ಅನುಕೂಲ ಮಾಡಿಕೊಟ್ಟು ಪ್ರತಿನಿತ್ಯ ಹಣ್ಣು ಹಂಪಲುಗಳನ್ನು ನಂದಿಯ ಸೋದರರು ಕಳುಹಿಸುತ್ತಲೇ ಇದ್ದರು.
ಒಂದುದಿನ ತಾಯಿಯನ್ನು ಬಂದು ನೋಡಿದಾಗ ಆ ಮುದಿ ಕೋತಿಯು ಅತಿಕೃಶವಾಗಿ ಬಿಟ್ಟಿತ್ತು.

ಆಗ ನಂದಿಯ ಹೀಗೆ ಕೇಳಿದನು” ಅಮ್ಮ, ನಾನು ಪ್ರತಿದಿನ ನಿನಗೆ ಹಣ್ಣುಗಳನ್ನು ಕಳುಹಿಸುತ್ತಲೆ ಇದ್ದೀವಲ್ಲ, ನೀನೇಕೆ ಹೀಗಾಗಿದ್ದೀ?”
ಅದಕೆ ತಾಯಿಯು: ಮಗು ನನಗೆ ಯಾರೂ ತಂದು ನೀಡಲಿಲ್ಲ ಎಂದಿತು. ಆಗ ಕೂಡಲೇ ಮಹಾನಂದಿಯನಿಗೆ ತನ್ನ ಕೃತಘ್ನ ಅನುಚರರ ಮೇಲೆ ಅಸಹ್ಯ ಉಂಟಾಯಿತು. ಆದರೂ ಸೈರಿಸಿಕೊಂಡು ತನ್ನ ತಮ್ಮನಿಗೆ ನಾಯಕನಾಗುವಂತೆ ಹೇಳಿತು. ಆದರೆ ಆ ತಮ್ಮ ಚುಲ್ಲನಂದಿಯನು ಅದಕ್ಕೆ ಒಪ್ಪದೆ ಹೋದಾಗ, ಅವರಿಬ್ಬರೂ ವಾನರ ಗಣದಿಂದ ನಿವೃತ್ತಿ ತಾಳಿದರು. ಬೇರೆ ವಾನರರು ಆ ನಾಯಕತ್ವ ಸ್ವೀಕರಿಸಿದರು. ಈ ಇಬ್ಬರು ವಾನರರು ಈಗ ತುಂಬಾ ಚೆನ್ನಾಗಿ ತಾಯಿಗೆ ಸೇವೆ ಸಲ್ಲಿಸುತ್ತ ಕಾಲಕಳೆದರು.

ಅದೇ ಸಮಯದಲ್ಲಿ ವಾರಣಾಸಿಯ ವಿದ್ಯಾಥರ್ಿಯೊಬ್ಬ ಶಿಕ್ಷಣ ಮುಗಿಸಿ, ಸುಲಭವಾದ ವೃತ್ತಿಯೆಂದು ಬೇಟೆಯನ್ನೇ ತನ್ನ ವೃತ್ತಿಯಾಗಿ ಆರಿಸಿಕೊಂಡಿದ್ದನು, ಅದರಲ್ಲೇ ಜೀವಿಸುತ್ತಿದ್ದನು.

ಒಂದುದಿನ ಆತನಿಗೆ ಬೇಟೆಗೆ ಯಾವ ಪ್ರಾಣಿಯೂ ದೊರೆಯದಾಯಿತು. ಆಗ ಆತನ ಕಣ್ಣಿಗೆ ಮೂರು ಕೋತಿಗಳು ಕಂಡವು. ಬೇಟೆಗಾರನು ಬಾಣದಿಂದ ಗುರಿಯಿಟ್ಟನು. ತಕ್ಷಣ ಬಲಿಷ್ಠವಾಗಿದ್ದ ಸೋದರರು ತಾವು ಕೊಂಬೆಗಳಲ್ಲಿ ಹಾರಿ ಅಡಗಿಕೊಂಡರು. ತಮ್ಮ ಮುದಿ ತಾಯಿಗೆ ಬೇಟೆಗಾರನು ಏನೂ ಮಾಡಲಾರ ಎಂದು ಅವು ನಂಬಿದ್ದವು.

ಆದರೆ ಆ ಬೇಟೆಗಾರನು ಈಗ ಮುದಿತಾಯಿಗೆ ಗುರಿಯಿಟ್ಟನು. ಇದರಿಂದ ನಡುಗಿದ ಮಹಾನಂದಿಯ ಚಂಗನೆ ಹಾರಿ ತಾಯಿಯ ಮುಂದೆ ಬಂದು ನಿಂತಿತು. “ತನ್ನನ್ನು ಕೊಂದು ಹಾಕು, ಆದರೆ ತಾಯಿಯನ್ನು ಬಿಟ್ಟುಬಿಡು” ಎಂದು ಪ್ರಾಥರ್ಿಸಿತು. 
ಆ ನಿರ್ದಯಿ ಬೇಟೆಗಾರ ಬೋಧಿಸತ್ವರನ್ನು ಬಾಣದಿಂದ ಸಂಹರಿಸಿಬಿಟ್ಟನು. ಮತ್ತೆ ಆತನು ತಾಯಿ ಕೋತಿಯನ್ನು ಕೊಲ್ಲಲು ಮುಂದಾದನು. ಈ ಬಾರಿ ಚುಲ್ಲನಂದಿಯ ತನ್ನ ಅಣ್ಣನ ತ್ಯಾಗದಿಂದ ಹಾಗೂ ತಾಯಿಯ ಮೇಲಿನ ಭಕ್ತಿಯಿಂದಾಗಿ, ತಾನು ತಾಯಿಯ ಮುಂದೆ ಬಂದು ನಿಂತು, ತನ್ನನ್ನು ಕೊಂದು, ತಾಯಿಯನ್ನು ಬಿಟ್ಟುಬಿಡು ಎಂದು ಆ ಚುಲ್ಲ ನಂದಿಯ ಸಹಾ ಪ್ರಾಥರ್ಿಸಿದನು. ಆದರೆ ಆ ಕಠೋರ ಹೃದಯಿ ಬೇಟೆಗಾರ ಆ ಚುಲ್ಲನಂದಿಯನ್ನು ಬಾಣದಿಂದ ಸಂಹರಿಸಿ, ಕೊನೆಗೆ ಆ ತಾಯಿಯನ್ನು ಸಂಹರಿಸಿ ಮನೆ ಕಡೆಗೆ ಹೊರಟನು.

ಆದರೆ ದಾರಿಯಲ್ಲಿ ಯಾರೋ ಆತನಿಗೆ ಹೀಗೆ ಹೇಳಿದರು: ಓ ಬೇಟೆಗಾರ, ನಿನ್ನ ಮನೆಗೆ ಸಿಡಿಲು ಬಡಿದು, ನಿನ್ನ ಪತ್ನಿ ಪುತ್ರರು ಮೃತರಾಗಿದ್ದಾರೆ. ಇದನ್ನು ಕೇಳಿ ಅತ್ಯಂತ ದುಃಖದಿಂದ ಆತನು ಮನೆಗೆ ಓಡಿಬಂದನು. ಆಗ ಶಿಥಿಲವಸ್ಥೆಯಿಂದಿದ್ದ ಕಂಬವೊಂದು ಆತನ ತಲೆಗೆ ಬಿದ್ದು ಪೆಟ್ಟಾಗಿ ನೆಲಕ್ಕೆಬಿದ್ದನು. ಭೂಮಿಯು ಸಹಾ ಕಂಪಿಸಿ ಸೀಳಿ, ಆತನು ಭೂಗರ್ಭದಲ್ಲಿ ಬಿದ್ದನು. ಬೆಂಕಿಯ ಕೆನ್ನಾಲಿಗೆ ಆತನನ್ನು ಸೆಳೆದುಕೊಂಡು ಒಳಹೋಯಿತು

Leave a Reply