ನಿಮ್ಮೊಳಗೆ ಅಡಗಿರುವ ವಿಶೇಷ ಗುಣವನ್ನು ಪತ್ತೆ ಮಾಡಲು ಇಲ್ಲೊಂದು ದಾರಿ ಇದೆ. ಈ ಕೆಳಗಿನ ಪ್ರಶ್ನೆಗಳಿಗೆ 5 ಸೆಕೆಂಡ್’ಗಳಿಗಿಂತ ಹೆಚ್ಚು ಕಾಲಾವಕಾಶ ತೆಗೆದುಕೊಳ್ಳದೆ ನಿಮ್ಮ ಆಯ್ಕೆಯನ್ನು ಗುರುತು ಮಾಡಿ. ಅನಂತರದ ಸೂಚನೆಗಳನ್ನು ಅನುಸರಿಸಿ….
1. ಟೀವಿ ಆನ್ ಮಾಡಿದ ಕೂಡಲೆ ನೀವು ಏನನ್ನು ನೋಡಬಯಸುತ್ತೀರಿ?
A) ಹದ್ದುಗಳ ಡಾಕ್ಯುಮೆಂಟರಿ B) ಕ್ರೀಡೆ C) ಆ್ಯಕ್ಷನ್ ಮೂವಿ D) ನ್ಯೂಸ್
2. ನೀವು ಯಾವುದಾದರೂ ಕ್ರೀಡೆಯಲ್ಲಿ ಆಸಕ್ತರಾಗಿದ್ದೀರಾ? ಅಥವಾ ವ್ಯಾಯಾಮ ಮಾಡುತ್ತೀರಾ?
A) ಎರಡೂ ಇಲ್ಲ B) ನಾನು ಕ್ರೀಡೆಯಲ್ಲಿ ತೊಡಗುವುದು / ವ್ಯಾಯಾಮ ಮಾಡುವುದು ಎರಡೂ ಅಪರೂಪ C) ಸಾಮಾನ್ಯವಾಗಿ ನಾನು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತೇನೆ D) ಪ್ರತಿ ದಿನ ವ್ಯಾಯಾಮ ಮಾಡುತ್ತೇನೆ
3. ನಿಮಗೆ ಕಲಿಯಲು ಯಾವ ವಿಷಯ ಸುಲಭವೆನಿಸುತ್ತದೆ?
A) ಕಲೆ / ಭಾಷಾ ಕಲಿಕೆ / ಇತಿಹಾಸ B) ಗಣಿತ / ವಿಜ್ಞಾನ
4. ಈ ನಾಲ್ಕರಲ್ಲಿ ನೀವು ಯಾವ ಬಣ್ಣವನ್ನು ನಿಮ್ಮ ಕೋಣೆಗೆ ಬಳಿಯಲು ಇಚ್ಛಿಸುತ್ತೀರಿ?
A) ಬಿಳಿ B) ಹಸಿರು C) ಕಿತ್ತಳೆ D) ನೀಲಿ
5. ನಿಮ್ಮ ನೆನಪಿನ ಶಕ್ತಿ ಹೇಗಿದೆ?
A) ಬಹಳ ಚೆನ್ನಾಗಿದೆ. ನನಗೆ ಯಾವಾಗಲೂ ಎಲ್ಲವೂ ನೆನಪಿರುತ್ತದೆ B) ಸ್ವಲ್ಪವೂ ಚೆನ್ನಾಗಿಲ್ಲ. ನಾನು ಹೆಚ್ಚೂಕಡಿಮೆ ಎಲ್ಲವನ್ನೂ ಮರೆಯುತ್ತೇನೆ.
6. ನಿಮ್ಮ ದೇಹದಲ್ಲಿ ನೀವು ಸದೃಢವಾಗಿಟ್ಟುಕೊಳ್ಳಲು ಬಯಸುವ ಅಂಗ ಯಾವುದು?
A) ಮುಖ B) ಭುಜಗಳು C) ಕೈಗಳು D) ಕಾಲುಗಳು
7. ವಾಕ್ಯವನ್ನು ಪೂರ್ಣಗೊಳಿಸಿ. “ನನ್ನ ಗೆಳೆಯ/ ಗೆಳತಿಯರ ಗುಂಪಿನಲ್ಲಿ ನಾನು ___________”
A) ಸದಾ ಒಂದಿಲ್ಲೊಂದು ವಿಚಿತ್ರ ಕೆಲಸ ಮಾಡುತ್ತಲೇ ಇರುವವಳು / ನು B) ಯಾವತ್ತೂ ಗುಂಪಿಂದ ಹೊರಗೆ ನಿಲ್ಲದವನು / ಳು C) ಸದಾ ಯೋಜನೆ ರೂಪಿಸುವ ಜವಾಬ್ದಾರಿ ಹೊರುವವನು / ಳು D) ತಮಾಷೆಯ ವ್ಯಕ್ತಿ
8. ನಿಮಗೆ ಸಿಟ್ಟು ಬಂದಾಗ ಅದನ್ನು ಹೋಗಲಾಡಿಸಿಕೊಳ್ಳಲು ಏನು ಮಾಡುತ್ತೀರಿ?
A) ಏನನ್ನಾದರೂ ಕುಟ್ಟಿ ಕೋಪ ತೀರಿಸಿಕೊಳ್ಳುತ್ತೇನೆ B) ಏರು ದನಿಯಲ್ಲಿ ಸಂಗೀತ ಕೇಳುತ್ತೇನೆ C) ಸುಮ್ಮನೆ ಕುಳಿತು ಸಮಾಧಾನ ಮಾಡಿಕೊಳ್ಳುತ್ತೇನೆ D) ಬೆವರು ಕಿತ್ತುಬರುವ ವರೆಗೂ ವ್ಯಾಯಾಮ ಮಾಡುತ್ತೇನೆ
9. ನೀವು ಹೆಚ್ಚು ಸೃಜನಶೀಲರಾಗಿರುವುದು ಯಾವಾಗ?
A) ಹಗಲು ವೇಳೆಯಲ್ಲಿ B) ರಾತ್ರಿಯ ವೇಳೆಯಲ್ಲಿ
10. ನಿಮ್ಮ ಅಚ್ಚುಮೆಚ್ಚಿನ ಋತು ಯಾವುದು?
A) ಗ್ರೀಷ್ಮ B) ವಸಂತ C) ಶಿಶಿರ D) ವರ್ಷ
ನೀವು ಮಾಡಿದ ಆಯ್ಕೆಗೆ ಅಂಕಗಳೆಷ್ಟು ಇಲ್ಲಿ ಗಮನಿಸಿ, ಗುರುತು ಮಾಡಿಟ್ಟುಕೊಳ್ಳಿ
1) A.40 B.10 C.20 D.30 2) A.40 B.30 C.20 D.10 3) A.10 B. 40 4) A.30 B.20 C.10 D.40 5) A. 40 B.10 6) A.10 B.20 C.30 D.40 7) A.10 B.20 C.40 D.30 8) A.10 B.30 C.40 D.20 9) A.10 B.40 10) A.10 B.40 C.30 D.20
ಈಗ ನಿಮ್ಮ ಮೌಲ್ಯಮಾಪನ ಮಾಡಿಕೊಳ್ಳಿ. ನಿಮ್ಮ ಅಂಕಗಳನ್ನು ಕೂಡಿಸಿ, ಈ ಕೆಳಗಿನ ಶ್ರೇಣಿಯಲ್ಲಿ ಯಾವುದರ ವ್ಯಾಪ್ತಿಗೆ ಬರುತ್ತದೆಯೋ, ಅದು ನಿಮ್ಮ ಅಂತರಂಗದ ವೈಶಿಷ್ಟ್ಯವನ್ನು ಸೂಚಿಸುತ್ತದೆ!
100 – 140 ನಿಮ್ಮಲ್ಲಿ ಸ್ಪರ್ಧಾ ಮನೋಭಾವವಿದೆ
150 – 170 ನಿಮ್ಮಲ್ಲಿ ನಾಯಕತ್ವದ ಗುಣವಿದೆ
180 – 210 ನೀವು ನಟನೆಯಲ್ಲಿ ಪಳಗುತ್ತೀರಿ
220 – 260 ನೀವು ಬರಹಗಾರರಾಗಬಲ್ಲಿರಿ
270 – 310 ನೀವು ನಾದಪ್ರಿಯರು. ಸಂಗೀತ ನಿಮಗೊಲಿಯುವುದು
320 – 350 ಕಲೆ ನಿಮ್ಮೊಳಗೆ ಹಾಸುಹೊಕ್ಕಾಗಿದೆ
360 – 400 ನಿಮ್ಮದು ವೈಜ್ಞಾನಿಕ ದೃಷ್ಟಿಕೋನ. ನೀವು ಈ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬಹುದು