ನಮ್ಮದಲ್ಲದ ಕೆಲಸವನ್ನು ಮಾಡಿದರೆ ಇದೇ ಗತಿ! ~ Tea time story

ಅದೊಂದು ಅಗಸನ ಮನೆ. ಅಲ್ಲೊಂದು ಕತ್ತೆ, ಮತ್ತೆ ಮತ್ತೊಂದು ನಾಯಿ.
ಒಂದು ರಾತ್ರಿ ಆ ಮನೆಗೆ ಕಳ್ಳ ಬರ್ತಾನೆ.

ಕತ್ತೆಗೆ ಎಚ್ಚರ ಆಗತ್ತೆ. ನಾಯಿಯನ್ನ ತಿವಿದು, “ಏಯ್! ಕಳ್ಳ ಬಂದಿದಾನೆ, ಕೂಗು. ಅಗಸನ್ನ ಎಬ್ಬಿಸು…”

ನಾಯಿ ಗೊಣಗುತ್ತೆ. “ಉಹು… ಅಂವ ಸರಿಯಾಗಿ ಅನ್ನ ಹಾಕೋದೇ ಇಲ್ಲ. ನಿನಗಂತೂ ಅಷ್ಟು ದುಡಿದು ಪೆಟ್ಟು ತಿನ್ನೋದೇ ಕೆಲ್ಸ. ತೆಪ್ಪಗೆ ಬಿದ್ದುಕೋಬಾರದಾ?”

ಪಾಪ ಕತ್ತೆ, ನಾನೇ ಎಬ್ಬಿಸ್ತೀನಿ ಅಂದುಕೊಂಡು ಜೋರಾಗಿ ಕೂಗಿಕೊಳ್ಳುತ್ತೆ. ಕತ್ತೆಯ ಕಿರುಚಾಟಕ್ಕೆ ಹೆದರಿ ಕಳ್ಳ ಓಡಿಹೋಗ್ತಾನೆ. ಅಗಸಂಗೆ ಎಚ್ಚರವಾಗಿಬಿಡತ್ತೆ.
ಕಳ್ಳಗಿಳ್ಳ ಬಂದಿದ್ರೆ ನಾಯಿ ಕೂಗಬೇಕಿತ್ತು. ಈ ಅಪರಾತ್ರೀಲಿ ಕತ್ತೆ ಯಾಕೆ ಬಡಕೊಳ್ತಿದೆ ಅಂತ ಸಿಟ್ಟೇ ಬಂದುಬಿಡತ್ತೆ. ಸೀದಾ ಎದ್ದುಬಂದು ಕತ್ತೆಯನ್ನ ಮನಸಾರೆ ಬಡಿದು, ಹೋಗಿ ಬಿದ್ದುಕೊಳ್ತಾನೆ. 

(ಹಿತೋಪದೇಶದಿಂದ….)

Leave a Reply