ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ನರಕದ ಬಗ್ಗೆ ಚಿಂತೆ,
ಸ್ವರ್ಗದ ಬಗ್ಗೆ ಕನಸು
ಎರಡೂ ತಮಾಷೆಯ ಸಂಗತಿಗಳೇ.
ನರಕ, ಬೇರೆಲ್ಲೂ ಇಲ್ಲ
ನರಕದ ಅಸ್ತಿತ್ವ ಇಲ್ಲೇ, ಈ ಕ್ಷಣದಲ್ಲೆ.
ಹಾಗೆಯೇ ಸ್ವರ್ಗ ಕೂಡ.
ಪ್ರತೀ ಬಾರಿ ನಾವು ಪ್ರೀತಿಸಿದಾಗ
ಸ್ವರ್ಗದ ಅಂಗಳದಲ್ಲಿ ದಾಖಲಾಗುತ್ತೇವೆ
ಮತ್ತು
ದ್ವೇಷ, ಅಸೂಯೆ, ಹಿಂಸೆಯಲ್ಲಿ
ಒಂದಾದಾಗ
ನರಕದ ಕೆನ್ನಾಲಿಗೆಗೆ ಆಹಾರವಾಗುತ್ತೇವೆ.
16ನೇ ನಿಯಮ ಇಲ್ಲಿ ನೋಡಿ: https://aralimara.com/2020/01/05/sufi-68/
1 Comment