ಆರೋಗ್ಯಭಾಗ್ಯಕ್ಕಾಗಿ ಸೂರ್ಯಕವಚ ಸ್ತೋತ್ರ ~ ನಿತ್ಯಪಾಠ

ಬ್ರಹ್ಮರ್ಷಿ ಯಾಜ್ಞವಲ್ಕ್ಯರು ರಚಿಸಿದ ಸೂರ್ಯಕವಚ ಸ್ತೋತ್ರ ಮತ್ತು ಭಾವಾರ್ಥ ಇಲ್ಲಿದೆ…

ಯಾಜ್ಞವಲ್ಕ್ಯ ಉವಾಚ :
ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ |
ಶರೀರಾರೋಗ್ಯದಂ ದಿವ್ಯಂ ಸರ್ವ ಸೌಭಾಗ್ಯದಾಯಕಮ್ ||1||
ಭಾವಾರ್ಥ: ಯಾಜ್ಞವಲ್ಕ್ಯರು ಹೇಳಿದರು, “ಎಲೈ ಮುನಿಶ್ರೇಷ್ಠನೇ! ಮಂಗಲದಾಯಕವೂ ಶ್ರೇಷ್ಠವೂ, ದೇಹಾರೋಗ್ಯವನ್ನು ರಕ್ಷಿಸುವಂತಹದೂ, ಸಮಸ್ತ ಸೌಭಾಗ್ಯವನ್ನು ದೊರಕಿಸಿಕೊಡುವಂತಹದೂ ಆದ ಸೂರ್ಯಕವಚವನ್ನು ನಿನಗೆ ಬೋಧಿಸುತ್ತೇನೆ, ಕೇಳು.
ದೇದೀಪ್ಯಮಾನ ಮುಕುಟಂ ಸ್ಫುರನ್ಮಕರ ಕುಂಡಲಮ್ |
ಧ್ಯಾತ್ವಾ ಸಹಸ್ರಕಿರಣಂ ಸ್ತೋತ್ರಮೇತುದುದೀರಯೇತ್ ||2||
ಭಾವಾರ್ಥ: ಅತ್ಯಂತ ಪ್ರಕಾಶಮಾನವಾದ ಕಿರೀಟವುಳ್ಳವನೂ, ಹೊಳೆಯುತ್ತಿರುವ ಮೊಸಳೆಯಾಕಾರದ ಕರ್ಣಾಭರಣ ಧರಿಸಿದವನೂ, ಸಾವಿರ ಕಿರಣಳಿಂದ ಕಂಗೊಳಿಸುತ್ತಿರುವವನೂ ಆದ ಸೂರ್ಯನನ್ನು ಧ್ಯಾನಿಸುತ್ತಾ ಈ ಸ್ತೋತ್ರವನ್ನು ಪಠಿಸಬೇಕು.
ಶಿರೋಮೇ ಭಾಸ್ಕರಃ ಪಾತು ಲಲಾಟಂ ಮೇSಮಿತದ್ಯುತಿಃ |
ನೇತ್ರೇ ದಿನಮಣಿಃ ಪಾತು ಶ್ರವಣೇವಾಸರೇಶ್ವರಃ ||3||
ಭಾವಾರ್ಥ: ನನ್ನ ಶಿರಸ್ಸನ್ನು ಭಾಸ್ಕರನೆಂದು ಹೆಸರಾದ ಸೂರ್ಯನು ರಕ್ಷಿಸಲಿ. ನನ್ನ ಹಣೆಯನ್ನು ಮಿತಿಯಿಲ್ಲದ ಪ್ರಕಾಶವುಳ್ಳ ಸೂರ್ಯದೇವನು ಕಾಪಾಡಲಿ. ದಿನಮಣಿಯು ನಯನಗಳನ್ನೂ, ದಿನಾಧಿಪತಿಯು ನನ್ನ ಕಿವಿಗಳನ್ನೂ ರಕ್ಷಿಸಲಿ.

ಘ್ರಾಣಂ ಫರ್ಮಘೃಣಿಃ ಪಾತು ವದನಂ ವೇದವಾಹನಃ |
ಜಿಹ್ವಾಂ ಮೇ ಮಾನವಃ ಪಾತು ಕಂಠಂ ಮೇ ಸುರವಂದಿತಃ ||4||
ಭಾವಾರ್ಥ: ನನ್ನ ನಾಸಿಕವನ್ನು ಉಷ್ಣ ಕಿರಣನೂ, ಮುಖವನ್ನು ವೇದವಾಹನನೂ ಕಾಪಾಡಲಿ. ಹಾಗೆಯೇ ನನ್ನ ನಾಲಿಗೆಯನ್ನು ಮಾನವಂತನೂ, ಕುತ್ತಿಗೆಯನ್ನು ಸುರರಿಂದ ನಮಿಸಲ್ಪಡುವಂಥವನೂ ಆದ ಸೂರ್ಯದೇವನು ಕಾಪಾಡಲಿ.

ಸ್ಕಂಧೌ ಪ್ರಭಾಕರಃ ಪಾತು ವಕ್ಷಃ ಪಾತು ಜನಪ್ರಿಯಃ |
ಪಾತು ಪಾದೌ ದ್ವಾದಶಾತ್ಮಾ ಸರ್ವಾಂಗಂ ಸಕಲೇಶ್ವರಃ ||5||
ಭಾವಾರ್ಥ: ಪ್ರಭಾಕರನು ಹಗಲಿನಲ್ಲಿಯೂ, ಜನಪ್ರಿಯನಾದ ರವಿಯು ಎದೆಯನ್ನೂ ಕಾಪಾಡಲಿ. ದ್ವಾದಶಾತ್ಮನು ಪಾದಗಳನ್ನೂ, ಸರ್ವಾಂಗಗಳನ್ನು ಸಕಲಾಧಿಪತಿಯೂ ಕಾಪಾಡಲಿ.

ಸೂರ್ಯ ರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೂರ್ಜಪತ್ರಕೇ |
ದಧಾತಿ ಯಃಕರೇತಸ್ಯ ವಶಗಾಃ ಸರ್ವಸಿದ್ಧಯಃ ||6||
ಭಾವಾರ್ಥ: ಸೂರ್ಯನ ರಕ್ಷಣೆ ಪಡೆಯುವ ಈ ಸ್ತುತಿಯನ್ನು ಭುಜಪತ್ರಾವಳಿಯಲ್ಲಿ ಬರೆದು ಹಸ್ತದಲ್ಲಿ ಇರಿಸಿಕೊಳ್ಳುವವರಿಗೆ ಸಮಸ್ತ ಇಷ್ಟಾರ್ಥಗಳು ಲಭಿಸುವವು.

ಸುಸ್ನಾತೋ ಯೋ ಜಪೇತ್ಸಮ್ಯಗ್ಯೋSಧೀತೇಸ್ವಸ್ಥಮಾನಸಃ |
ಸ ರೋಗಮುಕ್ತೋ ಧೀರ್ಘಾಯುಃ ಸುಖಂ ಪುಷ್ಟಿಂ ಚ ವಿಂದತಿ ||7||
ಭಾವಾರ್ಥ: ಸ್ನಾನ ಮಾಡಿ ಶಾಂತ ಮನಸ್ಸಿನಿಂದ ಈ ಸ್ತೋತ್ರವನ್ನು ಜಪಿಸುವವರು ರೋಗಮುಕ್ತರಾಗಿ ಆರೋಗ್ಯಶಾಲಿಯಾಗುವರು. ಧೀರ್ಘಾಯುಷ್ಮಂತರೂ ಸ್ವಸ್ಥ ಶರೀರಿಗಳೂ ಆಗಿ ಬಾಳುವರು.

Leave a Reply