ಪಾಂಡವರಿಗಾಗಿ ಸೇನಾಪತಿ ಹುದ್ದೆಯನ್ನೇ ತ್ಯಜಿಸಿದ ವೀರ ಸಾತ್ಯಕಿಯ ಕಥೆ

ಸಾತ್ಯಕಿ, ಮಹಾಭಾರತದ ಯುದ್ಧದಲ್ಲಿ ಪಾಲ್ಗೊಂಡು ಯುದ್ಧದ ನಂತರದಲ್ಲಿಯೂ ಬದುಕಿದ್ದ ಬೆರಳೆಣಿಕೆಯ ಮಂದಿಗಳಲ್ಲಿ ಒಬ್ಬ. ಈತನ ವೀರಗಾಥೆಯ ಪರಿಚಯ ಇಲ್ಲಿದೆ…. 

ಯುಯುಧು, ಯದುವೀರರ ಅಜೇಯ ಸೇನಾಪತಿಯಾಗಿದ್ದವನು. ಈತ ಸತ್ಯಕ ಎನ್ನುವವನ ಮಗನಾದ ಕಾರಣ ಈತನನ್ನ ಹೆಚ್ಚಾಗಿ ಸಾತ್ಯಕಿ ಎಂದು ಕರೆಯೋದು ಉಂಟು. ಮಹಾಭಾರತದ ಯುದ್ಧ ಆರಂಭ ಆದಾಗ ಕೃಷ್ಣ ತನ್ನ ಸಂಪೂರ್ಣ ಸೇನೆಯಯನ್ನ ಸುಯೋಧನನಿಗೆ ಒಪ್ಪಿಸಿ ಆ ಸೇನೆಯ ನಾಯಕತ್ವ ವಹಿಸುವಂತೆ ಯುಯುಧುವಿಗೆ ಆದೇಶ ಕೊಡ್ತಾನೆ. ಆದರೆ ಅದಕ್ಕೆ ಒಪ್ಪದ ಯುಯುಧು ತನ್ನ ಸೇನಾಪತಿ ಹುದ್ದೆಯನ್ನೇ ಬಿಟ್ಟು ಕೊಡ್ತಾನೆ. ತಾನು ಅಧರ್ಮದ ಪರ ನಿಲ್ಲೋದಿಲ್ಲ ಅಂತ ತನ್ನ ಸ್ವಂತ ನಿರ್ಧಾರ ಪ್ರಕಟಿಸಿ ಸಭೆಯಿಂದ ಹೊರಗಡೆ ನಡೆದು ಬಿಡ್ತಾನೆ. ಅಂತಹಾ ಧರ್ಮಪಾರಾಯಣನಾಗಿದ್ದವನು ಸಾತ್ಯಕಿ. ಮಹಾಭಾರತದ ಯುದ್ಧದಲ್ಲಿ ಪಾಲ್ಗೊಂಡು ಯುದ್ಧದ ನಂತರದಲ್ಲಿಯೂ ಬದುಕಿದ್ದ ಬೆರಳೆಣಿಕೆಯ ಮಂದಿಗಳಲ್ಲಿ ಒಬ್ಬನೀತ.

ಮುಂದೆ ಮಹಾಭಾರತ ಯುದ್ಧದಲ್ಲಿ ಕೃಷ್ಣನ ಇಡೀ ಸೇನೆ ಕೌರವರ ಪರ ನಿಂತಿದ್ದರೆ ಈ ಸಾತ್ಯಕಿ ಮಾತ್ರ ಪಾಂಡವರ ಪರ ನಿಂತು ಕೌರವ ವೀರರ ತಲೆ ಕಡಿದು ಹಾಕ್ತಾ ಇರ್ತಾನೆ. ಆತ ಎಷ್ಟು ವೀರನಾಗಿದ್ದ ಎಂದರೆ ದುರ್ಯೋದನ ದ್ರೋಣ ಭೀಶ್ಮರು ಕೂಡಾ ಆತನ ಶೌರ್ಯ ಕಂಡು ಹಣೆಯಲ್ಲಿ ಬೆವರು ಮೂಡುವ ರೀತಿ ಮಾಡಿ ಬಿಡುತ್ತಾನೆ. ಮಹಾಭಾರತದ ಯುದ್ಧದಲ್ಲಿ ಕರ್ಣನನ್ನ ಎರಡು ಬಾರಿ ದ್ವಂದ್ವದಲ್ಲಿ ಸೋಲಿಸಿ ಇನ್ನೂ ಎರಡು ಬಾರಿ ಸಮಬಲದ ಹೊರಟ ಕೊಡ್ತಾನೆ.

ಒಂದು ಬಾರಿ ನರಕಾಸುರನ ಮಗ ಭಗದತ್ತನ ಆನೆ ಈ ಸಾತ್ಯಕಿಯನ್ನ ಆತನ ರಥದ ಸಮೇತ ಯುದ್ಧ ರಂಗದಿಂದ ಹೊರಗಡೆ ಎಸೆದಿದ್ದರೂ ಮರಳಿ ಎದ್ದು ಯುದ್ಧರಂಗಕ್ಕೆ ಬಂದಿದ್ದ. ಅಷ್ಟೇ ಅಲ್ಲ ಆತನ ಜೊತೆಗೆ ಮತ್ತೆ ಯುದ್ಧಕ್ಕೆ ನಿಲ್ತಾನೆ ಈ ಸಾತ್ಯಕಿ.  ಇನ್ನೂ ಒಮ್ಮೆ ನಾಲ್ಕು ಐದು ಜನ ಕೌರವ ವೀರರು ಒಮ್ಮೆಲೇ ಭೀಮನನ್ನ ತಡವಿಕೊಂಡು ಯುದ್ಧ ಮಾಡ್ತಾ ಇರ್ತಾರೆ. ಇಲ್ಲಿ ಆನೆಯಿಂದ ಗಾಯಗೊಂಡ ಭೀಮನ ಕೈ ಸೋಲುವ ಹಂತಕ್ಕೆ ಬಂದು ಇನ್ನೇನು ಭೀಮನನ್ನ ಕೌರವ ಸೇನೆ ಕಥೆ ಮುಗಿಸಿ ಬಿಡ್ತು ಅನ್ನೋವಾಗಲೆ ಬರುವ ಸಾತ್ಯಕಿ ಭೀಮನ ಬೆಂಬಲಕ್ಕೆ ನಿಂತು ಹೋರಾಟ ಮಾಡ್ತಾನೆ

ಇಡೀ ಮಹಾಭಾರತದ ಯುದ್ಧದಲ್ಲಿ ಕೌರವರ ಗುರಿ ಇದ್ದಿದು ಧರ್ಮನಂದನ. ಅವನನ್ನು ಸೆರೆ ಹಿಡ್ಕೊಂಡು ಹೋಗೋದಕ್ಕೆ ಹಲವಾರು ಬಾರಿ ಯೋಜನೆ ಹಾಕುವ ಕೌರವರ ಯೋಜನೆಯನ್ನ ಒಬ್ಬರಲ್ಲ ಒಬ್ಬ ಪಾಂಡವ ಸೇನಾಪತಿಗಳು ತಡಿತಾ ಇದ್ರು. 
ಒಂದು ವೇಳೆಯಲ್ಲಿ ಧರ್ಮಜನ ಬಳಿ ಯಾರೂ ಇಲ್ಲ, ಇನ್ನೇನು ಸೆರೆ ಸಿಕ್ಕ ಅನ್ನುವಸ್ಟರಲ್ಲಿ ಅಲ್ಲಿಗೆ ಬಿಟ್ಟ ಬಾಣದ ರೀತಿ ಬಂದು ಬಿಡ್ತಾ ಇದ್ದದ್ದು ಇದೆ ಸಾತ್ಯಕಿ.ಹಲವು ಬಾರಿ ಧರ್ಮರಾಯನ ಸಹಾಯಕ್ಕೆ ಬರ್ತಾ ಇದ್ದ ಈ ಸಾತ್ಯಕಿ ಅವನ್ನು ತನ್ನ ರಥಕ್ಕೆ ಏರಿಸಿಕೊಂಡು ವಾಯುವೇಗದಲ್ಲಿ ಶತ್ರುಗಳ ಕಣ್ಣಿಂದ ಮರೆಯಾಗಿ ಧರ್ಮರಾಯನನ್ನ ಕಾಪಾಡಿ ಬಿಡ್ತಾ ಇದ್ದ. ಆದ್ಯಲ್ಲಿನಿಂದ ಆ ಪುಣ್ಯಾತ್ಮನಿಗೆ ಈ ಮಾಹಿತಿ ಸಿಗತ್ತೆ ಅನ್ನೋದನ್ನ ಯೋಚನೆ ಮಾಡಿಯೇ ಕೌರವರ ಶಿಬಿರ ಸುಸ್ತು ಹೊಡಿತಾ ಇತ್ತು ಹಾಗಿತ್ತು ಆತನ ಆ ರಥದ ವೇಗ, ಆತನ ಶಸ್ತ್ರ ನೈಪುಣ್ಯತೆ. ಹಲವು ಬಾರಿ ಧರ್ಮರಾಯನ ರಕ್ಷಣೆ ಜವಾಬ್ದಾರಿಯನ್ನ ಪಾಂಡವರು ಈತನ ಕೊಡ್ತಾರೆ. ಅದನ್ನ ಈತ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗ್ತಾನೆ

ಒಮ್ಮೆ ಭೂರಿಶ್ರವ ಮತ್ತು ಸಾತ್ಯಕಿ ಯುದ್ಧದಲ್ಲಿ ನಿರತರಾಗಿದ್ದಾಗ ತನ್ನ ಮಕ್ಕಳ ಸಾವಿನಿಂದ ವಿಚಲಿತನಾಗುವ ಯುಯುಧು ಇದರಿಂದ ಆತನ ಕೈಯಿಂದ ಕತ್ತಿ ಜಾರಿ ಕೆಳಗಡೆ ಬೀಳುತ್ತೆ ಇದನ್ನೇ ಕಾದು ನಿಂತಿದ್ದ ಭೂರಿಶ್ರವ ಇನ್ನೇನು ಕತ್ತಿ ಬೀಸಿ ಯುಯುಧುವಿನ ತಲೆ ಕತ್ತರಿಸಿ ಹಾಕ್ಬೇಕು ಅಷ್ಟರಲ್ಲಿ ಬಂದ ಅರ್ಜುನನ ಬಾಣ ಭೂರಿಶ್ರವನ ಕೈ ಎರಡನ್ನು ಕತ್ತರಿಸಿ ಹಾಕಿ ಬಿಡುತ್ತೆ. (ಇದು ಯುದ್ಧ ನೀತಿಗೆ ವಿರುದ್ಧ. ಇಬ್ಬರು ಯುದ್ಧ ಮಾಡುವ ಸಮಯದಲ್ಲಿ ಮೂರನೇ ವ್ಯಕ್ತಿ ಅದರಲ್ಲಿ ಹಸ್ತಕ್ಷೇಪ ಮಾಡ್ಬಾರ್ದು. ಆದರೆ ಇಡೀ ನಾರಾಯಣ ಸೇನೆ ಕೌರವರ ಪರ ಇದ್ದಾಗಲೂ ತನ್ನ ಸೇನಾಪತಿ ಪಟ್ಟ ತ್ಯಾಗ ಮಾಡಿ ಈ ಯುಯುಧು ಪಾಂಡವರ ಪರ ನಿಂತ ಕಾರಣ “ಸಾತ್ಯಕಿ ನೀನು ನನ್ನ ಕಣ್ಣಳತೆಯಲ್ಲಿ ಯುದ್ಧ ಮಾಡೋ ಸಮಯದಲ್ಲಿ ನಿನ್ನ ಒಂದೇ ಒಂದು ಕೂದಲು ಕೊಂಕೊದಕ್ಕೂ ನಾನು ಬಿಡಲ್ಲ ” ಅನ್ನೋ ವಚನ ಕೊಟ್ಟಿರೋ ಕಾರಣ ಅರ್ಜುನ ಅಲ್ಲಿ ಮಧ್ಯ ಪ್ರವೇಶ ಮಾಡ್ತಾನೆ )

ಇದರಿಂದ ಭೂರಿಶ್ರವ ಯುದ್ಧರಂಗದಲ್ಲಿಯೇ ಧರಣಿ ಶುರು ಮಾಡಿ ಬಿಡ್ತಾನೆ. ಮೊದಲೇ ಮೂಗಿನ ಮೇಲೆ ಕೋಪ ಹೊಂದಿರುವ ವ್ಯಕ್ತಿತ್ವದವನಾದ ಯುಯುಧುವಿನ ಕೋಪಕ್ಕೆ ತುಪ್ಪ ಸುರಿದಿದ್ದು ಆತನ ಮಕ್ಕಳ ಸಾವು. ( ಯುಯುಧುವನ್ನು ರಕ್ಷಣೆ ಮಾಡಲು ಬಂದ ಯುಯುಧುವಿನ ಮಕ್ಕಳನ್ನ ಈ ಭೂರಿಶ್ರವ ಯುಯುಧುವಿನ ಕಣ್ಣ ಮುಂದೆ ಸಾಯಿಸಿ ಬಿಡ್ತಾನೆ )
ಹೀಗಾಗಿ ಯುಯುಧು ನಿರಾಯುಧನಾಗಿದ್ದ ಬೂರಿಶ್ರವನ ತಲೆ ಕಡಿತಾನೆ.

ಮುಂದೆ ಯುದ್ಧ ಮುಗಿಯುತ್ತೆ. ಯುದ್ಧ ಮುಗಿದ ಮೇಲೂ ಬದುಕಿ ಉಳಿಯುವ ಈ ಯಾದವ ವೀರ ಮುಂದೆ ಈತ ಯಾದವ ಕುಲದ ಸರ್ವನಾಶಕ್ಕೆ ಮುನ್ನುಡಿ ಬರೀತಾನೆ. 

(ಅರಳಿಮರ ಓದುಗರಾದ ಆನಂದ್ ಶೆಟ್ಟಿ ಕಳುಹಿಸಿಕೊಟ್ಟ ಕಥೆ)

 

Leave a Reply