ಮಾರುತಿಯ ಅಷ್ಟೋತ್ತರ ಶತಮನಾಮಗಳು ಮತ್ತು ಅರ್ಥ ~ ನಿತ್ಯಪಾಠ

ಹನುಮ ಅಷ್ಟೋತ್ತರ ಶತನಾಮಾವಳಿಯಲ್ಲಿ ಹನುಮಂತನ 108 ಹೆಸರುಗಳನ್ನು ಹೇಳಿಕೊಂಡು ನಮಸ್ಕರಿಸವುದು ಪರಿಪಾಠ. ಅಷ್ಟೋತ್ತರ ಶತನಾಮಾವಳಿಯ ಈ 108 ಹೆಸರುಗಳು ಮತ್ತು ಕನ್ನಡ ಅರ್ಥ / ಹಿನ್ನೆಲೆ ಇಲ್ಲಿದೆ :

ಇಲ್ಲಿ ಸಂಸ್ಕೃತದಲ್ಲಿರುವ ಪ್ರತಿ ಹೆಸರಿಗೂ ‘ಓಂ – ನಮಃ’ ಸೇರಿಸಿಕೊಂಡು – ‘ಓಂ ಆಂಜನೇಯಾಯ ನಮಃ, ಓಂ ಮಹಾವೀರಾಯ ನಮಃ , ಓಂ ಹನುಮತೇ ನಮಃ’ – ಹೀಗೆ ಪಠಿಸಬೇಕು. ಈ ಹನೂಮದ್ ಅಷ್ಟೋತ್ತರ ಶತನಾಮಾವಳಿಯ ನಿತ್ಯಪಠಣದಿಂದ ವಿದ್ಯಾಬುದ್ಧಿಗಳೂ ಆಯುರಾರೋಗ್ಯ ಐಶ್ವರ್ಯಗಳೂ ವೃದ್ಧಿಯಾಗುವವು ಎಂಬ ನಂಬಿಕೆ ಇದೆ. ಶ್ರೀರಾಮನಲ್ಲಿ ಭಕ್ತಿ ನೆಲೆಗೊಳ್ಳುವುದು. ವಿಶೇಷವಾಗಿ ಶನಿವಾರ ಪಠಿಸಿದರೆ ಶನಿಬಾಧೆ ನಿವಾರಣೆಯಾಗುತ್ತದೆ ಎನ್ನಲಾಗಿದೆ.

1.ಆಂಜನೇಯ ಅಂಜನಿಯ ಪುತ್ರನಿಗೆ ನಮಸ್ಕಾರ
2.ಮಹಾವೀರಾಯ ವೀರರಲ್ಲಿ ವೀರನಾದವನಿಗೆ ನಮಸ್ಕಾರ
3.ಹನುಮತೇಹನುಮಂತನಿಗೆ ನಮಸ್ಕಾರ
4.ಮಾರುತಾತ್ಮಜಾಯಮರುತ್ತಿನ ಪುತ್ರನಿಗೆ ನಮಸ್ಕಾರ
5.ತತ್ತ್ವಜ್ಞಾನ ಪ್ರದಾಯತತ್ವಜ್ಞಾನಿಯೂ, ತತ್ತ್ವಜ್ಞಾನದ ಅರಿವನ್ನು ನೀಡುವವನೂ ಆದವನಿಗೆ ನಮಸ್ಕಾರ
6.ಸೀತಾದೇವಿ ಮುದ್ರಾ ಪ್ರದಾಯಕಾಯಸೀತಾದೇವಿಯ ಬಳಿ ರಾಮನ ಮುದ್ರೆಯನ್ನು ಕೊಂಡೊಯ್ದವನಿಗೆ ನಮಸ್ಕಾರ
7.ಅಶೋಕವನ ಚರಿತ್ರೆಅಶೋಕವನ ಹೊಕ್ಕವನಿಗೆ (ಅಲ್ಲಿ ಸೀತಾದೇವಿಯನ್ನು ಪತ್ತೆ ಮಾಡಿದವನಿಗೆ) ನಮಸ್ಕಾರ
8.ಸರ್ವ ಮಯಿ ವಿಭಾನನಾಯಎಲ್ಲೆಡೆ ತನ್ನ ಕಾಂತಿ ತುಂಬಿ ಶೋಭಿಸುವವನಿಗೆ ನಮಸ್ಕಾರ
9.ಸರ್ವ ಬಂಧ ವಿಮೋಕ್ಟ್ರೆಎಲ್ಲ ಬಗೆಯ ಬಂಧನಗಳಿಂದ ಮುಕ್ತಗೊಳಿಸುವವನಿಗೆ ನಮಸ್ಕಾರ
10.ರಕ್ಷೋ ವಿದ್ವಾನ್ ಸಾಕಾರಕಾಯಪಾಂಡಿತ್ಯದ ಮೂರ್ತರೂಪನೇ ನಿನಗೆ ನಮಸ್ಕಾರ
11.ಪರವಿದ್ಯಾ ಪರಿಹಾರಾಯಮತ್ತೊಬ್ಬರು ತಮ್ಮ ವಿದ್ಯೆಯಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
12.ಪರ ಶೌರ್ಯ ವಿನಾಶ ಕಾಯಮತ್ತೊಬ್ಬರು ತಮ್ಮ ಶೌರ್ಯದಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
13.ಪರ ಮಂತ್ರ ನಿರಾಕರತ್ರೆಮತ್ತೊಬ್ಬರು ಮಂತ್ರಪ್ರಯೋಗದಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
14.ಪರ ಯಂತ್ರ ಪ್ರಬೋಧ ಕಾಯಮತ್ತೊಬ್ಬರು ಯಂತ್ರ ಪ್ರಯೋಗದಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
15.ಸರ್ವಗ್ರಹ ವಿನಾಶಿನೆಗ್ರಹಚಾರಗಳನ್ನು ನಿವಾರಿಸುವವನಿಗೆ ನಮಸ್ಕಾರ
16.ಭೀಮ ಸೇನ ಸಹಾಯಕ್ರಿತೆಭೀಮಸೇನನಿಗೆ ಸಹಾಯ ಮಾಡಿದ ನಿನಗೆ ನಮಸ್ಕಾರ
17.ಸರ್ವ ದುಃಖ ಹರಾಯಎಲ್ಲ ಬಗೆಯ ದುಃಖಗಳನ್ನು ಪರಿಹರಿಸುವವನಿಗೆ ನಮಸ್ಕಾರ
18.ಸರ್ವಲೋಕ ಚಾರಿಣೆಸಕಲ ಲೋಕಗಳಲ್ಲೂ ಸಂಚರಿಸಬಲ್ಲವನಿಗೆ ನಮಸ್ಕಾರ
19.ಮನೋಜವಾಯಮನೋವೇಗದಲ್ಲಿ ಚಲಿಸಬಲ್ಲವನೇ, ನಮಸ್ಕಾರ
20.ಪಾರಿಜಾತ ದೃಮೂಲಸ್ಥಾಯಪಾರಿಜಾತ ವೃಕ್ಷದ ಕೆಳಗೆ ಕುಳಿತವನೇ ನಿನಗೆ ನಮಸ್ಕಾರ
21.ಸರ್ವ ಮಂತ್ರ ಸ್ವರೂಪಾಯಸಕಲ ಮಂತ್ರ ಸ್ವರೂಪಿಯಾದ ನಿನಗೆ ನಮಸ್ಕಾರ
22.ಸರ್ವ ತಂತ್ರ ಸ್ವರೂಪಿಣೇಸಕಲ ತಂತ್ರ ಸ್ವರೂಪಿಯಾದ ನಿನಗೆ ನಮಸ್ಕಾರ
23.ಸರ್ವ ಯಂತ್ರಾತ್ಮಕಾಯಸಕಲ ಯಂತ್ರ ಸ್ವರೂಪಿಯಾದ ನಿನಗೆ ನಮಸ್ಕಾರ
24.ಕಪೀಶ್ವರಾಯಕಪೀಶ್ವರನೇ, ನಿನಗೆ ನಮಸ್ಕಾರ
25.ಮಹಾ ಕಾಯಾಯಮಹಾಕಾಯನಾದ ನಿನಗೆ ನಮಸ್ಕಾರ
26.ಸರ್ವರೋಗ ಹರಾಯಸಕಲ ರೋಗಗಳನ್ನು ಪರಿಹರಿಸುವವನೇ, ನಮಸ್ಕಾರ
27.ಪ್ರಭಾವೇ ಪ್ರಭಾವಶಾಲಿಯಾದ ನಿನಗೆ ನಮಸ್ಕಾರ
28.ಬಲ ಸಿದ್ದಿ ಕರಾಯಬಲವನ್ನೂ ಸಿದ್ಧಿಯನ್ನೂ ದಯಪಾಲಿಸುವವನೇ, ನಮಸ್ಕಾರ
29.ಸರ್ವ ವಿದ್ಯಾ ಸಂಪತ್ತು ಪ್ರದಾಯಕಾಯಸಕಲ ವಿದ್ಯೆಗಳನ್ನೂ ಸಂಪತ್ತನ್ನೂ ಕರುಣಿಸುವವನೇ, ನಮಸ್ಕಾರ
30.ಕಪಿ ಸೇನಾನಾಯಕಾಯಕಪಿಸೇನೆಯ ನಾಯಕನೇ, ನಮಸ್ಕಾರ
31.ಭವಿಷ್ಯತ್ ಚತುರಾನನಾಯನಾಲ್ಕು ಮುಖಗಳನ್ನು ಹೊಂದಿರುವವನೇ, ನಮಸ್ಕಾರ
32.ಕುಮಾರ ಬ್ರಹ್ಮಚಾರಿಣೆಬ್ರಹ್ಮಚಾರಿಯೇ, ನಿನಗೆ ನಮಸ್ಕಾರ
33.ರತ್ನ ಕುಂಡಲಾಯರತ್ನಕುಂಡಲಗಳನ್ನು ಧರಿಸಿದವನೇ, ನಿನಗೆ ನಮಸ್ಕಾರ
34.ದೀಪ್ತಿ ಮತೇ – ದೀಪದಂತೆ ಬೆಳಗುವವನೇ, ನಮಸ್ಕಾರ
35.ಚಂಚಲ ದ್ವಾಲಸನ್ನದಾಯಚಂಚಲನೇತ್ರನೇ ನಿನಗೆ ನಮಸ್ಕಾರ
36.ಲಂಬಾ ಮಾನಶೀಕೋ ಜ್ವಾಲಾಯಜ್ವಾಲೆಯಂತೆ ಶೋಭಿಸುವವನೇ, ನಮಸ್ಕಾರ
37.ಗಂಧರ್ವ ವಿದ್ಯಾಯ – ಗಂಧರ್ವ ವಿದ್ಯೆ ನಲ್ಲವನೇ, ನಿನಗೆ ನಮಸ್ಕಾರ
38.ತತ್ತ್ವಜ್ಞಾನಾಯತತ್ವಜ್ಞಾನಿಯೇ, ನಿನಗೆ ನಮಸ್ಕಾರ
39.ಮಹಾಬಲ ಪರಾಕ್ರಮಾಯಮಹಾಬಲ – ಪರಾಕ್ರಮಿಯೇ, ನಿನಗೆ ನಮಸ್ಕಾರ
40.ಕಾರಾಗ್ರಹ ವಿಮೋಕ್ತ್ರೆಸೆರೆಮನೆಯಿಂದ ಮುಕ್ತಗೊಳಿಸುವವನೇ, ನಿನಗೆ ನಮಸ್ಕಾರ
41.ಶ್ರೀಂಕಲ ಬಂಧ ಮೋಚಕಾಯಬಂಧಮುಕ್ತಗೊಳಿಸುವವನೇ, ನಿನಗೆ ನಮಸ್ಕಾರ
42.ಸಾಗರೋತ್ತರಕಾಯಸಾಗರವನ್ನು ದಾಟಿದವನೇ, ನಿನಗೆ ನಮಸ್ಕಾರ
43.ಪ್ರಗ್ಯಾಯಸ್ವತಃ ಪ್ರಜ್ಞೆಯಾಗಿರುವವನೇ, ನಿನಗೆ ನಮಸ್ಕಾರ
44.ರಾಮದೂತಾಯರಾಮದೂತನೇ, ನಿನಗೆ ನಮಸ್ಕಾರ

45.ರಾಮ ದೇವತಾಯ – ಶ್ರೀರಾಮನ ಸಹಚಾರಿಯೇ, ನಿನಗೆ ನಮಸ್ಕಾರ
46.ಪ್ರತಾಪವತೇ – ಪ್ರತಾಪಿಯಾದ ನಿನಗೆ ನಮಸ್ಕಾರ
47.ಕೇಸರಿ ಸುತಾಯಕೇಸರಿಯ ಮಗನೇ ನಿನಗೆ ನಮಸ್ಕಾರ
48.ಸೀತಾ ಶೋಕ ನಿವಾರಕಾಯಸೀತೆಯ ಶೋಕ ಪರಿಹರಿಸಿದ ನಿನಗೆ ನಮಸ್ಕಾರ
49.ಅಂಜನಾ ಗರ್ಭ ಸಂಭೂತಾಯಅಂಜನೆಯ ಗರ್ಭದಲ್ಲಿ ಜನಿಸಿದ ನಿನಗೆ ನಮಸ್ಕಾರ
50.ಬಾಲ ರಕ್ಷಾದ್ರಶಾನನಾಯಮಕ್ಕಳ ರಕ್ಷಣೆ ಮಾಡುವವನೇ, ನಿನಗೆ ನಮಸ್ಕಾರ
51.ವಿಭೀಷಣ ಪ್ರಿಯಕರಾಯವಿಭೀಷಣನಿಗೆ ಪ್ರಿಯನಾದವನೇ, ನಿನಗೆ ನಮಸ್ಕಾರ
52.ದಶಗ್ರೀವ ಕೂಲಂಥಕಾಯದಶಗ್ರೀವನಿಗೆ ಪಾಠ ಕಲಿಸಿದವನೇ, ನಿನಗೆ ನಮಸ್ಕಾರ
53.ಲಕ್ಷ್ಮಣ ಪ್ರಾಣ ದಾತ್ರೇ – ಲಕ್ಷ್ಮಣನ ಪ್ರಾಣ ರಕ್ಷಣೆ ಮಾಡಿದ ನಿನಗೆ ನಮಸ್ಕಾರ
54.ವಜ್ರಕಾಯಾಯವಜ್ರದೇಹಿಯಾದ ನಿನಗೆ ನಮಸ್ಕಾರ
55.ಮಹಾದ್ಯುತಾಯಮಹಾದ್ಯುತಿಯಾದ ನಿನಗೆ ನಮಸ್ಕಾರ
56.ಚಿರಂಜೀವಿನೆಚಿರಂಜೀವಿಯಾದ ನಿನಗೆ ನಮಸ್ಕಾರ
57.ರಾಮ ಭಕ್ತಾಯರಾಮಭಕ್ತನಾದ ನಿನಗೆ ನಮಸ್ಕಾರ
58.ದೈತ್ಯ ಕಾರ್ಯ ವಿಘ್ನಕಾಯದೈತ್ಯರ ಕೃತ್ಯಗಳಿಗೆ ಅಡ್ಡಿಯಾಗಿ ನಿಲ್ಲುವವನೇ, ನಿನಗೆ ನಮಸ್ಕಾರ
59.ಅಕ್ಷಹಂತ್ರೆಅಕ್ಷನಿವಾರಕನೇ ನಿನಗೆ ನಮಸ್ಕಾರ
60.ಕಜಾರಚನಭಯಕಜಾರಚನ ಭಯನೇ ನಿನಗೆ ನಮಸ್ಕಾರ
61.ಪಜಂಚ ವಕ್ರತಾಯಪಜಂಚ ವಕ್ರನೇ ನಿನಗೆ ನಮಸ್ಕಾರ
62.ಮಹಾತಪಸ್ಸೀಮಹಾತಪಸ್ವಿಯೇ, ನಿನಗೆ ನಮಸ್ಕಾರ
63.ಲಂಕಿಣಿ ಭಂಜನಾಯಲಂಕಿಣಿಯನ್ನು ದಮನ ಮಾಡಿದವನೇ ನಿನಗೆ ನಮಸ್ಕಾರ
64.ಶ್ರೀಮತೇ – ಶ್ರೀಮಂತಿಕೆಯಿಂದ ತುಂಬಿದವನೇ, ನಿನಗೆ ನಮಸ್ಕಾರ
65.ಸಿಂಹಿಕಾ ಪ್ರಾಣ ಭಂಜನಾಯಸಿಂಹಿಕೆಯ ಪ್ರಾಣಹರಣ ಮಾಡಿದವನೇ, ನಿನಗೆ ನಮಸ್ಕಾರ
66.ಗಂಧಮಾರನ ಶೈಲಸುತಾಯಗಂಧಮಾದನ ಪರ್ವತದಲ್ಲಿ ಬೆಳೆದವನೇ, ನಿನಗೆ ನಮಸ್ಕಾರ
67.ಲಂಕಾಪುರ ವಿದ್ಯಾಯಕಾಯಲಂಕಾಪುರಿಗೆ ಪಾಠ ಕಲಿಸಿದವನೇ, ನಿನಗೆ ನಮಸ್ಕಾರ
68.ಸುಗ್ರೀವ ಸಚಿವಾಯಸುಗ್ರೀವನ ಮಂತ್ರಿಯಾ ನಿನಗೆ ನಮಸ್ಕಾರ
69.ಧೀರಾಯಧೀರನಾದ ನಿನಗೆ ನಮಸ್ಕಾರ
70.ಶೂರಾಯಶೂರನಾದ ನಿನಗೆ ನಮಸ್ಕಾರ
71.ದೈತ್ಯ ಕೂಲಾಂತಕಾಯದೈತ್ಯರಿಗೆ ಪಾಠ ಕಲಿಸಿದ ನಿನಗೆ ನಮಸ್ಕಾರ
72.ಸುವರ್ಚಲಾಯ ಚಿತ್ತಾಯಸುವರ್ಲೋಕದಲ್ಲಿ ನೆಲೆಸಿದವನೇ, ನಿನಗೆ ನಮಸ್ಕಾರ
73.ತೇಜಸೇತೇಜಸ್ವಿಯೇ ನಿನಗೆ ನಮಸ್ಕಾರ

74.ರಾಮಚೂಡಾಮಣಿ ಪ್ರದಾಯ ಕಾಯರಾಮ ನೀಡಿದ ಚೂಡಾಮಣಿಯನ್ನು ಸೀತೆಗೆ ತಲುಪಿಸದವನೇ, ನಿನಗೆ ನಮಸ್ಕಾರ
75.ಕಾಮರೂಪಿಣೇ – ಕಾಂರೂಪಿಯೇ ನಿನಗೆ ನಮಸ್ಕಾರ
76.ಪಿಂಗಳಾಕ್ಷಯಪಿಂಗಳಾಕ್ಷನೇ, ನಿನಗೆ ನಮಸ್ಕಾರ
77.ವರಾದಿ ಮಾನಕ ಪೂಜಿತಾಯ ವರಾದಿಗಳಿಂದ ಪೂಜಿಸಲ್ಪಡುವವನೇ, ನಿನಗೆ ನಮಸ್ಕಾರ
78.ಕಂಬಳಿ ಕೃತ ಮಾರ್ತಾಂಡ ಮಂಡಲಾಯಕಂಬಳಿಯಿಂದ ರಚಿಸಲ್ಪಟ್ಟ ಮಾರ್ತಾಂಡ ಮಂಡಲದಲ್ಲಿ ನೆಲೆಸಿದವನೇ, ನಿನಗೆ ನಮಸ್ಕಾರ
79.ವಿಜಿತೇಂದ್ರಯಾಯಾಇಂದ್ರನನ್ನು ಗೆದ್ದವನೇ, ನಿನಗೆ ನಮಸ್ಕಾರ
80.ರಾಮ ಸುಗ್ರೀವ ಸಂದಾತ್ರೇರಾಮ – ಸುಗ್ರೀವರ ನಿಷ್ಠನೇ, ನಿನಗೆ ನಮಸ್ಕಾರ
81.ಮಹೀರಾವಣ ಮರ್ಧನಾಯಮಹಿರಾವಣನನ್ನು ಮರ್ದಿಸಿದವನೇ, ನಿನಗೆ ನಮಸ್ಕಾರ
82.ಸ್ಪತಿಕಾಭಯಸ್ಪತಿಕಾಭಯ ಉಂಟು ಮಾಡಿದವನೇ, ನಿನಗೆ ನಮಸ್ಕಾರ
83.ವಾಗದೀಶಾಯವಾಕ್ಕಿನ ಒಡೆಯನೇ ನಿನಗೆ ನಮಸ್ಕಾರ
84.ನವ ವ್ಯಾಕ್ರಿತ ಪಂಡಿತಾಯವ್ಯಾಕರಣ ಪಂಡಿತನೇ, ನಿನಗೆ ನಮಸ್ಕಾರ
85.ಚತುರಭಾವೇ – ಚತುರಮತಿಯೇ, ನಿನಗೆ ನಮಸ್ಕಾರ
86.ದೀನ ಬಂಧು ಧಾರಾಯದೀನಬಂಧುವೇ, ನಿನಗೆ ನಮಸ್ಕಾರ
87.ಮಾಯಾತ್ಮನೇಮಾಯಾವಿಯೇ, ನಿನಗೆ ನಮಸ್ಕಾರ
88.ಭಕ್ತ ವತ್ಸಲಾಯಭಕ್ತವತ್ಸಲನೇ, ನಿನಗೆ ನಮಸ್ಕಾರ
89.ಸಂಜೀವಿನಿ ಆಗ್ಯಾರ್ಥಾಯಸಂಜೀವಿನಿಯನ್ನು ಹೊತ್ತು ತಂದವನೇ, ನಿನಗೆ ನಮಸ್ಕಾರ
90.ಸುಚಯೇ ಸುಚಯನೇ, ನಿನಗೆ ನಮಸ್ಕಾರ
91.ವಾಗ್ಮಿನೇವಾಗ್ಮಿಯೇ, ನಿನಗೆ ನಮಸ್ಕಾರ
92.ತ್ರಿದವರ್ತಾಯತ್ರಿದವರ್ತನೇ, ನಿನಗೆ ನಮಸ್ಕಾರ
93.ಕಾಲನೇಮಿ ಪರಮಾತ್ಮನಾಯಕಾಲನೇಮಿ ಪರಮಾತ್ಮನೇ, ನಿನಗೆ ನಮಸ್ಕಾರ
94.ಹರಿಮರ್ಕಟ ಮರ್ಕಟಾಯಹರಿಮರ್ಕಟ ರೂಪಿಯೇ ನಿನಗೆ ನಮಸ್ಕಾರ
95.ದಂತಾಯಹಲ್ಲುಗಳನ್ನು ತೋರಿಸುತ್ತಾ ಉಗ್ರರೂಪ ತಾಳಿದವನೇ, ನಿನಗೆ ನಮಸ್ಕಾರ
96.ಶಾಂತಾಯಶಾಂತರೂಪನೇ, ನಿನಗೆ ನಮಸ್ಕಾರ
97.ಪ್ರಸನ್ನಾತ್ಮನೇಪ್ರಸನ್ನನಾಗಿ ಕುಳಿತಿರುವ ನಿನಗೆ ನಮಸ್ಕಾರ
98.ಶಾಂತ ಕಾಂತಮುದ ಪಹರತ್ತೇಶಾಂತಿಯ ಕಾಂತಿಯಿಂದ ಶೋಭೀಸುತ್ತಿರುವ ನಿನಗೆ ನಮಸ್ಕಾರ
99.ಯೋಗಿಣೇಯೋಗಿಯಾದ ನಿನಗೆ ನಮಸ್ಕಾರ
100.ರಾಮಕಥಾ ಲೋಲಾಯರಾಮಕಥೆಯಲ್ಲಿ ಸಂತೋಷ ಕಾಣುವವನಾದ ನಿನಗೆ ನಮಸ್ಕಾರ
101.ಸೀತಾನ್ವೇಷಣೆ ಪತಿತಾಯಸೀತಾನ್ವೇಷಣೆಯಲ್ಲಿ ತೊಡಗಿಕೊಂಡಿದ್ದ ನಿನಗೆ ನಮಸ್ಕಾರ
102.ವಜ್ರದನುಷ್ಠಾಯವಜ್ರಧನು ಹಿಡಿದವನಿಗೆ ನಮಸ್ಕಾರ
103.ವಜ್ರನಾಯಕಾಯವಜ್ರದೇಹಿಗಳ ನಾಯಕನಿಗೆ ನಮಸ್ಕಾರ
104.ರುದ್ರವೀರ್ಯ ಸಮದ್ಭವಾಯರುದ್ರನ ವೀರ್ಯದಿಂದ ಜನಿಸಿದವನಿಗೆ ನಮಸ್ಕಾರ
105.ಇಂದ್ರಜಿತಪ್ರಹಿತ ಮೋಗರ್ಭ ಬ್ರಹ್ಮಾಸ್ತ್ರ ವಿನಿವಾರಕಾಯಇಂದ್ರಜಿತನು ಪ್ರಯೋಗಿಸಿದ ಬ್ರಹ್ಮಾಸ್ತ್ರ ನಿವಾರಿಸಿದವನಿಗೆ ನಮಸ್ಕಾರ
106.ಪಾರ್ಥ ಧ್ವಜಾಗ್ರಸ ವಾಸಿನೇಅರ್ಜುನನ ಧ್ವಜದಲ್ಲಿ ನೆಲೆಸಿದವನೇ, ನಿನಗೆ ನಮಸ್ಕಾರ
107.ದಶಭಾವೇ – ದಶಭಾವಯುಕ್ತನೇ, ನಿನಗೆ ನಮಸ್ಕಾರ
108.ಲೋಕಪೂಜ್ಯಾಯಲೋಕಪೂಜಿತನೇ, ನಿನಗೆ ನಮಸ್ಕಾರ

Leave a Reply