ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #29

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ನೀವು
ಇನ್ನೊಬ್ಬರ ಬಗ್ಗೆ ಆಡಿರಬಹುದಾದ
ಒಳ್ಳೆಯ ಅಥವಾ ಕೆಟ್ಟ ಮಾತು,
ತಿರುಗಿ ವಾಪಸ್ ಬಂದು
ನಿಮ್ಮ ಅಂತಃಕರಣವನ್ನೇ ಮುಟ್ಟುವುದು.

ನಿಮ್ಮ ಬಗ್ಗೆ
ಕೆಟ್ಟ ವಿಚಾರಗಳನ್ನು ಪೋಷಿಸುತ್ತಿರುವ
ವ್ಯಕ್ತಿಯೊಬ್ಬನ ಬಗ್ಗೆ,
ನೀವೂ ಕೆಟ್ಟ ಭಾವನೆಗಳನ್ನೇ
ಇಟ್ಟುಕೊಳ್ಳವುದು
ಪರಿಸ್ಥಿತಿಯನ್ನು ಇನ್ನೂ ಅಪಾಯ ಅಂಚಿಗೆ
ಎಳೆದುಕೊಂಡು ಹೋದಂತೆ.

ಕೆಡುಕಿನ ವಿಷ ವರ್ತುಲದಲ್ಲಿ ಸಿಕ್ಕು
ನೀವು, ಇನ್ನಿಲ್ಲದಂತೆ ಒದ್ದಾಡುವಿರಿ.

ನನ್ನದೊಂದು ಸಲಹೆ,

ನಲವತ್ತು ಹಗಲು, ನಲವತ್ತು ರಾತ್ರಿ
ಆ ಮನುಷ್ಯನ ಬಗ್ಗೆ
ಒಳ್ಳೆಯದನ್ನೇ ಮಾತನಾಡಿ
ಒಳಿತನ್ನೇ ಹಾರೈಸಿ.

ನಲವತ್ತರ ಅವಧಿ ಮುಗಿಯುತ್ತಿದ್ದಂತೆಯೇ
ಎಲ್ಲವೂ ಬದಲಾಗುವುದು
ಏಕೆಂದರೆ
ನೀವು ಬದಲಾಗಿರುವಿರಿ
ಒಳಗಿನಿಂದ.

28ನೇ ನಿಯಮ ಇಲ್ಲಿ ನೋಡಿ : https://aralimara.com/2020/02/04/sufi-81/

Leave a Reply