ಅಯ್ಯಾ ನೀನು ನಿರಾಕಾರವಾಗಿರ್ದಲ್ಲಿ…. : ಬಸವ ವಚನ

“ನೀನು ಹೇಗೆ ಬರುತ್ತೀಯೋ ನಾನು ಅದಕ್ಕೆ ತಕ್ಕಂತೆ ನಿನ್ನನ್ನು ಎದುರುಗೊಳ್ಳುತ್ತೇನೆ, ನನ್ನಲ್ಲಿ ಹೊತ್ತುಕೊಳ್ಳುತ್ತೇನೆ” ಎಂಬುದು ಈ ವಚನದ ಸರಳ ವಿವರಣೆ. 
basavanna
ಅಯ್ಯಾ ನೀನು ನಿರಾಕಾರವಾಗಿರ್ದಲ್ಲಿ

ನಾನು ಜ್ಞಾನವೆ೦ಬ ವಾಹನವಾಗಿರ್ದೆ ಕಾಣಾ,

ಅಯ್ಯಾ ನೀನು ನಾಟ್ಯಕ್ಕೆ ನಿ೦ದಲ್ಲಿ
ನಾನು ಚೈತನ್ಯವೆ೦ಬ ವಾಹನವಾಗಿರ್ದೆ ಕಾಣಾ,

ಅಯ್ಯಾ ನೀನು ಆಕಾರವಾಗಿರ್ದಲ್ಲಿ
ನಾನು ವೃಷಭನೆ೦ಬ ವಾಹನವಾಗಿರ್ದೆ ಕಾಣಾ,

ಅಯ್ಯಾ ನೀನೆನ್ನ ಭವವ ಕೊ೦ದಿಹೆನೆ೦ದು
ಜ೦ಗಮ-ಲಾ೦ಛನನಾಗಿ ಬ೦ದಲ್ಲಿ
ನಾನು ಭಕ್ತನೆ೦ಬ ವಾಹನನಾಗಿರ್ದೆ
ಕಾಣಾ ಕೂಡಲಸ೦ಗಮದೇವಾ!!
~ ಬಸವಣ್ಣ

“ಭಗವಂತನು  ನಿರಾಕಾರ ಸ್ಥಿತಿಯಲ್ಲಿದ್ದಾಗ ತಾನು ಜ್ಞಾನದ ಮೂಲಕ ದೇವರನ್ನು ಕೊಂಡೊಯ್ದು ಎಲ್ಲರನ್ನು ಬೆಸೆಯುವಂತೆ ಮಾಡುತ್ತೇನೆ; ನಟರಾಜನಾದ ಶಿವನು ನಾಟ್ಯಕ್ಕೆ ನಿಂತಾಗ ತಾನು ಆ ನೃತ್ಯಕ್ಕೆ ಚೈತನ್ಯವನ್ನು ತುಂಬುತ್ತೇನೆ; ಭಗವಂತನು ಸಾಕಾರಿಯಾದಾಗ (ಆಕಾರ ರೂಪ ತಾಳಿದಾಗ) ನಂದಿಯಾಗಿ ತಮ್ಮನ್ನು ಕರೆದೊಯ್ಯುತ್ತೇನೆ; ಜ೦ಗಮ ಲಾ೦ಛನನಾಗಿ ಬ೦ದಲ್ಲಿ, ನಿನ್ನ ಭಕ್ತನಾಗಿ ನಿನ್ನನ್ನು ಹೊತ್ತೊಯ್ಯುತ್ತೇನೆ ” ಎಂದು ಬಸವಣ್ಣ ಈ ವಚನದಲ್ಲಿ ಹೇಳುತ್ತಿದ್ದಾರೆ. 

ಅಸೀಮ ರೂಪಿ ಭಗವಂತನ ಅನಂತ ಸಾಧ್ಯತೆಗಳನ್ನೂ, ಅವಕ್ಕೆ ತಾವು ಸ್ಪಂದಿಸುವ ಬಗೆಯನ್ನೂ; ಆ ಮೂಲಕ ಭಗವಂತನೊಡನೆ ಅವಿನಾಭಾವ ಸಂಬಂಧ ಸ್ಥಾಪಿಸಿಕೊಳ್ಳುವ ಬಗೆಯನ್ನೂ ಬಸವಣ್ಣನವರು ಇಲ್ಲಿ ತಿಳಿಸುತ್ತಿದ್ದಾರೆ. “ನೀನು ಹೇಗೆ ಬರುತ್ತೀಯೋ ನಾನು ಅದಕ್ಕೆ ತಕ್ಕಂತೆ ನಿನ್ನನ್ನು ಎದುರುಗೊಳ್ಳುತ್ತೇನೆ, ನನ್ನಲ್ಲಿ ಹೊತ್ತುಕೊಳ್ಳುತ್ತೇನೆ” ಎಂಬುದು ಈ ವಚನದ ಸರಳ ವಿವರಣೆ. 

2 Comments

  1. *ವಚನ :* ಸಿರಿವಂತನೆಂದು ಅಡಿಗಡಿಗೆ ಕೊಂಬುದು ಉಪಜೀವನದ ಪ್ರಸಾದ ಬಡವನೆಂದು ಮರಿಮಗ್ಗುಲಲ್ಲಿ ಕೊಂಬುದು ತುಡಗಣಿಯ ಪ್ರಸಾದ..
    (0೬:೨೭):ಚನ್ನಬಸವಣ್ಣ.
    ವಿದುಷಿ. ರೇಣುಕಾ ನಾಕೋಡ್.

    ದಯವಿಟ್ಟುಈ ವಚನದ ಅರ್ಥವನ್ನು ಪ್ರಕಟಿಸಿ

Leave a Reply