ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ಜಗತ್ತು ನಿಂತಿರೋದೇ
‘ಕೊಡು-ಕೊಳ್ಳುವಿಕೆ’ ಯ
ಸಿದ್ಧಾಂತದ ಮೇಲೆ.
ಒಂದು ಹನಿ ಅಂತಃಕರಣ,
ಒಂದು ತುಣುಕು ಕೇಡು ಕೂಡ
ಕೊಟ್ಟಿದ್ದಕ್ಕೆ ಮೋಸವಿಲ್ಲದಂತೆ
ವಾಪಸ್ಸಾಗಿ
ಮತ್ತೆ ನಮ್ಮನ್ನು ಸೇರುತ್ತವೆ.
ಯಾರಾದರೂ
ಖೆಡ್ಡಾ ತೋಡುತ್ತಿದ್ದಾರೆಂದರೆ
ನೆನಪಿರಲಿ, ಭಗವಂತ
ಎಲ್ಲರಿಗಿಂತ ದೊಡ್ಡ ತಂತ್ರಗಾರ.
ಈ ಮಾತನ್ನ ಗಟ್ಟಿಯಾಗಿ ನಂಬಿ,
ಒಂದು ಎಲೆ ಕೂಡ ಕಂಪಿಸುವುದಿಲ್ಲ
ಭಗವಂತನ ಅಣತಿಯಿಲ್ಲದೆ.
ಅದ್ಭುತವಾದುದನ್ನೇ ಸೃಷ್ಟಿಸುತ್ತಾನೆ ಭಗವಂತ
ಏನೇ ಸೃಷ್ಟಿಸಿದರು.
32ನೇ ನಿಯಮ ಇಲ್ಲಿ ನೋಡಿ : https://aralimara.com/2020/02/13/sufi-86/
1 Comment