ಅನಾಥಭಾವ ನಿವಾರಿಸುವ ಶಂಖಪಾಣಿ ಶರಣಾಗತಿ ಸ್ತೋತ್ರ

“ನನಗೆ ನನ್ನವರು ಯಾರೂ ಇಲ್ಲ. ನನ್ನ ಸಹಾಯಕ್ಕೆ ಬರುವವರಿಲ್ಲ. ನಾನು ಮಾಡಬೇಕಿದ್ದ ಕೆಲಸಗಳೊಂದನ್ನೂ ಮಾಡಲಿಲ್ಲ. ಶ್ರದ್ಧಾಭಕ್ತಿಯಿಮದ ನಡೆದುಕೊಳ್ಳಲಿಲ್ಲ. ಆದರೆ ಮಹಾವಿಷ್ಣುವೇ! ನಿನಗೆ ಶರಣಾಗುತ್ತಿದ್ದೇನೆ, ದಯವಿಟ್ಟು ಕಾಪಾಡು” ಎಂದು ಬೇಡಿಕೊಳ್ಳುವ ಸ್ತೋತ್ರಗಳಿವು…

ನೋ ಸೋದರೋ ನ ಜನಕೋ ಜನನೀ ನ ಜಾಯಾ
ನೈವಾತ್ಮಜೋ ನ ಚ ಕುಲಂ ವಿಪುಲಂ ಬಲಂ ವಾ |
ಸಂದೃಶ್ಯತೇ ನ ಕಿಲ ಕೋSಪಿ ಸಹಾಯಕೋ ಮೇ
ತಸ್ಮಾತ್ತ್ವಮೇವ ಶರಣಂ ಮಮ ಶಂಖಪಾಣೇ ||
ನನಗೆ ಸೋದರರಿಲ್ಲ. ತಾಯಿ ತಂದೆಯರಿಲ್ಲ. ಹೆಂಡತಿಯಾಘಲೀ ಮಕ್ಕಳಾಗಲೀ ಇಲ್ಲ. ಶಕ್ತಿಸಾಮರ್ಥ್ಯಗಳೂ ಇಲ್ಲ. ನನ್ನ ಸಹಾಯಕ್ಕೆ ಒದಗಿಬರುವವರು ಯಾರೂ ಇಲ್ಲ.
ಆದಕಾರಣ, ಹೇ ಶಂಖಪಾಣಿಯಾದ ಮಹಾವಿಷ್ಣುವೇ … ನಿನಗೆ ಶರಣಾಗಿದ್ದೇನೆ. ನನ್ನ ಮೇಲೆ ದಯೆ ತೋರು.

ನೋಪಾಸಿತಾ ಮದಮಪಾಸ್ಯ ಮಯಾ ಮಹಾಂತಃ
ತೀರ್ಥಾನಿ ಚಾಸ್ತಿಕಧಿಯಾ ನಹಿ ಸೇವಿತಾನಿ |
ದೇವಾರ್ಚನಂ ಚ ವಿಧಿವನ್ನ ಕೃತಂ ಕದಾSಪಿ
ತಸ್ಮಾತ್ತ್ವಮೇವ ಶರಣಂ ಮಮ ಶಂಖಪಾಣೇ ||
ನಾನು ವಿನಯವಂತಿಕೆಯಿಂದ ಮಹಾತ್ಮರ ಸೇವೆ ಮಾಡದೆಹೋದೆ. ತೀರ್ಥ ಸೇವಿಸುವಾಗ ನನ್ನಲ್ಲಿ ಆಸ್ತಿಕ ಶ್ರದ್ಧೆ ಇರಲಿಲ್ಲ. ವಿಧಿವತ್ತಾಗಿ ದೇವರ ಪೂಜೆಯನ್ನೂ ಮಾಡಲಿಲ್ಲ.
ಆದಕಾರಣ, ಹೇ ಶಂಖಪಾಣಿಯಾದ ಮಹಾವಿಷ್ಣುವೇ, ನಿನಗೆ ಶರಣಾಗಿದ್ದೇನೆ. ನನ್ನ ಮೇಲೆ ದಯೆ ತೋರು.

ದುರ್ವಾಸನಾ ಮಮ ಸದಾ ಪರಿಕರ್ಷಯಂತಿ
ಚಿತ್ತಂ ಶರೀರಮಪಿ ರೋಗಗಣಾಃ ದಹಂತಿ |
ಸಂಜೀವನಂ ಚ ಪರಹಸ್ತಗತಂ ಸದೈವ
ತಸ್ಮಾತ್ತ್ವಮೇವ ಶರಣಂ ಮಮ ಶಂಖಪಾಣೇ ||
ಕೆಟ್ಟ ಸಂಸ್ಕಾರಗಳು ನನ್ನ ಮನಸ್ಸನ್ನು ಸದಾ ಸೆಳೆಯುತ್ತಿರುತ್ತವೆ. ರೋಗರುಜಿನಗಳು ದೇಹವನ್ನು ಕಾಡುತ್ತಿವೆ. ಜೀವನವಿಡೀ ಮತ್ತೊಬ್ಬರನ್ನು ಆಶ್ರಯಿಸಿಯೇ ಕಳೆಯುವಂತಾಗಿದೆ.
ಆದಕಾರಣ, ಹೇ ಶಂಖಪಾಣಿಯಾದ ಮಹಾವಿಷ್ಣುವೇ, ನಿನಗೆ ಶರಣಾಗಿದ್ದೇನೆ. ನನ್ನ ಮೇಲೆ ದಯೆ ತೋರು.

Leave a Reply