ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #36

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

‘ಭಾಗ’ ಬದಲಾದರೂ
‘ಪೂರ್ಣ’ ಬದಲಾಗುವುದಿಲ್ಲ.

ಈ ಜಗತ್ತಿನಿಂದ ನಿರ್ಗಮಿಸುವ
ಪ್ರತೀ ಕೆಡಕಿಗೆ ಬದಲಾಗಿ
ಇನ್ನೊಂದು ಕೆಡಕು ಬಂದು ಸೇರಿಕೊಳ್ಳುತ್ತದೆ
ಹಾಗೆಯೇ
ಪ್ರತೀ ಒಳತಿಗೆ ಬದಲಾಗಿ ಮತ್ತೊಂದು ಒಳಿತು.

ಹಾಗಾಗಿ ಜಗತ್ತಿನಲ್ಲಿ
ಯಾವುದೂ ಇದ್ದ ಹಾಗೆ ಇರುವುದಿಲ್ಲ
ಮತ್ತು, ಹಾಗೆ ನೋಡಿದರೆ
ನಿಜವಾಗಿ ಯಾವುದೂ ಬದಲಾಗುವುದಿಲ್ಲ.

ಈ ಜಗತ್ತಿನಿಂದ
ಒಬ್ಬ ಸೂಫೀಯ ನಿರ್ಗಮನವಾಗುತ್ತಿದ್ದಂತೆ
ಇನ್ನೊಬ್ಬ ಸೂಫಿಯ ಆಗಮನವಾಗುತ್ತದೆ.

34ನೇ ನಿಯಮ ಇಲ್ಲಿ ನೋಡಿ : https://aralimara.com/2020/02/22/sufi-89/

1 Comment

Leave a Reply