ದೇವಿಯ ಕೃಪೆ ಕರುಣಿಸುವ ದೇವ್ಯಾಪರಾಧ ಕ್ಷಮಾಪಣ ಸ್ತೋತ್ರ : ಕನ್ನಡ ಅರ್ಥಸಹಿತ

ದೇವಿಯ ಕೃಪೆಗಾಗಿ ಶ್ರೀ ಶಂಕರಾಚಾರ್ಯರು ರಚಿಸಿದ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ ಇಲ್ಲಿದೆ…

ನ ಮಂತ್ರಂ ನೋ ಯಂತ್ರಂ ತದಪಿ ಚ ನ ಜಾನೇ ನುತಿಮಹೋ
ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾ: |
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ
ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್ ||೧||

ಭಾವಾರ್ಥ:-ಅಮ್ಮಾ! ನನಗೆ ನಿನ್ನ ಮಂತ್ರವಾಗಲೀ ಯಂತ್ರವಾಗಲೀ ಸ್ತುತಿಯಾಗಲೀ ತಿಳಿದಿಲ್ಲ. ತಾಯೀ, ನನಗೆ ನಿನ್ನನ್ನು ಆಹ್ವಾನಿಸಲಾಗಲೀ ಧ್ಯಾನಿಸಲಾಗಲೀ ಸ್ತುತಿಕಥೆಗಳಾಗಲೀ ಗೊತ್ತಿರುವುದಿಲ್ಲ. ನಿನ್ನ ಮುದ್ರೆಯನ್ನೂ ನಾನರಿಯೆನು. ನಿನ್ನ ಎದುರು ಮೊರೆಯಿಡಲೂ ನಾನರಿಯೆ. ಆದರೆ ಅಮ್ಮಾ, ನನಗೆ ಇಷ್ಟು ಮಾತ್ರಾ ಅರಿವಿದೆ; ನಿನ್ನನ್ನು ಹಿಂಬಾಲಿಸಿದರೆ ನನ್ನ ಸಂಕಟಗಳೆಲ್ಲವೂ ನಾಶವಾಗುತ್ತವೆ.

ವಿಧೇರಜ್ಞಾನೇನ ದ್ರವಿಣವಿರಹೇಣಾಲಸತಯಾ
ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರಭೂತ್ |
ತದೇತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ||೨||

ಭಾವಾರ್ಥ:-ಹೇ! ತಾಯೀ; ವಿಧಿಯ ಆಟದಿಂದಲೂ, ನನ್ನ ಬಡತನದಿಂದಲೂ ಜಡತ್ವದಿಂದಲೂ, ಹಾಗೇಯೇ, ನಿನಗೆ ವಿಧೇಯನಾಗಿರಲು ಶಕ್ಯನಾಗದಿರುವುದರಿಂದಲೂ, ನಿನ್ನ ಅಡಿದಾವರೆಗಳ ಸೇವೆಯಿಂದ ಹೊರದೂಡಲ್ಪಟ್ಟಿರುವೆನು; ಹೇ ಅಮ್ಮಾ ; ಸಕಲೋದ್ಧಾರಿಣಿ ತಾಯಿ ಶಿವೇ,ನೀನು ನನ್ನ ಸರ್ವಾಪರಾಧಗಳನ್ನು ಕ್ಷಮಿಸು. ಅಮ್ಮಾ; ಲೋಕದಲ್ಲಿ ದುಷ್ಟ ಮಗನು ಹುಟ್ಟಬಹುದು, ಆದರೆ ದುಷ್ಟ ತಾಯಿಯು ಎಲ್ಲಿಯೂ ಕಾಣಲು ಸಿಗಲಾರದು.

ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವ: ಸಂತಿ ಸರಲಾ:
ಪರಂ ತೇಷಾಂ ಮಧ್ಯೇ ವಿರಲತರಲೋsಹಂ ತವ ಸುತ: |
ಮದೀಯೋ??ಯಂ ತ್ಯಾಗ: ಸುಮುಚಿತಮಿದಂ ತವ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ||೩||

ಭಾವಾರ್ಥ:- ಅಮ್ಮಾ! ಈ ಭೂಮಂಡಲದಲ್ಲಿ ಪುಣ್ಯ ಪುರುಷರೆನಿಸಿದ ಅದೆಷ್ಟೋ ಮಕ್ಕಳು ನಿನಗಿರುವರು. ಅವರುಗಳ ನಡುವೆ ಈ ನಿನ್ನ ಮಗನಾಗಿರುವ ನಾನು ಕೇವಲ ಅತ್ಯಲ್ಪನೆನಿಸಿದವನು. ಹೇ! ಶುಭದಾಯಕಿಯಾಗಿರುವ ಶಿವೇ; ನಿನ್ನ ಬಿಟ್ಟು ನಾನಿರುವದು ಸರಿಯೆನಿಸಬಹುದು. ಆದರೆ ನನ್ನನ್ನು ನೀನು ತ್ಯಜಿಸಿರುವುದು ಉಚಿತವಲ್ಲ. ಏಕೆಂದರೆ ಜಗತ್ತಿನಲ್ಲಿ ಕೆಟ್ಟ ಮಗನು ಹುಟ್ಟಲೂ ಬಹುದು. ಆದರೆ ಕಿಂಚಿತ್ತಾದರೂ ಕೆಟ್ಟವಳಾಗಿರುವ ತಾಯಿಯು ಎಲ್ಲಿಯೂ ಕಾಣಸಿಗಲಾರಳು.

ಜಗನ್ಮಾತರ್ಮಾತಸ್ತವ ಚರಣ ಸೇವಾ ನ ರಚಿತಾ
ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ |
ತಥಾ??ಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಕುರುಷೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ||೪||

ಭಾವಾರ್ಥ:-ಹೇ! ಜಗದಂಬೆಯೇ; ಅಮ್ಮಾ! ನಾನು ಎಂದೂ ನಿನ್ನ ಚರಣ ಸೇವೆ ಗೈದವನಲ್ಲ. ಅಥವಾ ನಿನಗಾಗಿ ಬಹಳಷ್ಟು ಸಂಪತ್ತನ್ನು ದಾನ ಮಾಡಿದವನೂ ಅಲ್ಲ. ಆದಾಗ್ಯೂ ನಿನಗೆ ನನ್ನಲ್ಲಿ ಇರುವ ಸರಿಸಾಟಿಯಿಲ್ಲದ ಪ್ರೇಮವದು ಅನುಪಮವಾದುದು. ಏಕೆಂದರೆ ಜಗತ್ತಿನಲ್ಲಿ ಕೆಟ್ಟ ಮಗನು ಹುಟ್ಟಲೂ ಬಹುದು. ಆದರೆ ಕಿಂಚಿತ್ತಾದರೂ ಕೆಟ್ಟವಳಾಗಿರುವ ತಾಯಿಯು ಎಲ್ಲಿಯೂ ಕಾಣಸಿಗಲಾರಳು.

ಪರಿತ್ಯಕ್ತ್ವಾ ದೇವಾನ್ ವಿವಿಧವಿಧಿಸೇವಾಕುಲತಯಾ
ಮಯಾಪಂಚಾಶೀತೇರಧಿಕಮಪನೀತೇತು ವಯಸಿ |
ಇದಾನೀಂ ಮೇ ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲಂಬೋ ಲಂಬೋದರಜನನಿ ಕಂ ಯಾಮಿ ಶರಣಮ್ ||೫||

ಭಾವಾರ್ಥ:- ಎಲೈ ಗಜಮುಖನ ಮಾತೆಯೇ! ಪೂಜಾದಿಗಳ ವಿಧಿ ನಿಯಮಗಳ ನಾನರಿಯೆ. ಆದ ಕಾರಣ ವಿವಿಧ ದೇವತೆಗಳ ಅರ್ಚನೆಯನ್ನು ನಾನು ಪರಿತ್ಯಜಿಸಿರುವೆ. ನಗೀಗಾಗಲೇ ಇಪ್ಪತ್ತೈದಕ್ಕೂ ಅಧಿಕ ವಯಸ್ಸು ಕಳೆಯಿತು. ಅಮ್ಮಾ; ತಾಯಿಯೇ; ಇನ್ನಾದರೂ ನೀನು ನನ್ನಲ್ಲಿ ಕರುಣೆದೋರದಿದ್ದರೆ ನಿರಾಶ್ರಿತನಾದ ನಾನು ಆರಲ್ಲಿ ಮೊರೆಯಿಟ್ಟು ಶರಣಾಗಲಿ?

ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತಂಕೋ ರಂಕೋ ವಿಹರತಿ ಚಿರಂ ಕೋಟಿಕನಕೈ: |
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ
ಜನ: ಕೋ ಜಾನೀತೇ ಜನನಿ ಜಪನೀಯಂ ಜಪವಿಧೌ ||೬||

ಭಾವಾರ್ಥ:-ಅಮ್ಮಾ ಅಪರ್ಣೇ! ನಿನ್ನ ಅಮೃತಮಯ ಸುಮಧುರ ಮಂತ್ರಾಕ್ಷರಗಳು ಕಿವಿಯೊಳಗೆ ಹೊಕ್ಕ ಮಾತ್ರದಲ್ಲಿ ಚಂಡಾಲನು ಕೂಡಾ ಜೇನಿನಂತಹಾ ಸುಮಧುರ ವಾಣಿಗಳನು ಹೊಂದುವನು. ದಟ್ಟ ದರಿದ್ರನೂ ಕುಭೇರ ಸದೃಶನಾಗಿ ಯಾವುದೇ ಆತಂಕಗಳ ಗೊಡವೆಯಿಲ್ಲದೆ ಬಹುಕಾಲ ಸಂಚರಿಸುವನು. ಹೀಗಿರುವಾಗ ಅಮ್ಮಾ, ವಿಧಿವತ್ತಾಗಿ ನಿನ್ನ ಜಪಾನುಷ್ಠಾನ ನಿರತನಿಗೆ ಎಂಥಾ ಫಲ ದೊರಕಬಹುದು ಎಂಬುದನ್ನಾರು ಹೇಳಲು ಸಾಧ್ಯ?

ಚಿತಾಭಸ್ಮಾ ಲೇಪೋ ಗರಲಮಶನಂ ದಿಕ್ಪಟಧರೋ
ಜಟಾಧಾರೀಕಂಠೇ ಭುಜಗಪತಿಹಾರೀ ಪಶುಪತಿ: |
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ
ಭವಾನೀ ತ್ವತ್ ಪಾಣಿಗ್ರಹಣಪರಿಪಾಟೀ ಫಲಮಿದಮ್ ||೭||

ಭಾವಾರ್ಥ:- ಚಿತಾಗಾರದ ಭಸ್ಮವನ್ನು ಶರೀರಕ್ಕೆ ಲೇಪಿಸಿಕೊಂಡವನೂ, ವಿಷವನ್ನೇ ಕುಡಿದವನೂ, ಬೆತ್ತಲೆಯ ಮೈಯವನೂ, ಜಟೆಯನ್ನು ಧರಿಸಿಕೊಂಡವನೂ,ಕಂಠದಲ್ಲಿ ಉರಗವನ್ನು ಹಾರವಾಗಿ ಧರಿಸಿದವನೂ, ಹಸ್ತದಲ್ಲಿ ತಲೆ ಬುರುಡೆಯನ್ನು ಹಿಡಿದು ಕೊಂಡಿರುವವನೂ, ಪಶುಗಳ ಒಡೆಯನೂ ಆಗಿರುವ ಭೂತಾದಿಗಳ ಮಧ್ಯ ವಾಸಿಸುವ ಶಿವನು ಅದ್ವೀತೀಯವಾಗಿರುವಂತಹಾ ಜಗದೀಶ್ವರನ ಪದವಿಯನ್ನು ಹೊಂದಿರುವುದು ನಿನ್ನ ಪಾಣಿಗ್ರಹಣದ ಫಲದಿಂದ ಸಾಧ್ಯವಾಯಿತು.

ನ ಮೋಕ್ಷಸ್ಯಾಕಾಂಕ್ಷಾ ನ ಚ ವಿಭವವಾಂಛಾsಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾsಪಿ ನ ಪುನ: |
ಅತಸ್ವಾಂ ಸಂಯಾಚೇ ಜನನಿ ಜನನಂ ಯಾತು ಮಮ ವೈ
ಮೃಡಾನೀ ರುದ್ರಾಣೀ ಶಿವ ಶಿವ ಭವಾನೀತಿ ಜಪತ: ||೮||

ಭಾವಾರ್ಥ:- ಹೇ ಮಾತೆ ಚಂದ್ರವದನೇ! ನನಗೆ ಮೋಕ್ಷದ ಆಶೆಯಿಲ್ಲ. ಧನ ಸಂಪತ್ತುಗಳ ಬಯಕೆಯಿಲ್ಲ. ಸಂಸಾರ ವೈಭವದ ಇಚ್ಛೆಯಿಲ್ಲ. ಜ್ಞಾನಾಪೇಕ್ಷೆಯಾಗಲೀ ಸುಖದ ಅಭಿಲಾಷೆಯಾಗಲೀ ಇಲ್ಲ. ಆದ್ದರಿಂದ ಹೇ ತಾಯಿಯೇ; ನಾನು ನಿನ್ನನ್ನು ಬೇಡಿಕೊಳ್ಳುವುದಿಷ್ಟೇ; ಮೃಡಾನಿ.ರುದ್ರಾಣಿ,ಶಿವ,ಶಿವಾ, ಭವಾನೀ, ಎಂದು ಜಪಿಸುತ್ತಾ ನನ್ನ ಜನ್ಮವೆಲ್ಲವೂ ಕಳೆದುಹೋಗಲಿ.

ನಾರಾಧಿತಾsಸಿ ವಿಧಿನಾ ವಿವಿಧೋಪಚಾರೈ:
ಕಿಂ ರುಕ್ಷ ಚಿಂತನಪರೈರ್ನ ಕೃತಂ ವಚೋಭಿ: |
ಶ್ಯಾಮೇ ತ್ವಮೇವ ಯದಿ ಕಿಂಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮಂಬ ಪರಂ ತವೈವ ||೯||

ಭಾವಾರ್ಥ:- ಹೇ ಮಾತೇಯೇ! ನಾನೆಂದೂ ವಿಧ ವಿಧವಾದ ಉಪಚಾರಗಳಿಂದ ನಿನ್ನನ್ನು ಅರ್ಚಿಸಿಲ್ಲ. ನೀರಸವಾದ ಚಿಂತನೆಗಳಲ್ಲಿ ತತ್ಪರನಾಗಿ ಕಾಲವನ್ನು ಕಳೆದು ಸಲ್ಲದ ಕರ್ಮಗಳನ್ನು ಮಾಡಿದೆನು.

Leave a Reply