ಎಲ್ಲವೂ ನಾನೆಂಬ ಅರಿವು : ಪ್ರಜ್ಞಾನಂ ಬ್ರಹ್ಮ

ನಿನ್ನ ಸುತ್ತ ನಡೆಯುತ್ತಿರುವ ಆಚಾರ ವಿಚಾರಗಳನ್ನು ನೋಡು, ಅದಕ್ಕೆ ನಿನ್ನ ಅನುಭವದ ಚಾಣಕ್ಯತೆಯನ್ನು ಸೇರಿಸಿ ನಿನ್ನ ಬುದ್ಧಿಯಲ್ಲಿ ಮಥಿಸಿದಾಗ ಯಾವ ಸತ್ಯದ ಬೆಳಕು ಉದಯಿಸುವುದೋ ಅದೇ ನಮಗೆ ದಾರಿ ತೋರುತ್ತದೆ | ಪ್ರದೀಪ

Who am I ? ಇದು ಆಧ್ಯಾತ್ಮಲೋಕದ ಕಬ್ಬಿಣದ ಕಡಲೆಯಾದ ಪ್ರಶ್ನೆ.ನಾನಾರು ಎಂದು ತಿಳಿವವರೆಗೂ ಮುಕ್ತಿಯಿಲ್ಲ ,ಇದನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ ಎಂದು …

“ಎಲ್ಲರೂ ನಾವೇ ,ನಾವೇ ಎಲ್ಲರೂ,
ಎಲ್ಲದೂ ನಾವೇ ನಾವೇ ಎಲ್ಲದೂ”
                   ಸಿಂಪಲ್ ಅದ್ವೈತ.

ಒಂದು ಗಂಡು ಹೆಣ್ಣಿನಿಂದ ಆರಂಭವಾದ ವಿಶ್ವ ಇಂದು ಏಳ್ನೂರು ಕೋಟಿ ತಲುಪಿದೆ .ಅದೆಷ್ಟು ಪಂಗಡ ,ಪಂಥ, ಜಾತಿ ,ಮತ ,ಕುಲ ಅಬ್ಬಾ …
ಎಲ್ಲರೂ ಸಂಬಂಧಿಕರೇ ,ಉದ್ದ ಅಗಲ ಅಳತೆಯ ಲೆಕ್ಕ ಹಾಕಿದರೆ ಕೆಲವರು ದೂರದ ಸಂಬಂದಿಕರಾಗಿರಬಹುದು ಅಷ್ಟೇ.
ದಿನ ಬೆಳಗಾದರೆ ಕೆಟ್ಟ ಕರ್ಕಶ ಗಲಾಟೆ. ರಾಮ ರಾವಣರ ಯುದ್ಧ, ಕೌರವ ಪಾಂಡವರ ಯುದ್ಧ ,ಹಿಂದು ಮುಸ್ಲಿಂ ಯುದ್ಧ ,ಮುಸ್ಲಿಂ ಕ್ರಿಶ್ಚಿಯನ್ ಯುದ್ಧ.
ಯುದ್ಧ ಯುದ್ದ ಯುದ್ದ …
ಯಾರು ಮಾರುತ್ತಿದ್ದಾರೆ ಯುದ್ಧವನ್ನು ?

ಇರಲಿ.
Who am ‘I’
‘ಜ್ಞ’ – ಜ್ಞಪ್ತಿ  ಅರಿವು ಎಂದು .
ತಾನು ಅಜ್ಞಾನಿ ಎಂದು ಅರಿವು ಮೂಡುವುದೇ ಜ್ಞಾನದ ಉದಯ.


ಕತ್ತಲೆಯನ್ನು ಕತ್ತಲೆ ಎಂದು ತಿಳಿಯದೆ ಬೆಳಕಿನ  ‘ಅಭಾವ ‘ ಎಂದರಿಯುದೇ ಜ್ಞಾನ. ಏಕೆಂದರೆ ಕತ್ತಲೆಗೆ ಅಸ್ತಿತ್ವವೇ ಇಲ್ಲ.ಭೂಮಿ ತಿರುಗುವುದರಿಂದ ಅದರ ನೆರಳಿನ ಭಾಗಕ್ಕೆ ಬೆಳಕು ಕಡಿಮೆಯಾಗುವುದು . ಇರುವುದು ‘ಇರುವಿಕೆ’  ‘ಬೆಳಕು’ ಮಾತ್ರ .ಅದು ‘ಸತ್’ ಅದು ‘ಜ್ಞಾನ’ ಹಾಗಾಗಿ ಕೇವಲ ಜ್ಞಾನದ , ಬೆಳಕಿನ ಅಭಾವವಿದೆ ಅಷ್ಟೇ..


ಮನುಷ್ಯ ಮೂರು ಪ್ರಜ್ಞೆಯ ಹಂತಗಳಲ್ಲಿ ಜೀವಿಸುತ್ತಾನೆ .
೧. ದೇಹಪ್ರಜ್ಞೆಯ ‘I’
೨. ಮನೋಪ್ರಜ್ಞೆಯ ‘I’
೩. ‘I’  ನೈಜ  ಸಾಕ್ಷಿಪ್ರಜ್ಞೆ.

ಇದರಲ್ಲಿ ಮೊದಲನೆಯ ‘ನಾನು’ ಗಳವರ ಸಂಖ್ಯೆ ಅಧಿಕ. ಇವರು ಹಣ ಹುದ್ದೆ ಮನೆ ಅಂಗಾಂಗ ಸುಂದರತೆ ಇದರಲ್ಲಿ ‘ತಮ್ಮನ್ನು’ ಹಾಗೂ ‘ಇತರ’ರನ್ನೂ ಗುರುತಿಸುತ್ತಾರೆ.
ಇನ್ನು ಎರಡನೆಯವರು ಸ್ವಲ್ಪ ಕವಿಗಳು, ಸಾಹಿತಿಗಳು, ಸಂಶೋಧಕರು, ಸ್ವಾರ್ಥವಿಲ್ಲದ ಆಧ್ಯಾತ್ಮಿಗಳು, ವಿಜ್ಞಾನಿಗಳು ಇತ್ಯಾದಿ. ಇವರು ಗುಣಗ್ರಾಹಿಗಳು. ಪ್ರಾಜ್ಞರು ಎನ್ನಬಹುದು.
ಮೂರನೆಯ ಸ್ತರವೇ ನಿಜವಾದ ‘I’


ಇದು ಎಡ ಕಣ್ಣ  ಮೇಲೆ ಇರುವುದರಿಂದ ಇದನ್ನು ಅಕ್ಷಿಪುರುಷ , ಸಾಕ್ಷಿಪ್ರಜ್ಞೆ ,ಪ್ರಜ್ನಾಚಕ್ಷು , ಆತ್ಮಸಾಕ್ಷಿ ಎಂಬೆಲ್ಲಾ ಪದಗಳೂ ಇದನ್ನೇ ಬೊಟ್ಟು ಮಾಡುತ್ತವೆ.

ಇದು ಸರ್ವಸಾರ ಸಂಗ್ರಾಹಕ. ಸೃಷ್ಟಿಯ ಆರಂಭದಿಂದ ಹಿಡಿದು ಇಲ್ಲಿಯವರೆಗೆ  ಏನೇನು ನಡೆದಿದೆಯೋ ಅದೆಲ್ಲಾ ಈ ಬಿಂದುವಿನಲ್ಲಿ ಸಂಗ್ರಹವಾಗಿದೆ. ಈ ಪ್ರಜ್ಞೆ ನಿರಂತರ. ಇದಕ್ಕೆ ಸಾವಿಲ್ಲ. ಇದನ್ನು ಎಷ್ಟು ವಿಸ್ತಾರ ಗೊಳಸುತ್ತಾ ಹೋಗುತ್ತೇವೊ ಅಂದರೆ ಇದಕ್ಕೆ ನಿಜವಾದ ಆಹಾರವಾದ ಅರಿವನ್ನು ನೀಡುತ್ತಾ ಹೋಗುತ್ತೇವೋ ಅದು ವಿಸ್ತಾರವಾಗತ್ತಾ ಸಂತತಿಯಿಂದ ಸಂತತಿಗೆ ಸಾಗುತ್ತದೆ. ಇದು ನಿಜವಾದ ಆಸ್ತಿ.
ಇದೇ ‘ಐತರೇಯ ‘ಉಪನಿಷತ್ತಿನ “ಪ್ರಜ್ನಾನಂ ಬ್ರಹ್ಮ” ಎಂಬ ಘೋಷಣೆ
GENEUSNESS IS ULTIMATE .
(genetically establishment)

ಹಾಗಾದರೆ ನಾನು ‘ I ‘ಯಾವ ಸ್ತರದ’ I ‘?
ಮದಲನೆಯದೋ , ಎರಡನೆಯದೋ ?
ಮೂರನೆಯ ಹಂತಕ್ಕೆ ಹೇಗೆ ತಲುಪಲಿ ? ಇದು ನಿಜವಾದ ‘ಅಧ್ಯಾತ್ಮ’.
ಎಲ್ಲರೂ ‘ಬ್ರಹ್ಮಪ್ರಜ್ಞ’ರೇ. ಆದರೆ ಅದು ಗೊತ್ತಿಲ್ಲವಾಗಿದೆ , ಎಚ್ಚರವಿಲ್ಲವಾಗಿದೆ ಅಷ್ಟೇ. ಅದು ಯಾವದೇ ಜನಾಂಗದ ,ಭಾಷೆಯ ಸೊತ್ತಲ್ಲ.

ವೇದ ಲೋಕಾಚಾರ ನಿನ್ನನುಭವದ ಯುಕ್ತಿ
ಶೋಧಿಸೀ ಮೂರನುಂ ಸಂವಾದಗೊಳಿಸು
ಸಾಧಿತ ಜ್ನಾನ ನರಸಾಧ್ಯ ಪ್ರಮಾಣವದು
ಹಾದಿಬೆಳಕದು ನಿನಗೆ .. ಮಂಕುತಿಮ್ಮ.
ವೇದ ಉಪನಿಷತ್ತುಗಳನ್ನು ಕೇವಲ ಕಂಠಪಾಠ ಮಾಡುವುದಲ್ಲ. ವ್ಯಾಕರಣ ಪಂಡಿತರಾಗುವುವುದಲ್ಲ.
ನಿನ್ನ ಸುತ್ತ ನಡೆಯುತ್ತಿರುವ ಆಚಾರ ವಿಚಾರಗಳನ್ನು ನೋಡು, ಅದಕ್ಕೆ ನಿನ್ನ ಅನುಭವದ ಚಾಣಕ್ಯತೆಯನ್ನು ಸೇರಿಸಿ ನಿನ್ನ ಬುದ್ಧಿಯಲ್ಲಿ ಮಥಿಸಿದಾಗ ಯಾವ ಸತ್ಯದ ಬೆಳಕು ಉದಯಿಸುವುದೋ ಅದೇ ನಮಗೆ ದಾರಿ ತೋರುತ್ತದೆ. ಅರಿವಿಗೆ ಅದೇ ಪ್ರಮಾಣ.
ಯಾವೊಂದೆ ವಿಷಯವನ್ನಾಗಲಿ ಅದನ್ನು
೧. ವೈಜ್ಞಾನಿಕ
2. ತಾಂತ್ರಿಕ
3. ಭಾವುಕ
ಈ ಮೂರೂ ದೃಷ್ಟಿಯಿಂದ ಅವಲೋಕಿಸುವುದನ್ನು ‘ಯಜ್ಞ’ ವಾಗಿಸಿ ಕೊಂಡರೆ  “ಪ್ರಜ್ಞಾನಂ ಬ್ರಹ್ಮ ” ಶತಸ್ಸಿದ್ಧ.

Leave a Reply