ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #38

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಪ್ರತೀ ಓದುಗನೂ
ತನ್ನ ಸಾಮರ್ಥ್ಯಕ್ಕನುಗುಣವಾಗಿ
ಪವಿತ್ರ ಗ್ರಂಥಗಳನ್ನು ವಿಶ್ಲೇಷಣೆ ಮಾಡುತ್ತಾನೆ.

ಪವಿತ್ರ ಗ್ರಂಥದ ಪುಟಗಳನ್ನು ತೆರೆಯುತ್ತಿದ್ದಂತೆಯೇ,
ನಾಲ್ಕು ಹಂತದ ಒಳನೋಟಗಳು
ನಮ್ಮನ್ನು ಸ್ವಾಗತಿಸುತ್ತವೆ.

ಮೊದಲನೇಯದೇ,
ಹೊರಗಿನ ಸಾಮಾನ್ಯ ಅರ್ಥ;
ಬಹುತೇಕ ಎಲ್ಲರೂ ಇಷ್ಟಕ್ಕೇ ಸಂತೃಪ್ತರು.
ಎರಡನೇಯದು ಒಳ ಅರ್ಥ,
ಬುದ್ಧಿಗೆ ತಾಕುವಂಥದು.
ಮೂರನೇಯದು ಈ ಒಳ ಅರ್ಥದ
ಹೊಟ್ಟೆಯಲ್ಲಿರುವಂಥದು.
ನಾಲ್ಕನೇಯದು
ಎಷ್ಟು ಆಳದಲ್ಲಿದೆಯೆಂದರೆ
ಯಾವ ಮಾತಿಗೂ ನಿಲುಕುವುದಿಲ್ಲ
ವರ್ಣಿಸಲೂ ಆಗದು.

ಯಾವುದನ್ನ
ಹೇಳಲಿಕ್ಕೆ ಆಗುವುದಿಲ್ಲವೋ
ಅದನ್ನು ಆಚರಿಸುವುದೇ ಧರ್ಮ,
ಅಂತೆಯೇ ಪ್ರೇಮಕ್ಕೆ ಧರ್ಮದ ಉಪಾಧಿ.

36ನೇ ನಿಯಮ ಇಲ್ಲಿ ನೋಡಿ : https://aralimara.com/2020/03/01/sufi-91/

1 Comment

Leave a Reply