‘ಅಮನ ಧ್ಯಾನ’ ಮಾಡುವುದು ಹೇಗೆ? : ಇಲ್ಲಿದೆ ಸರಳ ವಿಧಾನ

ಅಮನ ಧ್ಯಾನ (ನೋಮೈಂಡ್ ಮೆಡಿಟೇಶನ್) ಮಾಡುವ ವಿಧಾನವನ್ನು ವಿವರಿಸಿದ್ದಾರೆ ಜಯದೇವ ಪೂಜಾರ್…

ಇದೊಂದು ಅದ್ಬುತವಾದ ಧ್ಯಾನ ವಿಧಾನ ನೀವೆ ಮಾಡಿ ನೋಡಿˌ ನಮ್ಮ ತಲೆಯೊಳಗೆ ಯಾವಗಲೂ ಆಲೋಚನೆಗಳ ಮಹಾಪುರ ಹರಿಯುತ್ತಿರುತ್ತದೆ. ಹೀಗಾಗಿ ಸದಾ ಒತ್ತಡ ( tension). ಧೀಡರನೆ ಮನಸ್ಸು ಶಾಂತಗೊಳ್ಳಿಸುವ ಅದ್ಬುತವಾದ ಧ್ಯಾನ ವಿಧಾನವಿದು. ನಿಮ್ಮ ಮನಸ್ಸು ಕ್ಪಣಾರ್ಧದಲ್ಲಿ ಆಲೋಚನೆರಹಿತ ಶಾಂತವಾದ ಸ್ಥಿತಿಗೆ ಬಂದು ಬೀಡುತ್ತದೆ..

ಟೆಕ್ನಿಕ್ : ಆರಾಮವಾಗಿ ಕುಳಿತುಕೊಳ್ಳಿˌ ಒಂದೇರಡು ನಿಮಿಷ ಉಸಿರಿನ ಮೇಲೆ ಗಮನಹರಿಸಿˌ ನಂತರ ನಿಮ್ಮ ಗಮನವನ್ನೆಲ್ಲ ಆಲೋಚನೆಗಳ ಮೇಲೆ ತನ್ನಿ. ಅಬ್ಬಾ! ಏಷ್ಟೊಂದು ಆಲೋಚನೆಗಳು..ಒಂದರ ಹಿಂದೆ ಇನ್ನೊಂದು..ತಲೆಯೆಲ್ಲ ಆಲೋಚನೆಗಳಿಂದ ಜಾಮ್ ಆಗಿದೆ…ಆಗ ನಿಮ್ಮೊಳಗೆ ಒಂದು ಪ್ರಶ್ನೆ ಕೇಳಿಕೊಳ್ಳಿ ” ನನ್ನ ಬಗ್ಗೆ ನನಗೆ ಏನೂ ಅಭಿಪ್ರಾಯವಿದೆ ಈಗ?”

ಈ ಪ್ರಶ್ನೆಯಿಂದ ಮನಸ್ಸು ಕಕ್ಕಾಬಿಕ್ಕಿಯಾಗಿˌ ಏನೂ ಉತ್ತರಗಳಿಲ್ಲದೆ ತಬ್ಬಿಬ್ಬಾಗಿ…ಏನೂ ಸಿದ್ದ ಉತ್ತರಗಳು ಸಿಗದೆˌ ಮನಸ್ಸು ಧೀಡಿರನೆ ಶಾಂತವಾಗುವದು ನೋಡಿ…

ನಮ್ಮ ಬಗ್ಗೆ ನಮ್ಮಗ್ಯಾವ ಅಭಿಪ್ರಾಯಗಳು ಇಲ್ಲ ˌ ಯಾಕೆಂದರೇˌ ನಮಗೆ ನಮ್ಮ ಬಗ್ಗೆ ಏನೂ ಗೊತ್ತಿಲ್ಲ ˌ ನಮ್ಮ ಬಗ್ಗೆ ನಮಗೆ ಯಾವ ಖಚಿತತೆಯು ಇಲ್ಲ. ನಮ್ಮಲ್ಲಿರುವದು ಮತ್ತೊಬ್ಬರ ಬಗ್ಗೆಗಿನ ಅಭಿಪ್ರಾಯಗಳು ಮತ್ತು ಮತ್ತೊಬ್ಬರು ನಮ್ಮ ಬಗ್ಗೆ ನೀಡಿದ ಅಭಿಪ್ರಾಯಗಳ ಮಾಹಿತಿಯೆ ಆಲೋಚನೆಯ ಸುರಳಿಯಾಗಿ ತಲೆಯಲ್ಲಿ ಸುತ್ತುತ್ತಿರುವದನ್ನು ಕಾಣುತ್ತಿರಿˌ ಯಾವಾಗ ನೀವು ಮನಸ್ಸಿಗೆ “ನನ್ನ ಬಗ್ಗೆ ಅಭಿಪ್ರಾಯವೇನು ಈಗ?” ಎಂಬ ಪ್ರಶ್ನೆ ಕೇಳಿದ್ದಿರೋ ಮನಸ್ಸು ಉತ್ತರಗಳಿಲ್ಲದೆ ಶಾಂತವಾಗುವದು. ಮನಸ್ಸಲ್ಲಿ ನಿರಂತರವಾಗಿ ನಡೆಯುವ ಪ್ರಶ್ನೊತ್ತರ ಮಾದರಿಯ ಸಂವಾದಗಳ ಸರಮಾಲೆಯು ಕತ್ತರಿಸಿ ಬೀಳುವದು..

ಮುಂದೆ ನಿಮ್ಮ ಧ್ಯಾನ ಗಹನವಾದಂತೆˌ ನಿಮ್ಮನ್ನು ನೀವು ಅರಿಯಲುˌ ನಿಮ್ಮ ಬಗ್ಗೆ ಖಚಿತತೆ ಮೂಡಲು ಆರಂಭಿಸುವದು. ಮತ್ತೊಬ್ಬರ ಅಭಿಪ್ರಾಯದ ಮೇಲಿನ ಅವಲಂಬಿತ ವ್ಯಕ್ತಿತ್ವ ನನ್ನದಲ್ಲ. ನನ್ನಗೊಂದು ಸ್ವಂತ ಅಸ್ತಿತ್ವವಿದೆ ಎಂಬ ಮಹತ್ತರ ಅರಿವುಂಟಾಗುವದು. ಪ್ರಾಯೋಗಿಕವಾಗಿ ಮಾಡಿ ನೋಡಿ..

Leave a Reply