ಓಶೋ ದೃಷ್ಟಿಯಲ್ಲಿ ಸಮಾಜ ಸುಧಾರಣೆ

oshoಸ್ವಾರ್ಥಿಗಳಾಗಿರಿ. ಮೊದಲು ನಿಮ್ಮನ್ನು ನೀವು ಅರಿಯಿರಿ: ಇದುವೇ ನಾನು ಹೇಳುವ ಸ್ವಾರ್ಥದ ಮೊದಲ ಅಧಿನಿಯಮ….! ~ ಓಶೋ | ಕನ್ನಡಕ್ಕೆ: ಧ್ಯಾನ್ ಉನ್ಮುಖ್

ಜಗತ್ತನ್ನು ಬದಲಾಯಿಸಲು ಬಯಸುವಿಯಾದರೆ, ಅದಕ್ಕಿರುವ ಏಕೈಕ ಮಾರ್ಗ ನಿನ್ನ ಪ್ರಜ್ಞೆಯ ಸ್ತರವನ್ನು ಬದಲಾಯಿಸುವುದಾಗಿದೆ ; ಇಷ್ಟನ್ನು ಮಾತ್ರವೇ ನೀನು ಮಾಡಬಹದು. ಹೊರಗಿನಿಂದ ನೀನು ಯಾರಿಗೂ ಸಹಾಯ ಮಾಡಲಾಗದು. ಒಮ್ಮೆ ನೀನು ನಿನ್ನ ಪ್ರಜ್ಞೆಯ ಸ್ತರವನ್ನು ಹೆಚ್ಚಿಸಿದಲ್ಲಿ, ನಿನ್ನ ಪ್ರಜ್ಞೆಯ ತರಂಗಗಳು ಬೇರೆಯವರನ್ನು ಬದಲಾಯಿಸುವಲ್ಲಿ ಸಹಾಯಕವಾಗುವುದು. ಇದರ ಬಗ್ಗೆ ಅವರಿಗರಿವಿಲ್ಲದೆಯೇ ಅವರಲ್ಲಾಗುವ ಪರಿವರ್ತನೆಯನ್ನು ಕಾಣುವೆ. ಇಲ್ಲಿ ವಿಭಿನ್ನ ಸಮಾಜವಲ್ಲ ಆದರೆ ವಿಭಿನ್ನ ಪರಿಸರದ ಅವಶ್ಯಕತೆಯಿದೆ..ಸಮಾಜಕ್ಕೆ ಬೇರೆಯದೇ ತೆರನಾದ ಆಧ್ಯಾತ್ಮಿಕ ತರಂಗಗಳ ಅವಶ್ಯಕತೆಯಿದೆ. ಹಾಗಾಗಿಯೇ, ಸಮಾಜವನ್ನು ಪರಿವರ್ತಿಸುವಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲ: ನಿಮ್ಮನ್ನು ಸಮಾಜದ ಗುಲಾಮರನ್ನಾಗಿಸುವಲ್ಲಿ, ಮಿಶನರಿಗಳನ್ನಾಗಿಸಲು ನಾನು ಯತ್ನಿಸುವುದಿಲ್ಲ.

ಸ್ವಾರ್ಥಿಗಳಾಗಿರಿ. ಮೊದಲು ನಿಮ್ಮನ್ನು ನೀವು ಅರಿಯಿರಿ: ಇದುವೇ ನಾನು ಹೇಳುವ ಸ್ವಾರ್ಥದ ಮೊದಲ ಅಧಿನಿಯಮ. ನಿಮ್ಮನ್ನು ನೀವು ಪ್ರೀತಿಸಿ. ಇದು ಸ್ವಾರ್ಥದ ಎರಡನೇ ನಿಯಮ. ನಿಮ್ಮನ್ನು ನೀವು ಪ್ರೀತಿಸಿದಲ್ಲಿ ಮಾತ್ರವೇ ಬೇರೆಯವರನ್ನು ಸಹಾ ಪ್ರೀತಿಸಬಲ್ಲಿರಿ. ಮತ್ತು, ಮೂರನೇ ನಿಯಮ ಪ್ರತಿಕ್ಷಣವನ್ನು ಸಂಭ್ರಮವಾಗಿಸಿ, ಆನಂದಿಸಿ-ಆಗ ನಿಮ್ಮ ಮೂಲಕ ಅಗೋಚರವಾದ್ದು ಏನೋ ಘಟಿಸಲು ಆರಂಭಿಸುವುದು, ಹಾಗೂ ಆ ಘಟನೆಯ ಪ್ರಚೋದಕ ಕೇಂದ್ರಬಿಂದು ನೀವಾಗಿರುತ್ತೀರಿ; ವಿಶ್ವದ‌ ಅರಿವಿನ ಪ್ರಕ್ರಿಯೆಯು ಅಲ್ಲಿಂದ ಪ್ರಾರಂಭವಾಗುತ್ತದೆ, ನಿಮ್ಮಲ್ಲಿ ಬುದ್ಧತ್ವ ಜಾಗೃತಗೊಳ್ಳುವುದು. ಇಷ್ಟು ಮಾತ್ರವೇ ನಿಮ್ಮಿಂದ ಮಾಡಲು ಸಾಧ್ಯ!

 

Leave a Reply