ಇರಲಿˌ ಓಶೋ ಕುಂಡಲಿನಿ ಮತ್ತು ಚಕ್ರಗಳ ಕುರಿತು ಏನೂ ಹೇಳಿದ್ದಾರೆಯೆಂದು ಇಲ್ಲಿ ಪೂರ್ತಿ ಹೇಳಲು ಅಸಾಧ್ಯ. ಆಯ್ದ ಕೆಲ ಭಾಗಗಳಷ್ಟನೆ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುವೆ… | ಜಯದೇವ ಪೂಜಾರ್
ನಾನು ಸುಮ್ಮನೆ ಹಾಗೇˌ ಓಶೋ ರಜನೀಶರವರು ಕುಂಡಲಿನಿ ಮತ್ತು ಚಕ್ರಗಳ ಬಗ್ಗೆ ಏನೂ ಹೇಳಿದ್ದಾರೆಯೆಂದು ಹುಡುಕುತ್ತಿದ್ದೆ. ಇವುಗಳ ಬಗ್ಗೆ ಕನಿಷ್ಟ ನಾಲ್ಕೆದು ಮಹಾನ ಗ್ರಂಥಗಳನ್ನೆ ಬರೆಯ ಬಹುದಾದಷ್ಟು ವಿಷಯಗಳನ್ನು ಅತ್ಯಂತ ವೈಜ್ಞಾನಿಕವಾಗಿ ಹೇಳಿ ಹೋಗಿದ್ದಾರೆ. ಸುಮಾರು 112 ಧ್ಯಾನ ವಿಧಾನಗಳನ್ನು ಹೇಳಿದ್ದಾರೆ. ಇವುಗಳನ್ನೆಲ್ಲ ಓದಲುˌ ತಿಳಿದುಕೊಳ್ಳಲು ಹಾಗೂ ಧ್ಯಾನ ಪ್ರಯೋಗಗಳನ್ನು ಮಾಡಲು ನಿರಂತರ ಕನಿಷ್ಟ ಹತ್ತು ವರ್ಷಗಳಾದರು ಬೇಕು. ಭಾರತದಲ್ಲಿ ಯೋಗದ ಬಗ್ಗೆ ಇಷ್ಟೊಂದು ಆಳವಾದ ಅಧ್ಯಯನ ಮಾಡಿದ್ದ ಮಹಾತ್ಮನನ್ನು ನಾನೇಲ್ಲೂ ನೋಡಲಿಲ್ಲ.
ಬಹಳಷ್ಟು ಜನರಿಗೆ ಗೊತ್ತಿರುವ ಓಶೋ ಸೆಕ್ಸ್ ಕುರಿತಾಗಿ ಮಾತನಾಡಿದರುˌ ಮುಕ್ತಕತೆ ಪ್ರತಿಪಾದಿಸಿದರು ಮಾತ್ರ ಎಂದು. ಕೆಲವರು ಇವತ್ತಿಗೂ ಓಶೋ ಹೇಳಿದ “ಧ್ಯಾನ”ವನ್ನು ಪ್ರಚಾರ ಮಾಡದೇˌ ಅವರಿಗೆ ಮಸಿ ಬಳಿಯುವ ಕಾರ್ಯವನ್ನು ಈಗಲು ಮುಂದುವರಿಸಿರುವರು. ಓಶೋ ಸಮಾಜಕ್ಕೆ ಕಾಮದ ವಿಷಯವನ್ನು ಮುಚ್ಚಿಟ್ಟು ನಾಟಕೀಯವಾಗಿ ವರ್ತಿಸಿದ್ದರೆˌ ಈ ಸಮಾಜ ಅವರನ್ನ ಮಹಾತ್ಮ ಅಥವ ಮಹಾನ ರುಷಿಕೋಟಿ ಎಂದು ನಂಬುತ್ತಿತ್ತು. ಆದರೆ ಓಶೋರವರಿಗೆ ಅಂತ ನಂಬಿಕೆ ಬೇಕಿರಲಿಲ್ಲ. ಮನುಷ್ಯನ ಮೇಲೆ ಅವರಿಗೆ ನಿಜವಾದ ಕಾಳಜಿಯಿತ್ತು.
ಇರಲಿˌ ಓಶೋ ಕುಂಡಲಿನಿ ಮತ್ತು ಚಕ್ರಗಳ ಕುರಿತು ಏನೂ ಹೇಳಿದ್ದಾರೆಯೆಂದು ಇಲ್ಲಿ ಪೂರ್ತಿ ಹೇಳಲು ಅಸಾಧ್ಯ. ಆಯ್ದ ಕೆಲ ಭಾಗಗಳಷ್ಟನೆ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುವೆ. ಕುಂಡಲಿನಿ ಮತ್ತು ಚಕ್ರಗಳ ಬಗ್ಗೆ ಯಾವುದೇ ತಾತ್ವಿಕ ಜ್ಞಾನದ ಮೂಲಕ ಅಥವ ಚಿತ್ರ ರೂಪದಲ್ಲಿ ದೈಹಿಕವಾಗಿ ಕಲ್ಪಿಸಿಕೊಳ್ಳುವದು ಧ್ಯಾನಕ್ಕೆ ಅಷ್ಟೆನೂ ಸಹಾಯಕವಾಗುವುದಿಲ್ಲ. ಹೀಗೆ ಹೇಳಿದ್ದಾಗ ನಾನು ಕುಂಡಲಿನಿ ಅಥವ ಚಕ್ರಗಳಂಥದ್ದು ಏನೂ ಇಲ್ಲವೆಂದು ಹೇಳುತ್ತಿಲ್ಲ. ಕುಂಡಲಿನಿ ಇದೆˌ ಚಕ್ರಗಳು ಇವೆ. ಆದರೆ ಇವುಗಳ ಬಗ್ಗೆ ಜ್ಞಾನವು ಯಾವುದೆ ನೆರವಾಗುವುದಿಲ್ಲ. ಅದು ತೊಂದರೆಯಾಗಬಹುದು ಅಥವ ಬಹಳಷ್ಟು ಕಾರಣಗಳಿಂದ ತಡೆಯಾಗಬಲ್ಲದು. ಒಂದು ಕಾರಣವೆಂದರೇ ಕುಂಡಲಿನಿˌ ಅಥವ ಜೈವಿಕ ಏರ್ನಜಿಯ ರಹಸ್ಯ ಮಾರ್ಗದ ಬಗ್ಗೆ ಎಲ್ಲ ತಿಳಿವೂ ಸಾಮಾನ್ಯೀಕರಣ ( generalise) ಮಾಡಲ್ಪಟ್ಟಿದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದೆ. ಮೂಲ ಎಲ್ಲರಲೂ ಒಂದೆಯಾಗಿಲ್ಲ. ನಿಮ್ಮ ಅಂತರೀಕ ಜೀವನವು ತುಂಬ ವೈಯಕ್ತಿಕವಾದದು. ಹೀಗಾಗಿ ನೀವು ತಾತ್ವಿಕ ಜ್ಞಾನದಿಂದ ಏನೇ ಗಳಿಸಿದರು ಅದು ಹಾನಿಯಾಗುವದು. ನೀವು ಕೇವಲ ನಿಮ್ಮ ಅಂತರೀಕ ಯಾತ್ರೆಯಿಂದ ಮಾತ್ರ ಅರಿಯಬೇಕು.
ಚಕ್ರಗಳು ಇವೆ. ಅವು ವ್ಯಕ್ತಿಯಿಂದ ವ್ಯಕ್ತಿಯಲ್ಲಿ ಭಿನ್ನವಾಗಿವೆ. ಒಬ್ಬನಿಗೆ ಏಳು ಚಕ್ರಗಳಿದ್ದರೆˌ ಇನ್ನೊಬ್ಬನಿಗೆ ಒಂಬುತ್ತು ಚಕ್ರಗಳುˌ ಕೆಲವರಿಗೆ ನಾಲ್ಕು ಮತ್ತು ಮೂರು ಚಕ್ರಗಳಿರಬಹುದು. ಈ ಕಾರಣದಿಂದಾಗಿಯೆ ವಿವಿಧ ಸಂಪ್ರದಾಯಗಳು ಹುಟ್ಟಿಕೊಂಡಿವೆ. ಬೌದ್ದರು ಒಂಬತ್ತು ಚಕ್ರಗಳಿವೆ ಎನ್ನುತ್ತಾರೆˌ ಹಿಂದುಗಳು ಏಳು ಚಕ್ರಗಳಿವೆ ಎನ್ನುತ್ತಾರೆˌ ಟಿಬೆಟ್ ದವರು ನಾಲ್ಕು ಚಕ್ರಗಳಿವೆ ಎನ್ನುತ್ತಾರೆ. ಮತ್ತು ಎಲ್ಲರು ಸರಿ ಇದ್ದಾರೆ. ಕುಂಡಲಿನಿ ಮೂಲ ಮತ್ತು ಕುಂಡಲಿನಿ ಯಾತ್ರಿಸುವ ಮಾರ್ಗ ಪ್ರತಿಯೊಬ್ಬರಲ್ಲು ಭಿನ್ನವಾಗಿದೆ.
ಯಾರದರೂ ಚಕ್ರ ಇಲ್ಲಿದೆ, ಕೇಂದ್ರವಿಲ್ಲಿದೆ ಎಂದ ಕೂಡಲೇ ನೀವು ಅದನ್ನು ಕಲ್ಪಿಸಿಕೊಳ್ಳಲು ಪ್ರಾರಂಭಿಸುತ್ತಿರಿ. ಆಗ ಅಲ್ಲಿ ಇಲ್ಲದೆಯು ಇರಬಹುದು. ಆಗ ನೀವು ಕಾಲ್ಪನಿಕ ಚಕ್ರಗಳನ್ನು ಸೃಷ್ಟಿಸುವಿರಿ. ನಿಮ್ಮ ಮನಸ್ಸಿಗೆ ಆ ಕ್ಪಮತೆಯಿದೆ. ನಿಮ್ಮ ಕಲ್ಪನೆಯ ಕಾರಣವಾಗಿ ಅಲ್ಲಿ ಹರಿವು ಕಾಣಿಸಿಕೊಳ್ಳುವದು. ಆದರೆ ಅದು ಕುಂಡಲಿನಿ ಆಗಿರುವುದಿಲ್ಲ. ಕೇವಲ ಕಲ್ಪನೆˌ ಭ್ರಾಂತಿˌ ಕನಸು ಮಾತ್ರವಾಗಿರುತ್ತದೆ. ನಿಮ್ಮೊಳಗೆ ನೀವು ಕಾಲ್ಪನಿಕ ಕುಂಡಲಿನಿ ಶಕ್ತಿಯನ್ನು ಮತ್ತು ಕಾಲ್ಪನಿಕ ಪ್ರಪಂಚವನ್ನು ಸೃಷ್ಟಿಕೊಳ್ಳುತ್ತಿರಿ. ಬಾಹ್ಯ ಪ್ರಪಂಚವು ಮತ್ತು ಅಂತರೀಕ ಪ್ರಪಂಚವು ಬರೀ ಭ್ರಮೆಯಿಂದ ತುಂಬಿ ಹೋಗುವದು. ಈ ಕಾರಣದಿಂದ ಕುಂಡಲಿನಿ ಮತ್ತು ಚಕ್ರಗಳ ಬಗ್ಗೆ ಸಂಪೂರ್ಣ ಅಜ್ಞಾನದಿಂದ ಧ್ಯಾನ ಮುಂದುವರಿಸುವದು ಒಳ್ಳೆಯದು. ನಿಮ್ಮ ಕಾಲಿಗೆ ಅವಾಗ್ಗೆ ಬಂದು ತೋಡರಿಕೊಂಡರೆ ಒಳ್ಳೆಯದು. ಆಗ ನಿಮಗೆ ಏನಾದರು ಅನುಭವ ಉಂಟಾದರೆ ಒಳ್ಳೆಯದು. ಅದಕ್ಕಿಂತ ಮುಂಚೆಯೆ ಅವುಗಳ ಬಗ್ಗೆ ಆಲೋಚನೆˌ ಊಹೆˌ ಕಲ್ಪನೆ ಮಾಡಿಕೊಳ್ಳಬೇಡಿ. ಅವುಗಳ ಪೂರ್ವ ಜ್ಞಾನ ಅಗತ್ಯವಿಲ್ಲ. ಆಗ ನಿಶ್ಟಯವಾಗಿ ಅವು ಹಾನಿಕಾರ.
ಮತ್ತೊಂದು ವಿಷಯˌ ಕುಂಡಲಿನಿ ಮತ್ತು ಚಕ್ರಗಳು ನಿಮ್ಮ ದೇಹದ ಅಂಗಗಳು ಅಲ್ಲ. ಇವು ಸೂಕ್ಪ್ಮ ಶರೀರಕ್ಕೆ ಸೇರಿದವು. ಆದರೇ ಭೌತಿಕ ಶರೀರದಲ್ಲಿ ಅವುಗಳಿಗೆ ಸರಿಹೊಂದುವ ಅನೇಕ ಬಿಂದುಗಳಿವೆ. ಒಳಗಿನ ಚಕ್ರಗಳನ್ನು ಸ್ಪರ್ಶಿಸಲು ನಿಮ್ಮಗೆಯಾದಗ ಸಂಬಂಧಪಟ್ಟ ಬಿಂದುವಿನ ಅನಭವ ವಾಗುವದು. ಇಲ್ಲದಿದ್ದಲ್ಲಿ ನಿಮ್ಮ ದೇಹವನ್ನು ಪೂರ್ತಿ ಕತ್ತರಿಸಿ ನೋಡಿದರು ಕೂಡ ಚಕ್ರಗಳಂಥ ಯಾವುದೇ ವಸ್ತುಗಳು ನಿಮಗೆ ಕಾಣುವುದಿಲ್ಲ. ನೀವು ಚಕ್ರಗಳ ಮೂಲಕವೇ ಹಾದು ಹೋಗಬೇಕಾದ ಅವಶ್ಯಕತೆಯಿಲ್ಲ. ನೀವು ಅವುಗಳನ್ನು ಬೈ -ಪಾಸ್ ಮಾಡಿಕೊಂಡು ಹೋಗಬಹುದು. ಜ್ಞಾನೋದಯಕ್ಕೆ ಮೊದಲು ಕುಂಡಲಿನಿ ಅನುಭವದ ಅವಶ್ಯಕತೆಯಿಲ್ಲ. ಕುಂಡಲಿನಿ ಮೆಲ್ಮುಖವಾಗಿ ಚಲಿಸುವುದರಿಂದ ಅದರ ಅನುಭವವಾಗುವುದಿಲ್ಲ. ಕುಂಡಲಿನಿ ಅನುಭವವಾಗುವದು ಅವುಗಳ ಮಾರ್ಗದಲ್ಲಿ ತಡೆಯಿದ್ದಾಗ. ಯಾರಿಗೆ ಕುಂಡಲಿನಿ ಶಕ್ತಿಯ ಮಾರ್ಗದ ಅನುಭವ ಹೆಚ್ಚಾಗಿ ಆಗುವದೋ ಆತನ ಮಾರ್ಗ ಅಡೆತಡೆಗಳಿಂದ ಕೂಡಿದೆ ಎಂದರ್ಥ.
ಪ್ರತಿರೋಧವಿಲ್ಲದಲ್ಲಿ ನೀವು ಊರ್ಜೆಯನ್ನು ಅನಭವಿಸಲು ಆಗದು. ಶೂನ್ಯತೆಯಲ್ಲಿ ˌ ವ್ಯಾಕ್ಯೂಮದಲ್ಲಿ ಕೈಯ ಚಲನೆಯ ಅನುಭವಾಗುವುದಿಲ್ಲ. ಕೈಯ ಚಲನೆಯ ಅನುಭವವಾಗಲು ಗಾಳಿಯು ಪ್ರತಿರೋಧ ಒಡ್ಡಿದಾಗ. ಮಹಾವೀರˌ ಬುದ್ದನಿಗೆ ಕುಂಡಲಿನಿಯ ಅನುಭವವೇಯಾಗಲಿಲ್ಲ. ಅವರಿಗೆ ಯಾವ ಪ್ರತಿರೋಧವು ಇರಲಿಲ್ಲ. ಹಾಗಂತ ಅವರಲ್ಲಿ ಕುಂಡಲಿನಿ ಶಕ್ತಿ ಇರಲಿಲ್ಲವೆಂದಲ್ಲ. ಅವರ ಮಾರ್ಗವು ಶುಭ್ರವಾಗಿತ್ತು. ಅದಕ್ಕೆ ಅವರು ಅವುಗಳ ಕುರಿತು ಮಾತನಾಡಲಿಲ್ಲ.
( ಇನ್ನೂ ಇದೆ..)