ಕುಂಡಲಿನಿ ಜಾಗೃತಿಯ ಲಕ್ಪಣಗಳು… – ಓಶೋ

“ಕುಂಡಲಿನಿ ಜಾಗೃತವಾದಗ ಅದು ದೇಹದಲ್ಲಿ ಮಾಂಸವನ್ನು ತಿನ್ನುತ್ತದೆ ಮತ್ತು ರಕ್ತವನ್ನು ಕುಡಿಯುತ್ತದೆ” ಎಂಬ ಹೇಳಿಕೆಯಿದೆ. ಅದೇಕೆ? ಓಶೋ ವಿವರಣೆಯ ಈ ಲೇಖನ ಓದಿ | ಜಯದೇವ ಪೂಜಾರ್

ಕುಂಡಲಿನಿ ಜಾಗೃತವಾದಗ ದೈಹಿಕವಾಗಿ ಅನೇಕ ಪರಿವರ್ತನೆಗಳು ಆಗುತ್ತವೆ.ಯಾವಗಲಾದರೂ ಹೊಸ ಊರ್ಜೆಯೊಂದು ಜಾಗೃತಗೊಂಡಾಗˌ ದೇಹದಲ್ಲಿ ಹಳೆಯ ಸಂಯೋಜನೆಗಳೆಲ್ಲ ಸಂಪೂರ್ಣವಾಗಿ ಬದಲಾವಣೆಗೆ ಒಳಗಾಗುವದು. ಅದು ಬದಲಾಗಬೇಕು ಕೂಡ. ದೇಹವು ತನ್ನದೆಯಾದ ಅನೇಕ ಅಜ್ಞಾತ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬ ಅರಿವು ನಮಗೆ ಇರುವುದಿಲ್ಲ.

ಉದಾಹರಣೆಗೆ; ಜಿಪುಣನ ಸಂಗತಿಯನ್ನು ತಗೆದುಕೊಳ್ಳಿ ˌ ಜಿಪುಣತನ ಮನಸ್ಸಿನ ಒಂದು ಗುಣ. ಆದರೆ ಇದರಿಂದ ಅವನ ದೇಹವು ಜಿಪುಣವಾಗುವದು. ಅವನ ದೇಹವು ತನಗೆ ಭವಿಷ್ಯಕ್ಕೆ ಬೇಕಾಗಿರಬಹುದಾದ ಎಲ್ಲ ವಸ್ತುಗಳನ್ನು ಸಂಗ್ರಹಿಸಲಾರಂಭಿಸುತ್ತದೆ. ಅದು ತನಗೆ ಕಿರುಕುಳ ಅಸೌಖ್ಯವಾಗುತ್ತಿದೆ ಎನ್ನುವ ಬಿಂದುವಿಗೆ ತಲುಪವವರೆಗು ಅಕಾರಣವಾಗಿ ವಸ್ತುಗಳನ್ನು ಸಂಗ್ರಹಿಸುತ್ತಲೆ ಹೋಗುತ್ತದೆ.

ಈಗ ನಾವು ಹೇಡಿಯಾದ ವ್ಯಕ್ತಿಯನ್ನು ಗಮನಿಸೋಣˌ ಅವನ ದೇಹವು ಭಯಕ್ಕೆ ಸಹಾಯಕವಾಗುವ ಎಲ್ಲ ಮೂಲವಸ್ತುಗಳನ್ನು ಒಟ್ಟುಗೂಡಿಸುತ್ತದೆ. ಒಂದು ವೇಳೆ ದೇಹಕ್ಕೆ ಭಯದಿಂದ ನಡುಗಬೇಕೆನ್ನಿಸಿದೆ ಆದರೇ ಭಯಕ್ಕೆ ಅಗತ್ಯವಾಗಿರುವದು ಇರುವುದಿಲ್ಲ. ಅದೇನು ಮಾಡುವದು? ನೀವು ಭಯಬೇಕೆಂದು ದೇಹಕ್ಕೆ ಒತ್ತಾಯಿಸುತ್ತೀರಿ ಮತ್ತು ಅದರ ಬಳಿ ಭಯಕ್ಕೆ ಬೇಕಾದ ಗ್ರಂಥಿಗಳು ಮತ್ತು ಹಾರ್ಮೊನ್ ಗಳು ಇಲ್ಲ ˌ ಅದೇನು ಮಾಡುವದು? ನಿಮ್ಮ ಅಗತ್ಯತೆಯನ್ನು ತಿಳಿದಿರುವುದರಿಂದಾಗಿ ಅದೂ ಯಾವಾಗಲೂ ಭಯ ಗ್ರಂಥಿಗಳನ್ನು ಸಿದ್ದಪಡಿಸಿಟ್ಟಿರುತ್ತದೆ. ಭಯಗ್ರಸ್ತ ವ್ಯಕ್ತಿಯ ದೇಹವು ಭಯದಿಂದಾಗುವ ತೃಪ್ತಿಗೆ ಅನುಕೂಲಕರವಾದ ಭಯ ಉತ್ಪನ್ನ ಮಾಡುವ ಗ್ರಂಥಿಗಳನ್ನು ಒಟ್ಟುಗೂಡಿಸುತ್ತದೆ. ಆಗ ನೀವು ಭಯದಿಂದ ನಡುಗಲು ಮತ್ತು ಬೆವರಲು ಆರಂಭಿಸುವಿರಿ.

ಆದ್ದರಿಂದ ನೆನಪಿಡಿˌ ದೇಹವು ಮನಸ್ಸಿನ ಅವಶ್ಯಕತೆಗೆ ಅನುಗುಣವಾಗಿ ವಸ್ತುಗಳನ್ನು ಸಂಗ್ರಹಿಸಿಕೊಳ್ಳುತ್ತದೆ. ಮಾನಸಿಕ ಬದಲಾವಣೆಯಾದಾಗ ದೈಹಿಕವಾಗಿ ಬದಲಾವಣೆಯೂ ಆಗುವದು. ಕುಂಡಲಿನಿಯು ಜಾಗೃತವಾದಾಗ ನಿಮ್ಮ ದೇಹದಲ್ಲಿ ಸಂಪೂರ್ಣವಾಗಿ ಬದಲಾವಣೆಯಾಗುತ್ತದೆ. ಈ ರೂಪಾಂತರಣೆಯಲ್ಲಿ ನಿಮ್ಮ ದೇಹದ ಮಾಂಸವು ಕರಗಬಹುದುˌ ರಕ್ತವು ಸಹˌ ದೇಹದಲ್ಲಿ ಹಾರ್ಮೊನ್ ಗಳ ಬದಲಾವಣೆಯಿಂದ ನಿಮ್ಮ ಕಣ್ಣುಗಳು ಒಳಗೆ ಹೋಗಬಹುದುˌ ಧಿಡೀರನೆ ಕೂದಲು ಬೆಳ್ಳಗೆಯಾಗಿ ಅಕಾಲ ವೃದ್ದಾಪ್ಯ ಆವರಿಸಿದಂತೆ ಕಾಣಬಹುದುˌ ಮುಖದಲ್ಲಿ ವಯಸ್ಸಿಗೆ ಮೀರಿದ ಪ್ರೌಢಿಮೆ ಕಾಣುವದುˌ ದೇಹಕ್ಕೆ ಎಷ್ಟು ರಕ್ತ ಮಾಂಸ ಬೇಕೊ ಅಷ್ಟೆ ಉಳಿದುಕೊಳ್ಳುವದು. ಮಿಕ್ಕಿದೆಲ್ಲ ಕರಗಿ ಹೋಗುವದು. ಆ ನಂತರವೆ ನಿಮಗೆ ಹಗುರವಾಗಿರುವುದರ ಅನುಭವವಾಗುವದು. ಆಮೇಲೆ ನೀವು ಅಂತರ ಆಕಾಶದಲ್ಲಿ ಹಾರಡಲು ಸಾಧ್ಯವಾಗುವದು.

ಕುಂಡಲಿನಿ ಜಾಗೃತಿಗೆ ಮುಂಚೆˌ ವಿಶೇಷ ಆಹಾರಕ್ರಮ ಮತ್ತು ವಿಶೇಷ ರೀತಿಯ ಜೀವನಶೈಲಿ ಇರಬೇಕಾಗುತ್ತದೆ. ಇಲ್ಲದಿದ್ದಲ್ಹಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮೊಳಗೆ ಕುಂಡಲಿನಿ ಜಾಗೃತವಾದಗ ದೇಹದಲ್ಲಿ ಹೆಚ್ಚಾದ ಶಾಖ ಉತ್ಪತ್ತಿಯಾಗುತ್ತದೆ. ಏಕೇಂದರೆ ಅದೊಂದು ವಿದ್ಯುತ್ ಶಕ್ತಿ. ಅದೊಂದು ಹೆಚ್ಚಿನ ವೊಲ್ಟೆಜ್ ಇರುವ ಎನರ್ಜಿ. ಹೀಗೆ ಕುಂಡಲಿನಿ ನಿಮ್ಮೊಳಗೆ ಅಗ್ನಿಯಂತೆ ಪ್ರಜ್ವಲಿಸುತ್ತದೆ ಮತ್ತು ಅದರ ಜ್ವಾಲೆ ಉನ್ನತ ಮಟ್ಟಕ್ಕೆ ಏರುತ್ತದೆ. ದೇಹವು ಶುಷ್ಕವಾಗುವದು. ಆದ್ದರಿಂದ ವ್ಯಕ್ತಿಯು ತುಂಬ ಪೌಷ್ಟಿಕ ಸತ್ವಗಳಿಂದ ತುಂಬಿರಬೇಕು. ನಿಮಗೆ ಕೋಪವಿದೆˌ ಅಂತವರಲ್ಲಿ ಕುಂಡಲಿನಿ ಶಕ್ತಿ ಜಾಗೃತಿಯಾದರೇ ಅನಾಹುತವಾಗುವದು. ತುಂಬ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ನೀವು ಪ್ರೇಮಪೂರ್ಣರಾಗಿದ್ದಲ್ಲಿ ಅಗಾಧವಾದ ರಾಸಾಯನಿಕಗಳ ಸಾಮರಸ್ಯವಿರುತ್ತದೆ. ಇಂಥವರಿಗೆ ಕುಂಡಲಿನಿ ಜಾಗೃತವಾದಗ ಯಾವ ಪ್ರತಿಕೂಲ ಪರಿಣಾಮವಾಗುವುದಿಲ್ಲ . ಆಗ ಅದು ಆಧ್ಯಾತ್ಮಿಕ ವಿಕಸನ ದಾರಿಯಾಗುತ್ತದೆ.

ಧ್ಯಾನಿಯು ಇದನ್ನ ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ಅದಕ್ಕನುಗುಣವಾಗಿ ತನ್ನನ್ನು ತಯಾರು ಮಾಡಿಕೊಳ್ಳಬೇಕು. ಕುಂಡಲಿನಿ ಜಾಗೃತವಾದಗ ಅದು ದೇಹದಲ್ಲಿ ಮಾಂಸವನ್ನು ತಿನ್ನುತ್ತದೆ ಮತ್ತು ರಕ್ತವನ್ನು ಕುಡಿಯುತ್ತದೆ ಎಂಬ ಹೇಳಿಕೆಯು ಸರಿಯಾಗಿದೆ.

( ಇನ್ನೂ ಇದೆ…)

ಹಿಂದಿನ ಭಾಗ ಇಲ್ಲಿ ಓದಿ : https://aralimara.com/2020/05/30/kundalini/

Leave a Reply