ಅಮಂಗಲವನ್ನು ದೂರ ಮಾಡುವ ಶಾಂತಿ ಮಂತ್ರ : ನಿತ್ಯಪಾಠ

ನಮ್ಮ ವೇದೋಪನಿಷತ್ತುಗಳಲ್ಲಿರುವ ಶಾಂತಿ ಮಂತ್ರಗಳು ವೈಯಕ್ತಿಕ ಶಾಂತಿ, ಸಮೃದ್ಧಿ ಮತ್ತು ಮಂಗಳವನ್ನು ಹಾರೈಸುವ ಪ್ರಾರ್ಥನೆಗಳು ಮಾತ್ರವಲ್ಲ, ವಿಶ್ವಕ್ಕೂ ಸಕಲ ಸನ್ಮಂಗಳ ಬಯಸುವ ಪ್ರಾರ್ಥನೆಗಳಾಗಿವೆ. ಅಂಥ ಶಾಂತಿ ಮಂತ್ರಗಳಲ್ಲೊಂದನ್ನು ಪುರುಷಸೂಕ್ತದಿಂದ ಆಯ್ದು ಇಲ್ಲಿ ನೀಡಲಾಗಿದೆ….

ಓಂ ತಚ್ಚಂ ಯೋರಾವೃಣೀಮಹೇ | ಗಾತುಂ ಯಜ್ಞಾಯ|
ಗಾತುಂ ಯಜ್ಞಪತಯೇ | ದೈವೀ ಸ್ವಸ್ತಿರಸ್ತು ನಃ |
ಸ್ವಸ್ತಿರ್ಮಾನುಷೇಭ್ಯಃ | ಊರ್ಧ್ವಂ ಜಿಗಾತು ಭೇಷಜಮ್|
ಶಂ ನೋ ಅಸ್ತು ದ್ವಿಪದೇ  | ಶಂ ಚತುಷ್ಪದೇ |
ಓಂ ಶಾಂತಿಃ ಶಾಂತಿಃ ಶಾಂತಿಃ  ||
ಅರ್ಥ 
ನಮ್ಮ ದುಃಖವನ್ನು ಹೋಗಲಾಡಿಸುವ ಮತ್ತು ನಮ್ಮ ಧಾರ್ಮಿಕ ಕ್ರಿಯೆಗಳಿಗೆ ಫಲವನ್ನು ನೀಡುವ ಭಗವಂತನನ್ನು ಪ್ರಾರ್ಥಿಸುತ್ತೇವೆದೇವತೆಗಳು ಯಾವ ಬಗೆಯ ಒಳಿತನ್ನು ಹೊಂದುವರೊನಾವೂ ಅದನ್ನೆ ಪಡೆಯುವಂತಾಗಲಿಎಲ್ಲ ಮಾನವರೂ ಮಂಗಳವನ್ನು ಹೊಂದಲಿಮುಂದೆಯೂ ಅಷ್ಟೆಜೀವನದ ಸಕಲ ದುರಿತಗಳೂ ದೂರವಾಗಲಿ! ಎರಡು ಕಾಲಿನ, ನಾಲ್ಕು ಕಾಲಿನ (ಪಕ್ಷಿಗಳು – ಪ್ರಾಣಿಗಳು) ಜೀವಿಗಳೆಲ್ಲವೂ ಶಾಂತಿಯಿಂದಿರಲಿ.
ತಾತ್ಪರ್ಯ 
ಇದು ಪುರುಷಸೂಕ್ತದ ಮೊದಲು ಹಾಗೂ ಕೊನೆಯಲ್ಲಿ ಪಠಿಸುವ ಶಾಂತಿಮಂತ್ರಅಮಂಗಲವನ್ನು ದೂರಮಾಡಲು ಮಾಡುವ ಶಾಂತಿಕರ್ಮಗಳಲ್ಲಿ ಹಾಗೂ ಅಭಿಷೇಕ ಕರ್ಮಗಳಲ್ಲಿ ಬಳಸುವ ದಶಶಾಂತಿ ಮಂತ್ರಗಳಲ್ಲಿ ಪ್ರಸ್ತುತ ಶಾಂತಿಮಂತ್ರವೂ ಒಂದಾಗಿ ಪರಿಗಣಿಸಲ್ಪಟ್ಟಿದೆ.
ಮೊದಲ ಪದವಾದ “ಶಂಯೋಃ” ಎಂಬುದನ್ನು, “ನಮ್ಮ ಪೂರ್ವ ಕುಕರ್ಮಗಳ ಫಲವಾಗಿ ಈಗಾಗಲೇ ಪ್ರಾಪ್ತವಾಗಿರುವ ಹಾಗೂ ಮುಂದೆ ಬರಬಹುದಾದಂತಹ ರೋಗರುಜಿನಗಳು ಮತ್ತು ಕಷ್ಟಗಳು” ಎಂಬುದಾಗಿಯೂ ಅರ್ಥೈಸಲಾಗುವುದು.
ಯಜ್ಞಗಳನ್ನು ಮಾಡುವುದು ನಮ್ಮ ಕೈಯಲ್ಲಿದ್ದರೂಅವುಗಳ ಫಲದಾತನು ಭಗವಂತನೇಆದ್ದರಿಂದ ಫಲಪ್ರಾಪ್ತಿಗಾಗಿ ಹಾಗೂ ಯಜ್ಞವನ್ನು ನೆರವೇರಿಸಿದ ಯಜಮಾನನ ಇಷ್ಟಸಿದ್ಧಿಗಾಗಿ ಭಗವಂತನಲ್ಲಿ ಪ್ರಾರ್ಥಿಸಲಾಗಿದೆ.
ಈ ಮಂತ್ರದಲ್ಲಿ ಮನುಷ್ಯರು ಮಾತ್ರವಲ್ಲ, ಖಗಮೃಗಗಳಿಗೂ ಶಾಂತಿಯನ್ನು ಕೋರಲಾಗಿದೆ. ಸೃಷ್ಟಿಯ ಯಾವ ಜೀವಿಯೂ ಒಂದು ಸುಖದಿಂದ ಇರದ ಹೊರತು ಮತ್ತೊಂದು ಸಂಪೂರ್ಣ ಸುಖಶಾಂತಿಯಿಂದ ಇರುವುದು ಸಾಧ್ಯವಿಲ್ಲ. ಎಲ್ಲ ಜಡಚೇತನಗಳಿಗೂ ಸೃಷ್ಟಿಯಲ್ಲಿ ಸಮಾನ ಸ್ಥಾನವಿದೆ ಎಂಬ ಒಳನೋಟದಿಂದ ಈ ಪ್ರಾರ್ಥನೆ ಹೊಮ್ಮಿದೆ. 
ಈ ಮಂತ್ರದಲ್ಲಿ ಯಜ್ಞ ಎಂದು ಹೇಳಲಾಗಿರುವುದನ್ನು ಹೋಮಕುಂಡದ ಸುತ್ತ ಕುಳಿತು ಮಾಡುವ ಯಜ್ಞ ಎಂದು ಭಾವಿಸಬೇಕಿಲ್ಲ. ಕಲಿಯುಗದಲ್ಲಿ ಪ್ರಾರ್ಥನೆ ಮತ್ತು ಸಂಕೀರ್ತನೆಗಳೇ ಯಜ್ಞ ಎಂದು ಹೇಳಲಾಗಿದೆ. ಆದ್ದರಿಂದ ಯಾರು ಪ್ರಾರ್ಥನೆ ಮಾಡುತ್ತಾರೋ ಅವರಿಗೂ ಅವರು ಯಾರೆಲ್ಲರ ಪರವಾಗಿ ಪ್ರಾರ್ಥಿಸುತ್ತಾರೋ ಅವರೆಲ್ಲರಿಗೂ ಇದರ ಫಲ ದೊರೆಯುತ್ತದೆ. 
ನಿರ್ದಿಷ್ಟವಾಗಿ ಪುರುಷಸೂಕ್ತದ ಈ ಶಾಂತಿ ಮಂತ್ರವು ಎಲ್ಲ ಬಗೆಯ ಅಮಂಗಳವನ್ನೂ ಹೋಗಲಾಡಿಸುವುದು ಎಂದು ಹೇಳಲಾಗಿದೆ. 
ಮೂರು ಬಾರಿ ‘ಶಾಂತಿ’ ಹೇಳುವುದೇಕೆ?
ಮೂರು ಬಗೆಯ ತೊಂದರೆಗಳನ್ನು ನಿವಾರಿಸಲುಮೂರು ಬಾರಿ “ಶಾಂತಿಃ” ಎಂದು ಉಚ್ಚರಿಸಲಾಗುತ್ತದೆ – ಆಧ್ಯಾತ್ಮಿಕ (ರೋಗವೇ ಮೊದಲಾದ ದೇಹಕ್ಕೆ ಸಂಬಂಧಿಸಿದ), ಆಧಿಭೌತಿಕ (ವನ್ಯಪ್ರಾಣಿ ಅಥವಾ ಸರೀಸೃಪಗಳಂತಹ ಇತರ ಜೀವಿಗಳಿಂದ ಉಂಟಾದ ತೊಂದರೆಗಳುಹಾಗೂ ಆಧಿದೈವಿಕಗಳೇ (ಭೂಕಂಪಕ್ಷಾಮನೆರೆ ಮೊದಲಾದ ಪ್ರಾಕೃತಿಕ ವಿಕೋಪಗಳಿಂದ ಉಂಟಾದ ಆಪತ್ತುಗಳುಆ ಮೂರು ತೊಂದರೆಗಳು.

2 Comments

  1. ಇದರ ಅರ್ಥ ಕನ್ನಡದಲ್ಲಿ ಹೇಳಿದರೆ ಸೂಕ್ತ. ಎಲ್ಲರಿಗೂ ಅರ್ಥವಾಗುತ್ತದೆ.

Leave a Reply