ಭಾರತದ ಪ್ರಾಚೀನ ಕಾಲಗಣನೆ ಮಾಪನಗಳು ಏನಿದ್ದವು ಗೊತ್ತೆ?

ತ್ರುಟಿಯಿಂದ ಕಲ್ಪದವರೆಗೆ ಭಾರತದ ಪ್ರಾಚೀನ ಸಾಹಿತ್ಯ ಮತ್ತು ಶಾಸ್ತ್ರಗಳಲ್ಲಿ ಉಲ್ಲೇಖವಾಗಿರುವ ಕಾಲ ಗಣನೆ ಮಾಪನಗಳನ್ನು ಇಲ್ಲಿ ನೀಡಲಾಗಿದೆ…

ಒಂದು ಕಮಲದ ಹೂವಿನ ದಳವನ್ನು ಹರಿತವಾದ ಮೊನೆಯ ಸೂಜಿಯಿಂದ ಚುಚ್ಚಿ ರಂಧ್ರ ಮಾಡಲು ಬೇಕಾಗುವ ಕಾಲವನ್ನು ‘ತ್ರುಟಿ’ ಎಂದು ಕರೆಯಲಾಗಿತ್ತು. ಮತ್ತು ಈ ‘ತ್ರುಟಿ’ಯನ್ನು ಕಾಲಮಾಪನದ ಅತ್ಯಂತ ಚಿಕ್ಕ ಘಟಕವೆಂದು ಪರಿಗಣಿಸಲಾಗುತ್ತಿತ್ತು.  ತ್ರುಟಿಯಿಂದ ಕಲ್ಪದವರೆಗೆ ಕಾಲಮಾಪನದ ವಿವಿಧ ಘಟಕಗಳು ಹೇಗೆ ಗುರುತಿಸಲ್ಪಡುತ್ತಿದ್ದವು ಎಂಬುದನ್ನು ಇಲ್ಲಿ ನೋಡೋಣ…

ಕಮಲದ ಎಸಳನ್ನು ರಂಧ್ರ ಮಾಡಲು
ಅಗತ್ಯವಾಗುವ ಸಮಯ  = 1 ತ್ರುಟಿ
100 ತ್ರುಟಿಗಳು  = 1 ಲವ
100 ಲವಗಳು  = 1 ನಿಮೇಷ (ಕಣ್ಣು ಮಿಟಿಕಿಸುವಷ್ಟು ಸಮಯ)
4  1/2 ನಿಮೇಮೆಷ  = 1 ದೀರ್ಘ ಅಕ್ಷರ ಉಚ್ಚಾರಣಾ ಸಮಯ
4 ದೀರ್ಘ ಅಕ್ಷರ  = 1 ಕಾಷ್ಠ
2  1/2 ಕಾಷ್ಠಗಳು  = 1 ವಿಘಟಿಕ
60 ವಿಘಟಿಕಗಳು  = 1 ಘಟಿಕಾ (ಈಗಿನ 24 ನಿಮಿಷಗಳು)
60 ಘಟಿಕಾಗಳು  = 1 ದಿನ
30 ದಿನಗಳು  = 1 ಮಾಸ
12 ಮಾಸಗಳು  = 1 ವರ್ಷ
43,20,000 ವರ್ಷಗಳು  = 1 ಯುಗ
72 ಯುಗಗಳು  = 1 ಮನ್ವಂತರ
14 ಮನ್ವಂತರಗಳು  = 1 ಕಲ್ಪ
2 ಕಲ್ಪಗಳು  = ಬ್ರಹ್ಮನ 1 ದಿನ (ಹಗಲು – ರಾತ್ರಿಗಳು)
ಬ್ರಹ್ಮನ 30 ದಿನಗಳು  = ಬ್ರಹ್ಮನ 1 ತಿಂಗಳು
ಬ್ರಹ್ಮನ 12 ತಿಂಗಳುಗಳು  = ಬ್ರಹ್ಮನ 1 ವರ್ಷ
ಬ್ರಹ್ಮನ 1 ವರ್ಷ  = 721423012 ಯುಗಗಳು
ಬ್ರಹ್ಮನ 100  ವರ್ಷ  = ಒಂದು ಮಹಾಕಲ್ಪ ಅಥವಾ ಬ್ರಹ್ಮನ ಪೂರ್ಣಾಯುಷ್ಯ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.