ತ್ರುಟಿಯಿಂದ ಕಲ್ಪದವರೆಗೆ ಭಾರತದ ಪ್ರಾಚೀನ ಸಾಹಿತ್ಯ ಮತ್ತು ಶಾಸ್ತ್ರಗಳಲ್ಲಿ ಉಲ್ಲೇಖವಾಗಿರುವ ಕಾಲ ಗಣನೆ ಮಾಪನಗಳನ್ನು ಇಲ್ಲಿ ನೀಡಲಾಗಿದೆ…
ಒಂದು ಕಮಲದ ಹೂವಿನ ದಳವನ್ನು ಹರಿತವಾದ ಮೊನೆಯ ಸೂಜಿಯಿಂದ ಚುಚ್ಚಿ ರಂಧ್ರ ಮಾಡಲು ಬೇಕಾಗುವ ಕಾಲವನ್ನು ‘ತ್ರುಟಿ’ ಎಂದು ಕರೆಯಲಾಗಿತ್ತು. ಮತ್ತು ಈ ‘ತ್ರುಟಿ’ಯನ್ನು ಕಾಲಮಾಪನದ ಅತ್ಯಂತ ಚಿಕ್ಕ ಘಟಕವೆಂದು ಪರಿಗಣಿಸಲಾಗುತ್ತಿತ್ತು. ತ್ರುಟಿಯಿಂದ ಕಲ್ಪದವರೆಗೆ ಕಾಲಮಾಪನದ ವಿವಿಧ ಘಟಕಗಳು ಹೇಗೆ ಗುರುತಿಸಲ್ಪಡುತ್ತಿದ್ದವು ಎಂಬುದನ್ನು ಇಲ್ಲಿ ನೋಡೋಣ…
ಕಮಲದ ಎಸಳನ್ನು ರಂಧ್ರ ಮಾಡಲು
ಅಗತ್ಯವಾಗುವ ಸಮಯ = 1 ತ್ರುಟಿ
100 ತ್ರುಟಿಗಳು = 1 ಲವ
100 ಲವಗಳು = 1 ನಿಮೇಷ (ಕಣ್ಣು ಮಿಟಿಕಿಸುವಷ್ಟು ಸಮಯ)
4 1/2 ನಿಮೇಮೆಷ = 1 ದೀರ್ಘ ಅಕ್ಷರ ಉಚ್ಚಾರಣಾ ಸಮಯ
4 ದೀರ್ಘ ಅಕ್ಷರ = 1 ಕಾಷ್ಠ
2 1/2 ಕಾಷ್ಠಗಳು = 1 ವಿಘಟಿಕ
60 ವಿಘಟಿಕಗಳು = 1 ಘಟಿಕಾ (ಈಗಿನ 24 ನಿಮಿಷಗಳು)
60 ಘಟಿಕಾಗಳು = 1 ದಿನ
30 ದಿನಗಳು = 1 ಮಾಸ
12 ಮಾಸಗಳು = 1 ವರ್ಷ
43,20,000 ವರ್ಷಗಳು = 1 ಯುಗ
72 ಯುಗಗಳು = 1 ಮನ್ವಂತರ
14 ಮನ್ವಂತರಗಳು = 1 ಕಲ್ಪ
2 ಕಲ್ಪಗಳು = ಬ್ರಹ್ಮನ 1 ದಿನ (ಹಗಲು – ರಾತ್ರಿಗಳು)
ಬ್ರಹ್ಮನ 30 ದಿನಗಳು = ಬ್ರಹ್ಮನ 1 ತಿಂಗಳು
ಬ್ರಹ್ಮನ 12 ತಿಂಗಳುಗಳು = ಬ್ರಹ್ಮನ 1 ವರ್ಷ
ಬ್ರಹ್ಮನ 1 ವರ್ಷ = 721423012 ಯುಗಗಳು
ಬ್ರಹ್ಮನ 100 ವರ್ಷ = ಒಂದು ಮಹಾಕಲ್ಪ ಅಥವಾ ಬ್ರಹ್ಮನ ಪೂರ್ಣಾಯುಷ್ಯ