ಸೂಕ್ಪ್ಮ ಶರೀರಯಾನ : ಹಾಗೆಂದರೇನು?

ಕಾಲವೆಂದರೇನು? ಕಾಲವೆಂದರೆ ಚಲನೆ . ಯಾವಾಗಲೂ ಚಲನೆಯು ವರ್ತಮಾನದಲ್ಲಿ ಇರುತ್ತದೆ. ಚಲನೆಯ ನಿಯಮಗಳನ್ನು ನೀವು ತಿಳಿಯಬೇಕಾದರೆ ಅದನ್ನು ವರ್ತಮಾನದಲ್ಲಿ ಇದ್ದು ಅನುಭವಿಸಬೇಕು. ಕಾಲದಲ್ಲಿ ಭೂತˌ ಭವಿಷ್ಯ ˌ ಗಳಿಗೆˌ ಘಂಟೆˌ ದಿನˌ …..ಇವೆಲ್ಲ ಇಲ್ಲ. ಇವೆಲ್ಲವು ನಾವು ಕಾಲವನ್ನು ಅಳೆಯಲು ಮಾಡಿಕೊಂಡಿರುವ ಮಾಪನಗಳು ಅಷ್ಟೆ | ಜಯದೇವ ಪೂಜಾರ್

ಸೂಕ್ಪ್ಮ ಶರೀರಯಾನವೆಂದರೇನು? ಅದು ಸಾಧ್ಯವಾ? ಅದು ದೇಶ ಮತ್ತು ಕಾಲವನ್ನು ಮೀರಿ ಹೋಗುವದು ಅಥವ ಕಾಲಾತೀತ ಅನುಭವ ಹೊಂದುವದು. ಮನುಷ್ಯನಿಗೆ ದೇಶ ಮತ್ತು ಕಾಲಾತೀತವಾಗುವಂತ ಶಕ್ತಿಯಿದೆಯಾ? ನಿಜವಾಗಿಯೂ ಇಂತದೊಂದು ಅದ್ಬುತವಾದ ಶಕ್ತಿ ಮನುಷ್ಯನಿಗೆ ಇದೆ. ಆದರೆˌ ಅದು ಕೇವಲ ಕೆಲವರ ಅನುಭವಕ್ಕೆ ಮಾತ್ರ ದಕ್ಕುವಂತದ್ದು. ದೇಶ ಮತ್ತು ಕಾಲಾತೀತವಾಗುವದು ಎಂದರೇನು? “ಇಲ್ಲವಾಗುವದು” ಅಥವ “ಸಾಯುವದು”. ಈ “ಇಲ್ಲವಾಗುವ” ಅನುಭವವನ್ನು ಇದ್ದು ಅನುಭವಿಸುವದು ಕಾಲಾತೀತ ಅನುಭವ. ಸಾವಿನ ಅನುಭವವನ್ನು ಜೀವಂತವಾಗಿ ಅನುಭವಿಸುವದು. ಇದನ್ನು ಇನ್ನೊಂದು ಹೆಸರಲ್ಲಿ ಸೂಕ್ಪ್ಮ ಶರೀರಯಾನವೆಂದು ಹೇಳುತ್ತಾರೆ. ಸೂಕ್ಪ್ಮ ಶರೀರ ಯಾನ ಹೇಗೆ? ಎಂದು ತಿಳಿಯುವ ಮುನ್ನ ನಾವು ದೇಶ ಮತ್ತು ಕಾಲವನ್ನು ತಿಳಿಯಬೇಕು.

ಕಾಲವೆಂದರೇನು? ಕಾಲವೆಂದರೆ ಚಲನೆ. ಯಾವಾಗಲೂ ಚಲನೆಯು ವರ್ತಮಾನದಲ್ಲಿ ಇರುತ್ತದೆ. ಚಲನೆಯ ನಿಯಮಗಳನ್ನು ನೀವು ತಿಳಿಯಬೇಕಾದರೆ ವರ್ತಮಾನದಲ್ಲಿ ಇದ್ದು ಅನುಭವಿಸಬೇಕು. ಕಾಲದಲ್ಲಿ ಭೂತˌ ಭವಿಷ್ಯ ˌಗಳಿಗೆˌ ಘಂಟೆˌ ದಿನˌ ಕ್ಯಾಲೆಂಡರ್ …..ಇವೆಲ್ಲ ಇಲ್ಲ. ಇವೆಲ್ಲವೂ ನಾವು ಕಾಲವನ್ನು ಅಳೆಯಲು ಮಾಡಿಕೊಂಡಿರುವ ಮಾಪನಗಳು ಅಷ್ಟೆ.

ನಿಜವಾದ ಕಾಲದಲ್ಲಿ ಚಲನೆಯಿದೆ. ಈ ಚಲನೆಗೆ ಮೂಲ ಕಾರಣ ನಮ್ಮ ಆಲೋಚನೆಗಳು. ಆಲೋಚನೆಗಳು ಇಲ್ಲವಾದರೆ ಚಲನೆಯಿಲ್ಲ. ಒಂದು ಮಗುವಿದೆ, ಅದಕ್ಕೆ ಕಾಲದ ಅರಿವಿಲ್ಲ. ಅದಕ್ಕೆ ಹಗಲು ರಾತ್ರಿ ˌ ಬೆಳಕು ಕತ್ತಲಿನ ಅರಿವಿರುವುದಿಲ್ಲ. ಯಾಕೆಂದ್ರೆ ಅಲ್ಲಿ ಮಗುವಿದೆ ಆದರೆ ಮಗುವಿಗೆ ಆಲೋಚನೆ ಇಲ್ಲದೆ ಇರುವುದರಿಂದ ಕಾಲದ ಅನುಭವವಾಗುವುದಿಲ್ಲ. ನಮ್ಮೆಲ್ಲ ಆಲೋಚನೆಗಳು ಚಲನೆಯ ಮೂಲವಾಗಿದೆ. ನಾವು ಆಲೋಚನೆಯಿಲ್ಲದೆ ಚಲಿಸಲಾಗುವುದಿಲ್ಲ. ನಾವು ಆಲೋಚನೆಯ ಮೂಲಕವೇ ಚಲಿಸಬೇಕಾಗುತ್ತದೆ.

ಚಲನೆಗೆ ಕಾರಣವಾದ ಈ ಆಲೋಚನೆಗಳೇ ಇಲ್ಲವಾದ ಮೇಲೆ ನಿಮಗೆ ಕಾಲತೀತ ಅನುಭವವಾಗುವದು. ದೇಶ ವೆಂದರೇನು? ಇದರಿಂದ ಅತೀತವಾಗುವುದು ಹೇಗೆ? ದೇಶವೆಂದರೆ ಸ್ಥಳ. ಸ್ಪೇಸ್ . ಈ ಭೂಮಿಯೆಲ್ಲ ಇರುವದು ಈ ಸ್ಪೇಸ್ ಕೆಳಗಡೆ. ಇಲ್ಲಿ ಏನೇ ಚಲನೆಯಾಗಬೇಕಾದರು ಸ್ಥಳಬೇಕು. ಸ್ಥಳವಿಲ್ಲದೆ ಇದ್ದರೆ ಏನೂ ಚಲಿಸಲಾಗದು. ಸ್ಪೇಸ್ ಅಂದರೇ ಖಾಲಿತನ. ಖಾಲಿತನವಿದ್ದಲ್ಲಿ ಮಾತ್ರ ಪ್ರತಿಯೊಂದೂ ಚಲಿಸುವದು ಸ್ಪಷ್ಟವಾಗಿ ಕಾಣುವದು.

ನಾವು ಆವರಣಗಳನ್ನು ˌ ಗೋಡೆಗಳನ್ನು ನಿರ್ಮಿಸಿಕೊಳ್ಳುತ್ತೇವೆ. ನಾವು ಆವರಣದೊಳಗೆ ಗುರುತಿಸಿಕೊಳ್ಳುತ್ತೇವೆ. ಗೋಡೆಗಳಲ್ಲಿ ವಾಸ ಮಾಡುತ್ತೆವೆಯೆಂದು ಕೊಳ್ಳುತ್ತೆವೆ. ನಾವು ಗೋಡೆಯೊಳಗೆ ವಾಸವಾಗುವುದಿಲ್ಲ. ಖಾಲಿ ಸ್ಥಳದಲ್ಲಿರುತ್ತೆವೆ. ಗೋಡೆಯು ಖಾಲಿಯಾದ ಸ್ಥಳದಲ್ಲಿದೆ. ಗೋಡೆಗು ಮುಂಚೆಯು ಅಲ್ಲಿ ಖಾಲಿ ಸ್ಥಳವಿತ್ತು ˌ ಗೋಡೆಯಿದ್ದಾಗಲೂ ಅಲ್ಲಿ ಸ್ಥಳವಿದೆ. ಯಾವಗಲೂ ಇರುತ್ತದೆ ಕೂಡ. ಇಲ್ಲಿ ಖಾಲಿತನ ನಮಗೆ ಕಾಣುವುದಿಲ್ಲ. ನಾವು ನಿರ್ಮಿಸಿಕೊಂಡ ಗೋಡೆಗಳು ಅಡ್ಡವಾಗಿವೆ. ಗೋಡೆಗಳೊಂದಿಗೆ ಗುರುತಿಸಿಕೊಂಡಿದ್ದೆವೆ. “ನನ್ನ” ಗೋಡೆಗಳು ಇರುವುದರಿಂದ “ಖಾಲಿತನ” ತಿಳಿಯುವುದಿಲ್ಲ. ನಮಗೆ ಕಾಲ ಮತ್ತು ದೇಶದ ದರ್ಶನ ಯಾಕೆ ಆಗುವುದಿಲ್ಲ ಗೊತ್ತೆ? ನಮ್ಮ ಚಲನೆ ( ಆಲೋಚನೆಗಳು) ಏಷ್ಟೊಂದು ವೇಗವಾಗಿದೆಯೆಂದರೆ, ಒಂದು ಸಣ್ಣ ಕೂದಲೇಳೆಯಷ್ಟು ಖಾಲಿ ಸ್ಪೇಸ್ ಕೂಡ ಕಾಣುವುದಿಲ್ಲ. ಹೀಗಾಗಿ ಖಾಲಿತನ ನಮ್ಮ ಅನುಭವಕ್ಕೆ ಬರುವುದಿಲ್ಲ. ಒಂದು ಆಲೋಚನೆಯಿಂದ ಇನ್ನೊಂದು ಆಲೋಚನೆ ಆ ಖಾಲಿತನವನ್ನು ಅತಿ ವೇಗವಾಗಿ occupy ಅಥವ ಆಕ್ರಮಿಸಿ ಬೀಡುತ್ತವೆ. ಹೀಗಾಗಿ ನಮ್ಮ ಅತಿ ವೇಗದ ಆಲೋಚನೆಗಳಿಂದ ದೇಶ ಮತ್ತು ಕಾಲದ ಅನುಭವವಾಗುವುದಿಲ್ಲ.

ಸೂಕ್ಪ್ಮ ಶರೀರ ಯಾನವೆಂದರೇನು? ಅದು ಹೇಗೆ ಸಾಧ್ಯ? ಅದರಿಂದ ಏನೂ ಲಾಭ? ಇದನ್ನು ಮುಂದಿನ ಭಾಗದಲ್ಲಿ ನೊಡೋಣ…

(ಮುಂದುವರಿಯುವುದು…)

 

Leave a Reply