ನಾರದರು ಹೇಳಿದ ಆದರ್ಶ ವ್ಯಕ್ತಿಯ 16 ಗುಣಗಳು : ನಿಮ್ಮಲ್ಲಿ ಎಷ್ಟಿವೆ?


ನಾರದರು ಆದರ್ಶ ವ್ಯಕ್ತಿಯೆಂದು ಕರೆಸಿಕೊಳ್ಳಲು ವ್ಯಕ್ತಿಯು ಹೊಂದಿರಬೇಕಾದ 16 ಗುಣಗಳನ್ನು ಹೀಗೆ ತಿಳಿಸಿದ್ದಾರೆ:

1. ಗುಣವಾನ್ – ನೀತಿವಂತರು
2. ವೀರ್ಯವಾನ್- ಶೂರರು
3. ಧರ್ಮಜ್ಞ – ಧರ್ಮವನ್ನು ತಿಳಿದವರು
4. ಕೃತಜ್ಞ – ಮಾಡಿದ ಸಹಾಯ/ಉಪಕಾರವನ್ನು ನೆನಪಿನಲ್ಲಿಟ್ಟುಕೊಳ್ಳುವವರು
5. ಸತ್ಯವಾಕ್ಯ – ಸತ್ಯವನ್ನು ನುಡಿಯುವವರು
6. ಧೃಡವೃತ – ದೃಢ ನಿಶ್ಚಯ ಹೊಂದಿದವರು
7. ಚರಿತ್ರವಾನ್ – ಒಳ್ಳೆಯ ನಡತೆಯುಳ್ಳವರು
8. ಸರ್ವಭೂತಹಿತ – ಎಲ್ಲ ಜೀವಿಗಳ ಹಿತವನ್ನು ಬಯಸುವವರು
9. ವಿದ್ವಾನ್ – ಎಲ್ಲ ವಿದ್ಯೆಗಳನ್ನು ಬಲ್ಲವರು
10. ಸಮರ್ಥ – ಸಾಮರ್ಥ್ಯವುಳ್ಳವರು
11. ಸದೈಕ ಪ್ರಿಯದರ್ಶನ – ಕಣ್ಣಿಗೆ ಹಿತವಾದುದನ್ನೆ ಸದಾ ನೋಡಬಯಸುವವರು (ಕೆಡುಕನ್ನು ಹುಡುಕದವರು)
12. ಆತ್ಮವಂತ – ಧೈರ್ಯಸ್ಥರು
13. ಜಿತಕ್ರೋಧ – ಕೋಪವನ್ನು ಗೆದ್ದವರು
14. ದ್ಯುತಿಮಾನ್ – ಕಾಂತಿಯುಳ್ಳವರು
15. ಅನಸೂಯಕ – ಅಸೂಯೆ ಇಲ್ಲದವರು
16. ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ – ಯಾರ ಕೋಪಕ್ಕೆ ದೇವತೆಗಳೂ ಹೆದರುವರೋ ಅಂಥವರು

ನಾರದರು ಪಟ್ಟಿ ಮಾಡಿರುವ ಈ ಹದಿನಾರು ಗುಣಗಳಲ್ಲಿ ನಿಮ್ಮಲ್ಲಿ ಎಷ್ಟು ಗುಣಗಳಿವೆ? ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಿಕೊಳ್ಳಿ. 16ಕ್ಕೆ 16 ಗುಣಗಳೂ ನಿಮ್ಮಲ್ಲಿದ್ದರೆ ನಿಮ್ಮದು ಆದರ್ಶ ವ್ಯಕ್ತಿತ್ವ. 10/16 ಆದರೆ ನೀವು ಸಜ್ಜನರು. 6/10 ಆದರೆ ನೀವು ಸಾಧಾರಣ ವ್ಯಕ್ತಿ. 2/16 ಅಥವಾ ಅದಕ್ಕಿಂತ ಕಡಿಮೆ ಬಂದರೆ; ಚಿಂತೆ ಬೇಡ. ಬದುಕು ದೊಡ್ಡದಿದೆ. ನೀವು ಈ ಗುಣಗಳನ್ನು ಮೈಗೂಡಿಸಿಕೊಳ್ಳಲು ಇನ್ನೂ ಸಮಯವಿದೆ; ಪ್ರಯತ್ನಿಸಿ.
ನೆನಪಿಡಿ. ಯಾರೂ ಅಧಮರಲ್ಲ. ಯಾರೂ ದುಷ್ಟರಲ್ಲ. ಮೂಲತಃ ಯಾರೂ ಕೆಟ್ಟವರಲ್ಲ. ನಿಮ್ಮ ನೈಜ ಗುಣ ಸದ್ಗುಣ. ನಿಮ್ಮ ನೈಜ ವ್ಯಕ್ತಿತ್ವ ಕುಂದಿಲ್ಲದ ವ್ಯಕ್ತಿತ್ವ. ಏಕೆಂದರೆ, ನಾವೂ – ನೀವೂ ಪರಮ ಅಸ್ತಿತ್ವದ ಪ್ರತಿಬಿಂಬಗಳು. ಪರಮ ಅಸ್ತಿತ್ವದಲ್ಲಿ ಚ್ಯುತಿ ಇರಲು ಸಾಧ್ಯವೇ ಇಲ್ಲ.

ಆದ್ದರಿಂದ, ಉತ್ತಮ ವ್ಯಕ್ತಿಗಳಲ್ಲಿ ಏನೆಲ್ಲ ಗುಣಗಳಿರುತ್ತವೆ ಎಂಬುದನ್ನು ಅರಿತು, ಸಾಧ್ಯವಾದಷ್ಟೂ ಅಳವಡಿಸಿಕೊಳ್ಳಲು ಪ್ರಯತ್ನಿಸಿ.

Leave a Reply