“ರಾಷ್ಟ್ರದ ಉದ್ದಾರವಾಗಬೇಕೆಂದರೆ, ರಾಷ್ಟ್ರಕಲ್ಯಾಣವಾಗಬೇಕೆಂದರೆ, ನಾವೆಲ್ಲರೂ ಸೌಹಾರ್ದತೆಯಿಂದ ಬಾಳಬೇಕು; ಸಂಘಟಿತ ಪ್ರಯತ್ನ ನಡೆಸಬೇಕು; ಹಾಗೂ ಸಂಕುಚಿತ ಮನಸ್ಥಿತಿಯನ್ನು ತೊರೆದು ವಿಶ್ವದೃಷ್ಟಿಯನ್ನು ಬೆಳೆಸಿಕೊಳ್ಳಬೇಕು” ಅನ್ನುತ್ತದೆ ಋಗ್ವೇದ.
ಆ ಯದ್ ವಾಮೀಯ ಚಕ್ಷಸಾ ಮಿತ್ರ ವಯಂ ಚ ಸೂರಯಃ |
ವ್ಯಚಿಷ್ಠೇ ಬಹುಪಾಯ್ಯೇ ಯತೇಮಹಿ ಸ್ವರಾಜ್ಯೇ ||
“ವಿಶ್ವದೃಷ್ಟಿ ತಳೆದು ಸೌಹಾರ್ದದಿಂದ ನಾವೆಲ್ಲರೂ ಸಂಘಟಿತರಾಗಿ ನಮ್ಮ ರಾಷ್ಟ್ರದ ಕಲ್ಯಾಣಕ್ಕಾಗಿ ಶ್ರಮಿಸೋಣ”
(ಋಗ್ವೇದ- 5:66:6)