ನಾನು ಇರುವುದೆಲ್ಲಿ, ಅವರು ಮಾಡುವುದೇನು! : ಭಾಗವತದ ಬೋಧನೆ

ಈ ದಿನದ ಸುಭಾಷಿತ, ಭಾಗವತದಿಂದ…

ಅಹಂ ಸರ್ವೇಷು ಭೂತೇಷು ಭೂತಾತ್ಮಾsವಸ್ಥಿತಃ ಸದಾ| ತಂ ಅವಜ್ಞಾಯ ಮಾಂ ಮರ್ತ್ಯಃ ಕುರುತೇsರ್ಚಾ ವಿಡಂಬನಮ್||

ಅರ್ಥ : ನಾನು ಸದಾ ಎಲ್ಲ ಜೀವಿಗಳಲ್ಲಿ, ಎಲ್ಲರ ಆತ್ಮವಾಗಿ ಇರುತ್ತೇನೆ. ಅಲ್ಲಿರುವ ನನ್ನನ್ನು ಅವಮಾನಿಸಿ, ವಿಗ್ರಹವನ್ನೇ ನಾನೆಂದು ಪೂಜಿಸುವ ವಿಡಂಬನೆತೋರುತ್ತಾರೆ.

ನಮ್ಮ ಅಂತರಂಗದಲ್ಲಿ ಆತ್ಮವಾಗಿ ನೆಲೆಸಿರುವ ಭಗವಂತನ ಧ್ಯಾನ ಮಾಡದೆ, ಆರಾಧಿಸದೆ, ಕಲ್ಲು ಅಥವಾ ಮರಮುಟ್ಟುಗಳಿಂದ ಮಾಡಿದ ವಿಗ್ರಹಗಳಲ್ಲಿ ನನ್ನನ್ನು ಆರೋಪಿಸಿ ಪೂಜೆ ಮಾಡುವುದು ವಿಡಂಬನೆಯಂತೆ ಕಾಣುತ್ತದೆ – ಇದು ಭಾಗವತದ ಈ ಶ್ಲೋಕ ಬೋಧಿಸುವ ತಿಳಿವು.,

Leave a Reply