ಪ್ರಯತ್ನದಿಂದ ಸಾಧ್ಯವಾಗದ್ದು ಯಾವುದೂ ಇಲ್ಲ ಅನ್ನುತ್ತದೆ ಈ ಸುಭಾಷಿತ
ದುರ್ಲಭಾನ್ಯಪಿ ಕಾರ್ಯಾಣಿ ಸಿಧ್ಯನ್ತಿ ಪ್ರೋದ್ಯಮೇನ ಹಿ
ಶಿಲಾಪಿ ತನುತಾಂ ಯಾತಿ ಪ್ರಪಾತೇನಾರ್ಣಸೋ ಮುಹುಃ | ಬುದ್ಧಚರಿತ : 26.63
ಅರ್ಥ : ಸತತ ಪ್ರಯತ್ನದಿಂದ ಅಸಾಧ್ಯ ಅನಿಸುವ ಸಂಗತಿಗಳೂ ಸಾಧ್ಯವಾಗಿಬಿಡುತ್ತವೆ .ಎಡೆಬಿಡದೆ ನೀರು ಸುರಿಯುತ್ತಲೇ ಇದ್ದರೆ ಕಗ್ಗಲ್ಲು ಬಂಡೆಯೂ ಪೆಡಸಾಗುತ್ತದೆಯಲ್ಲ, ಹಾಗೇ.