ಇಂದಿನ ಸುಭಾಷಿತ…
ನ ಕಶ್ಚಿತ್ ಕಸ್ಯಚಿತ್ ಮಿತ್ರಂ ನ ಕಶ್ಚಿತ್ ಕಸ್ಯಚಿತ್ ರಿಪುಃ।
ವ್ಯವಹಾರೇಣ ಮಿತ್ರಾಣಿ ಜಾಯಂತೇ ರಿಪವಃ ತಥಾ॥
ಯಾರೂ ಯಾರಿಗೂ ಮಿತ್ರರಲ್ಲ, ಹಾಗೇ ಯಾರೂ ಯಾರ
ಶತ್ರುಗಳೂ ಅಲ್ಲ. ಮಿತ್ರರೂ ಶತ್ರುಗಳೂ ನಮ್ಮ ನಮ್ಮ ವರ್ತನೆ, ವ್ಯವಹಾರಕ್ಕೆ ತಕ್ಕಂತೆ
ಆಗುತ್ತಾರೆ.
ಹುಟ್ಟುತ್ತಲೇ ಯಾರೂ ಯಾರಿಗೂ ಗೆಳೆಯರಲ್ಲ, ಹಾಗೇ ಯಾರೂ ಯಾರ
ಹಗೆಗಳೂ ಅಲ್ಲ. ನಮ್ಮ ನಡತೆಯಿಂದ, ಯಾವುದೋ ವ್ಯವಹಾರ ಕಾರಣದಿಂದ
ಗೆಳೆಯರು ಮತ್ತು ಹಗೆಗಳು ಹುಟ್ಟಿಕೊಳ್ಳುತ್ತಾರೆ. ಆದ್ದರಿಂದ ಮಿತ್ರರ ಮೇಲೆ ಮೋಹವಾಗಲೀ
ಶತ್ರುಗಳ ಮೇಲೆ ದ್ವೇಷವಾಗಲೀ ನಿರರ್ಥಕ. ಗೆಳೆತನ ಹಗೆತನಗಳು ಸಮಯ ಸಂದರ್ಭಕ್ಕೆ ತಕ್ಕಂತೆ
ಬದಲಾಗಲೂ ಬಹುದು. ಆದ್ದರಿಂದ ನಿರ್ಲಿಪ್ತವಾಗಿ ಸಂಬಂಧಗಳನ್ನು ನಿಭಾಯಿಸಬೇಕು ಅನ್ನುವುದು ಈ ಸುಭಾಷಿತದ ಅರ್ಥ.