ಸರ್ವೇಷಾಂ ಸ್ವಸ್ತಿರ್ಭವತು… : ಬೆಳಗಿನ ಹಾರೈಕೆ

ಸರ್ವೇಷಾಂ ಸ್ವಸ್ತಿರ್ಭವತು| ಸರ್ವೇಷಾಂ ಶಾಂತಿರ್ಭವತು| ಸರ್ವೇಷಾಂ ಪೂರ್ಣಂ ಭವತು| ಸರ್ವೇಷಾಂ ಮಂಗಳಂ ಭವತು – ಇದು ಬರಹದಾರಣ್ಯಕ ಉಪನಿಷತ್ತಿನ ಹಾರೈಕೆ. 

ಎಲ್ಲರಿಗೂ ಒಳಿತಾಗಲಿ, ಎಲ್ಲೆಡೆ ಶಾಂತಿ ನೆಲೆಸಲಿ, ಎಲ್ಲವೂ ಪೂರ್ಣತೆಯನ್ನು ಅನುಭವಿಸುವಂತಾಗಲಿ, ಎಲ್ಲರಿಗೂ ಮಂಗಳವಾಗಲಿ ಎಂದು ಇದರ ಅರ್ಥ. ಸಕಲರಿಗೂ ಒಳಿತನ್ನು, ಶುಭವನ್ನು ಹಾರೈಸುವುದರೊಂದಿಗೆ ದಿನಾರಂಭ ಮಾಡುವುದು ಉತ್ತಮ ರೂಢಿ. ನಮ್ಮ ಸಹಜೀವಿಗಳಿಗೆ, ಸೃಷ್ಟಿಯ ಜಡಚೇತನಗಳೆಲ್ಲಕ್ಕೂ ಒಳಿತನ್ನು ಹಾರೈಸುವುದು ಎಂದರೆ ನಮಗೆ ನಾವೇ ಶುಭ ಹಾರೈಸಿಕೊಂಡಂತೆ. 

Leave a Reply