ಈ ದಿನದ ಸುಭಾಷಿತ…
ಕಾಷ್ಠಾದಗ್ನಿರ್ಜಾಯತೇ ಮಥ್ಯಮಾನಾತ್
ಭೂಮಿಸ್ತೋಯಂ ಖನ್ಯಮಾನಾ ದದಾತಿ |ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ ಮಾರ್ಗಾರಬ್ಧಾಃ ಸರ್ವಯತ್ನಾಃ ಫಲಂತಿ || (ಪ್ರತಿಜ್ಞಾಯೌಗಂಧರಾಯಣ)
ಅರ್ಥ:
ಮರದ ತುಂಡುಗಳನ್ನು ಕಡೆದರೆ ಬೆಂಕಿಯು ಉತ್ಪತ್ತಿಯಾಗುತ್ತದೆ. ಭೂಮಿಯನ್ನು ಆಳದವರೆಗೆ ಅಗೆದರೆ ನೀರು ಲಭಿಸುತ್ತದೆ. ಉತ್ಸಾಹದಿಂದ ಕೆಲಸ ಮಾಡುವ ಯಾವ ಮನುಷ್ಯನಿಗೂ “ಅಸಾಧ್ಯ” ಎನ್ನುವ ಯಾವುದೂ ಇಲ್ಲ. ಸರಿಯಾದ ರೀತಿಯಲ್ಲಿ ಆರಂಭಿಸಿದ ಎಲ್ಲ ಕೆಲಸಗಳೂ ಫಲ ನೀಡುತ್ತವೆ