ಮೂರ್ಖರನ್ನು ತಿದ್ದುವ ಕಷ್ಟ! : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಭರ್ತೃಹರಿಯ ನೀತಿ ಶತಕದಿಂದ…

ಲಭೇತ  ಸಿಕತಾಸು ತೈಲಮಪಿ ಯತ್ನತಃ ಪೀಡಯನ್ |
ಪಿಬೇಚ್ಚ ಮೃಗತೃಷ್ಣಿಕಾಸು ಸಲಿಲಂ ಪಿಪಾಸಾರ್ದಿತಃ ||
ಕದಾಚಿದಪಿ ಪರ್ಯಟನ್ ಶಶವಿಷಾಣಮಾಸಾಯದೇತ್ |
ನ ತು ಪ್ರತಿನಿವಿಷ್ಟ ಮೂರ್ಖಜನಚಿತ್ತಮಾರಾಧಯೇತ್ ||

ಶ್ರಮಪಟ್ಟರೆ ಉಸುಕನ್ನಾದರೂ ಹಿಂಡಿ ಎಣ್ಣೆ ತೆಗೆಯಬಹುದು; ಮರೀಚಿಕೆಯಿಂದಲಾದರೂ ನೀರನ್ನು ಕುಡಿಯಬಹುದು; ತಿರುತಿರುಗಿ ಹುಡುಕಿ ಮೊಲದಲ್ಲಿ ಕೋಡು ಕಂಡು, ಅದನ್ನೂ ಕೀಳಬಹುದು;
ಆದರೆ (ತಮ್ಮ ನಂಬಿಕೆಯೇ ಸರಿಯೆಂದು)ಹಠ ಸಾಧಿಸುವ ಮೂರ್ಖರನ್ನು ತಿದ್ದುವುದು ಮಾತ್ರ ಅಸಾಧ್ಯ ವಿಷಯ!

Leave a Reply