ಧರ್ಮ ಅಂದರೇನು? : ಇಂದಿನ ಸುಭಾಷಿತ

ಧರ್ಮ ಅಂದರೆ ಆಚರಣೆ. ಯಾವುದರ ಆಚರಣೆ? ಈ ಸುಭಾಷಿತ ನೋಡಿ…

ಅಹಿಂಸಾ ಸತ್ಯವಚನಂ ಸರ್ವಭೂತಾನುಕಂಪನಂ । 
ಶಮೋದಾನಂ ಯಥಾಶಕ್ತಿ ಗಾರ್ಹಸ್ಥೋ ಧರ್ಮ ಉಚ್ಯತೇ ॥

ಅರ್ಥ: ಅಹಿಂಸೆ, ಸತ್ಯವನ್ನೇ ನುಡಿಯುವುದು, ಎಲ್ಲ ಪ್ರಾಣಿಗಳಲ್ಲಿಯೂ ದಯೆ, ಶಾಂತಿ, ಶಕ್ತಿಯಿದ್ದಷ್ಟು ದಾನ – ಇವನ್ನು ನಡೆಸುವುದೇ ಸಂಸಾರಿಗಳ ಪಾಲಿನ ಧರ್ಮವಾಗಿದೆ.

ತಾತ್ಪರ್ಯ: ಧರ್ಮ ಅಂದರೆ ಸಂಕೇತಗಳಲ್ಲ, ಢಂಬಾಚಾರವಲ್ಲ, ಮೇಲರಿಮೆಯಲ್ಲ, ಗುಂಪುಗಾರಿಕೆಯಲ್ಲ, ದೇಗುಲ – ಮಂದಿರಗಳಲ್ಲಾಗಲೀ ಶಾಸ್ತ್ರ ಗ್ರಂಥಗಳಲ್ಲಾಗಲೀ ಅಡಗಿ ಕುಳಿತ ಸಂಗತಿಯಲ್ಲ. ಧರ್ಮ ಅಂದರೆ ಆಚರಣೆ. ಯಾವುದರ ಆಚರಣೆ? ಅಹಿಂಸೆ, ಸತ್ಯ ದಯೆ, ಶಾಂತಿ ಮತ್ತು ದಾನಗಳ ಆಚರಣೆ. ಇಂಥಾ ಧರ್ಮವನ್ನು ಪಾಲಿಸುವುದು ಪ್ರತಿಯೊಬ್ಬ ಸಂಸಾರಿಯ ಕರ್ತವ್ಯ ಅನ್ನುತ್ತದೆ

Leave a Reply