ಕ್ಷಮೆಯೆಂಬ ಆಯುಧವಿದ್ದರೆ… : ಇಂದಿನ ಸುಭಾಷಿತ

ಇಂದಿನ ಸುಭಾಷಿತ…

ಕ್ಷಮಾ ಶಸ್ತ್ರಮ್ ಕರೇ ಯಸ್ಯ ದುರ್ಜನಃ ಹಿಂ ಕರಿಷ್ಯತಿ
ಅತೃಣೋ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತೇ॥

ಅರ್ಥ: ಕ್ಷಮೆಯನ್ನು ಅಪ್ತವಾಗಿ ಹೊಂದಿದವರನ್ನು ದುರ್ಜನರು ಏನು ತಾನೆ ಮಾಡಬಲ್ಲರು? ಅತೃಣದ (ಅಗ್ನಿ ನಿರೋಧಕ ವಸ್ತುವಿನ) ಮೇಲೆ
ಬಿದ್ದ ಬೆಂಕಿ ತಾನಾಗಿಯೇ ಆರಿ ಹೋಗುವಂತೆ ಅವರೂ ಪ್ರಯತ್ನಿಸಿ ಸುಮ್ಮನಾಗುವರು.

ನಾವು ಕೆರಳಿದರೆ, ಆ ಕ್ಷಣದಲ್ಲೇ ಅರ್ಧದಷ್ಟು ಸೋತಿರುತ್ತೇವೆ. ನಮ್ಮನ್ನು ಸೋಲಿಸಲೆಂದೇ ಕಾಯುವ ಎದುರಾಳಿಗಳೂ ಅರ್ಧ ಗೆದ್ದುಬಿಡುತ್ತಾರೆ. ಆದ್ದರಿಂದ ಕೆರಳದೆ ಕ್ಷಮಿಸುವ ರೂಢಿ ಮೇಲ್ನೋಟಕ್ಕಲ್ಲ, ಅಂತರಂಗದಲ್ಲೂ ಮಾಡಿಕೊಳ್ಳಬೇಕು. ಕ್ಷಮಿಸುವುದೆಂದರೆ ರಾಜಿಯೂ ಅಲ್ಲ, ಹಿಂಜರಿಕೆಯೂ ಅಲ್ಲ, ಕ್ಷಮಿಸುವುದು ನಮ್ಮ ಧೀರತನ ಅನ್ನುವ ಅರಿವು ಇರಬೇಕು.


Leave a Reply