ನಮ್ಮ ಕರ್ಮವೇ ನಮ್ಮ ಗುರುತು : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಮಹಾಭಾರತದ ಅನುಶಾಸನ ಪರ್ವದಿಂದ…

ಯಥಾ ಮೃತ್ಪಿಂಡತಃ ಕರ್ತಾ ಕುರುತೇ ಯದ್ ಯದಿಚ್ಛತಿ| 
ಏವಮಾತ್ಮಕೃತಂ ಕರ್ಮ ಮಾನವಃ ಪ್ರತಿಪದ್ಯತೇ || ಮಹಾಭಾರತ | ಅನುಶಾಸನ ಪರ್ವ 1.74||

ಅರ್ಥ: ಕುಂಬಾರ ಹೇಗೆ ಮಣ್ಣಿನ ಮುದ್ದೆಯನ್ನು ತನಗೆ ಬೇಕುಬೇಕಾದ ಆಕಾರಕ್ಕೆ ತರುತ್ತಾನೋ, ಹಾಗೆಯೇ ನಾವು ನಮ್ಮ ಕರ್ಮಗಳಿಂದ ನಮ್ಮನ್ನು ರೂಪಿಸಿಕೊಳ್ಳಬೇಕು.
ತಾತ್ಪರ್ಯ: ಹೇಗೆ ಎಲ್ಲ ಮಣ್ಣಿನ ಪಾತ್ರೆಗಳೂ (ಮಡಿಕೆ, ಕುಡಿಕೆ, ಕುಂಡ ಇತ್ಯಾದಿ...) ಮೂಲತಃ ಒಂದೇ ಮಣ್ಣಿನಿಂದ ಮೂಲತಃ ನಾವೆಲ್ಲರೂ ಒಂದೇ ಆತ್ಮದಿಂದ ಸೃಷ್ಟಿಯಾದವರು. ಹೇಗೆ ಆಕಾರ ಮತ್ತು ಗಾತ್ರಕ್ಕೆ ತಕ್ಕಂತೆ ಮಣ್ಣಿನ ಪಾತ್ರೆ ಹೆಸರು, ಗುರುತು ಮತ್ತು ಉಪಯುಕ್ತತೆ ಪಡೆದುಕೊಳ್ಳುತ್ತದೆಯೋ, ಹಾಗೆಯೇ ನಾವೂ ನಮ್ಮ ಕರ್ಮಗಳಿಂದ (ಕೆಲಸ ಕಾರ್ಯಗಳಿಂದ) ನಮ್ಮ ಗುರುತು ಪಡೆಯುತ್ತೇವೆ

Leave a Reply