ಬದುಕಿನಲ್ಲಿ ಭಾವನೆಗಳ ಪಾತ್ರ ಏನು? : ಜಿಡ್ಡು ಕಂಡ ಹಾಗೆ…

ನಮ್ಮ ಬದುಕಿನಲ್ಲಿ ಭಾವನೆಗಳ ಪಾತ್ರ ಏನು ? ಭಾವನೆಗಳೇ ಬದುಕಾ ? ನಿಮಗೆ ಅರ್ಥ ಆಗ್ತಾ ಇದೆ ಅಲ್ವಾ? ಸುಖವನ್ನೇ ಪ್ರೇಮ ಅನ್ನಬಹುದಾ? ಬಯಕೆಗಳನ್ನೇ ಪ್ರೇಮ ಎಂದು ಕರೆಯಬಹುದಾ? ಭಾವನೆಯನ್ನೇ ಪ್ರೇಮ ಎನ್ನಬಹುದಾದರೆ ಕಾಲಕಾಲಕ್ಕೆ ಅವು ಬದಲಾಗುವುದು ನಿಮಗೆ ಗೊತ್ತಿಲ್ಲವೆ? ಈ ಎಲ್ಲದರ ಮಾಹಿತಿ ನಿಮಗೆ ಗೊತ್ತಿಲ್ಲವೆ? ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ: ಚಿದಂಬರ ನರೇಂದ್ರ

ಭಾವನೆಗಳು ಹುಟ್ಚುವುದಾದದರೂ ಹೇಗೆ? ಇದಕ್ಕೆ ಉತ್ತರ ತುಂಬ ಸರಳ. ಪ್ರಚೋದನೆ ಕಾರಣವಾಗಿ ನರಗಳ ಮೂಲಕವಾಗಿ ಭಾವನೆಗಳ ಹುಟ್ಟು. ನೀವು ಒಂದು ಗುಂಡು ಸೂಜಿ ಚುಚ್ಚಿದರೆ ನಾನು ಚೀರುತ್ತೇನೆ. ; ನೀವು ಹೊಗಳಿದರೆ ನನಗೆ ಖುಶಿ ; ನೀವು ಅಪಮಾನ ಮಾಡಿದರೆ ನಾನು ಸಿಟ್ಟಾಗುತ್ತೇನೆ. ನಮ್ಮ ಇಂದ್ರಿಯಗಳ ಮೂಲಕ ಭಾವಗಳು ಅಸ್ತಿತ್ವಕ್ಕೆ ಬರುತ್ತವೆ. ಮತ್ತು ಬಹುತೇಕ ನಾವು ನಮ್ಮ ಭಾವನೆಗಳ ಮೂಲಕ ವ್ಯವಹಾರ ಮಾಡುತ್ತೇವೆ.

ಹೌದು ನೀವು ನಿಮ್ಮನ್ನ ಹಿಂದೂ ಎಂದು ಗುರುತಿಸಿಕೊಳ್ಳಲು ಇಷ್ಚಪಡುತ್ತೀರಿ. ಆಗ ನೀವು ಒಂದು ಗುಂಪಿಗೆ, ಒಂದು ಸಮುದಾಯಕ್ಕೆ, ಒಂದು ಸಂಪ್ರದಾಯಕ್ಕೆ ಸೇರಿಕೊಳ್ಳುತ್ತೀರಿ. ಒಮ್ಮೆ ಒಪ್ಪಿಕೊಂಡಮೇಲೆ ಅದು ಎಷ್ಟು ಹಳೆಯದಾಗಿದ್ದರೂ ಅದನ್ನು ಸಮರ್ಥಿಸಿಕೊಳ್ಳಲು ನೀವು ಕಾರಣ ಹುಡುಕುತ್ತೀರಿ. ಅದೇ ರೀತಿ ಮುಸ್ಲೀಂರೂ ಕ್ರೈಸ್ತರೂ ಸಹ. ನಮ್ಮ ಭಾವನೆಗಳು ಹುಟ್ಟಿರುವುದು ಈ ಪ್ರಚೋದನೆಯಿಂದ, ನಮ್ಮ ಈ ಪರಿಸರದ ಕಾರಣವಾಗಿ.

ನಮ್ಮ ಬದುಕಿನಲ್ಲಿ ಭಾವನೆಗಳ ಪಾತ್ರ ಏನು ? ಭಾವನೆಗಳೇ ಬದುಕಾ ? ನಿಮಗೆ ಅರ್ಥ ಆಗ್ತಾ ಇದೆ ಅಲ್ವಾ? ಸುಖವನ್ನೇ ಪ್ರೇಮ ಅನ್ನಬಹುದಾ? ಬಯಕೆಗಳನ್ನೇ ಪ್ರೇಮ ಎಂದು ಕರೆಯಬಹುದಾ? ಭಾವನೆಯನ್ನೇ ಪ್ರೇಮ ಎನ್ನಬಹುದಾದರೆ ಕಾಲಕಾಲಕ್ಕೆ ಅವು ಬದಲಾಗುವುದು ನಿಮಗೆ ಗೊತ್ತಿಲ್ಲವೆ? ಈ ಎಲ್ಲದರ ಮಾಹಿತಿ ನಿಮಗೆ ಗೊತ್ತಿಲ್ಲವೆ?

…….. ಹಾಗಾಗಿ ನಾವು ಪ್ರತಿಯೊಬ್ಬರು ಅರಿತುಕೊಳ್ಳಬೇಕಾದದ್ದು ಏನೆಂದರೆ ಭಾವನೆಗಳು, ಸೆಂಟಿಮೆಂಟ್ ಗಳು, ಉತ್ಸಾಹ, ಸುಖವಾಗಿರುವ ಅನಿಸಿಕೆ ಈ ಎಲ್ಲಕ್ಕೂ ನಿಜದ ಅಂತಃಕರಣ, ಪ್ರೀತಿಗೂ ಯಾವ ಸಂಬಂಧವಿಲ್ಲ. ಎಲ್ಲ ಸೆಂಟಿಮೆಂಟ್ ಗಳು, ಭಾವನೆಗಳು, ಆಲೋಚನೆಗೆ (thought) ಸಂಬಂಧಪಟ್ಚವು ಹಾಗಾಗಿ ನಿಮ್ಮ ನೋವು ನಲಿವುಗಳಿಗೆ ಕಾರಣಗಳು.

ಪ್ರೀತಿಯಲ್ಲಿ ಯಾವ ನೋವು , ಯಾವ ದುಗಡಕ್ಕೆ ಜಾಗವಿಲ್ಲ ಏಕೆಂದರೆ ಪ್ರೀತಿ, ಸುಖ ಅಥವಾ ಬಯಕೆಗಳ ಕಾರಣವಾಗಿ ಹುಟ್ಟಿದ್ದಲ್ಲ.

Leave a Reply