ಇರುವುದು ಇಲ್ಲವಾಗುವುದಿಲ್ಲ… : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಭಗವದ್ಗೀತೆಯಿಂದ…

ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ | ಉಭಯೋರಪಿ ದೃಷ್ಟೋಂsತಃ ತ್ವನಯೋಸ್ತತ್ವ ದರ್ಶಭಿಃ || 2:16||

ಇಲ್ಲದಿರುವ (ಅಸತ್ತು) ವಸ್ತುವು ಹುಟ್ಟಲಾರದು (ಭಾವ – ಇರುವಿಕೆ, ತೋರಿಕೊಳ್ಳುವಿಕೆ ನ – ಇರಲಾರದು); ಇರುವುದು (ಸತ್ – ಇದೆ. ಇದೆ ಎನ್ನುವುದು ನಾಶವಾಗಲಾರದು) ಇಲ್ಲದಂತಾಗಲಾರದು. ಇದು ತತ್ವವನ್ನು ಅರಿತವರ ಮತ.

ಆತ್ಮ ಅಥವಾ ಪರಬ್ರಹ್ಮ ವಸ್ತು ಇದೆ ಎನ್ನುವುದಕ್ಕೆ ಬೇರೆ ತರ್ಕ ಇಲ್ಲ. “ನಾನು ಇದ್ದೇನೆ” ಎಂಬ ಭಾವ ಇಲ್ಲದ್ದರಿಂದ ಹುಟ್ಟಲಾರದು- ಎಲ್ಲಾ ಉಪಾಧಿಗಳನ್ನು ತೆಗೆದಾಗ ಉಳಿಯುವುದೇ ‘ಇದ್ದೇನೆ’ ಎನ್ನುವ ‘ಬ್ರಹ್ಮ’ ತತ್ವ, ಆದ್ದರಿಂದ ಈ ಹೇಳಿಕೆ ತರ್ಕಕ್ಕೆ ಮೀರಿದ ಮೂಲ ತತ್ವ.

“ಇಲ್ಲದಿರುವ ವಸ್ತುವೇ ಇಲ್ಲ. ಮತ್ತು ಇರುವುದು ಇಲ್ಲವಾಗುವುದಿಲ್ಲ” ಇದು ಈ ಗೀತಾ ಬೋಧೆಯ ಸರಳಾರ್ಥ.

Leave a Reply